Advertisement

ಇಲ್ಲೇ ನೋಡಿ, ಬಾಹುಬಲಿ!

11:23 AM Jan 27, 2018 | Team Udayavani |

ಮಹಾ ಮಸ್ತಕಾಭಿಷೇಕದ ವೈಭವವನ್ನು ಕಣ್ತುಂಬಿಕೊಳ್ಳಲು ಆಗದವರಿಗೆ, ಬೆಂಗಳೂರಿನಲ್ಲೇ ಆ ಸೊಬಗನ್ನು ನೋಡುವ ಅವಕಾಶವಿದೆ. ಎಲ್ಲಿ ಅಂತೀರಾ, ಮತ್ತೆಲ್ಲಿ ಲಾಲ್‌ಬಾಗ್‌ನಲ್ಲಿ! ಈ ಬಾರಿಯ ಗಣರಾಜ್ಯೋತ್ಸವದ ಪುಷ್ಪ ಪ್ರದರ್ಶನದಲ್ಲಿ ಶ್ರವಣಬೆಳಗೊಳದ ವೈಭವ ಅನಾವರಣಗೊಂಡಿರುವುದು ಗೊತ್ತೇ ಇದೆ.

Advertisement

ಫೈಬರ್‌ನಲ್ಲಿ ನಿರ್ಮಿಸಲ್ಪಟ್ಟ, ಸುಮಾರು 15 ಅಡಿ ಎತ್ತರದ ಬಾಹುಬಲಿ ನಿಮಗೆ ಗೊಮ್ಮಟಗಿರಿಯನ್ನು ನೆನಪಿಸುವುದಲ್ಲದೆ, ಭರತ- ಬಾಹುಬಲಿಯರ ನಡುವಿನ ಯುದ್ಧದ ಸನ್ನಿವೇಶಗಳನ್ನು ಕಟ್ಟಿ ಕೊಡಲಾಗಿದೆ. ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧ, ಚಕ್ರಪ್ರಯೋಗ, ನಂತರ ವಿರಾಗಿಯಾಗಿ ನಿಲ್ಲುವ ಬಾಹುಬಲಿಯ ಕಲಾಕೃತಿಗಳನ್ನು ಫೈಬರ್‌ನಿಂದ ನಿರ್ಮಿಸಲಾಗಿದೆ. ಈಗಾಗಲೇ ಲಕ್ಷಾಂತರ ಜನ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದಾರೆ. ಮತ್ತೇಕೆ ತಡ, ನೀವೂ ಬನ್ನಿ. 

ಎಲ್ಲಿ?: ಲಾಲ್‌ಬಾಗ್‌ ಉದ್ಯಾನ
ಯಾವಾಗ?: ಜ.27-28 ಶನಿ-ಭಾನುವಾರ

Advertisement

Udayavani is now on Telegram. Click here to join our channel and stay updated with the latest news.

Next