ಮೈಸೂರು: ಉಪ ಚುನಾವಣೆ ಸಂದರ್ಭದಲ್ಲಾದರೂ ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳ ಜನತೆಗೆ ರಾಜ್ಯದ ಮಂತ್ರಿಗಳನ್ನೆಲ್ಲ ನೋಡುವ ಭಾಗ್ಯವನ್ನು ಸಿದ್ದರಾಮಯ್ಯ ಕರುಣಿಸಿದ್ದಾರೆ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಕಳಲೆ ಗ್ರಾಮದಲ್ಲಿ ಸೋಮ ವಾರ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ ಪ್ರಸಾದ್ ಪರ ಪ್ರಚಾರ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಂಜನಗೂಡು ಮತ್ತು ಗುಂಡ್ಲು ಪೇಟೆ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸಚಿವ ಸಂಪುಟದ ಸದಸ್ಯರನ್ನೆಲ್ಲ ಪ್ರಚಾರಕ್ಕಿಳಿಸುತ್ತಿದ್ದಾರೆ. ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಅಲ್ಲಂ ವೀರಭದ್ರಪ್ಪರಿಗೆ ಚುನಾವಣಾ ಉಸ್ತುವಾರಿ ನೀಡಿದ್ದಾರೆ. ಆದರೆ ಅವರಿಬ್ಬರೂ ಯಾರು ಎಂದು ಇಲ್ಲಿನ ಜನರು ಪ್ರಶ್ನಿಸುತ್ತಿದ್ದಾರೆ. ಕಾಂಗ್ರೆಸ್‌ನ ಮಂತ್ರಿಗಳು ಜನರಿಗೆ ಮುಖ ತೋರಿಸಿಯೇ ಇಲ್ಲ.
ಚುನಾವಣಾ ಪ್ರಚಾರದ ಸಂದರ್ಭದಲ್ಲಾದರೂ ಅವರ ಮುಖವನ್ನು ನೋಡುವಂಥ ಭಾಗ್ಯ ಜನರಿಗೆ ಲಭಿಸಿದೆ. ಇನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ರೈತವಿರೋಧಿ ನಿಲುವಿನಿಂದಾಗಿ ಜನರಿಂದ ದೂರವಾಗಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದವರು ಹಣದ ಚೀಲ ಹಿಡಿದು ಬಂದು ಮತಗಳನ್ನು ಬಾಚಿಕೊಳ್ಳುವ ಹುನ್ನಾರ ನಡೆಸು ತ್ತಿದ್ದಾರೆ. ಆದರೆ ಅವರ ಈ ತಂತ್ರಕ್ಕೆ ಮತದಾರರು ಬಗ್ಗುವುದಿಲ್ಲ ಎಂದರು.
ಕಳಲೆ ಗ್ರಾಮವು ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಸ್ವ ಗ್ರಾಮ ವಾದರೂ ಸಹ ಉಪ ಚುನಾ ವಣೆಯಲ್ಲಿ ಇಲ್ಲಿನ ಮತದಾರರು ಬಿಜೆಪಿ ಅ¸Âರ್ಥಿ ಶ್ರೀನಿವಾಸ ಪ್ರಸಾದ್‌ಗೆ ಮತ ನೀಡಲು ಉತ್ಸುಕರಾಗಿದ್ದಾರೆ. ಇಲ್ಲಿರುವ ಎಲ್ಲಾ ಎಂಟು ಬೂತ್‌ಗಳಲ್ಲೂ ಕಳಂಕರಹಿತ ರಾಜಕೀಯ ನಾಯಕರಾದ ಶ್ರೀನಿವಾಸ ಪ್ರಸಾದ್‌ರನ್ನು ಬೆಂಬಲಿಸಲು ಜನರು ನಿರ್ಧರಿಸಿದ್ದಾರೆ. ಏಕೆಂದರೆ ಕಾಂಗ್ರೆಸ್ ಜನರ ಪ್ರೀತಿ ಗಳಿಸಿಲ್ಲ. ಅದು ಜನವಿರೋಧಿ ಮತ್ತು ರೈತವಿರೋಧಿ ಆಡಳಿತ ನೀಡಿ ಕುಖ್ಯಾತಿ ಪಡೆದಿದೆ ಎಂದು ದೂರಿದರು.
ತಿರುಗೇಟು: ಬಿ.ಎಸ್. ಯಡಿಯೂರಪ್ಪ ಬಸವ ತತ್ವಗಳ ನಿಜವಾದ ಅನುಯಾಯಿ. ತಮ್ಮ ಆಡಳಿತದಲ್ಲೂ ಸಹ ಬಸವಣ್ಣ ನವರ ಆದರ್ಶಗಳನ್ನು ಅಳವಡಿಸಿ ಕೊಂಡಿದ್ದರು. ಆದ್ದರಿಂದಲೇ ಅವರು ಉತ್ತಮ ಆಡಳಿತ ನೀಡುವಂ ತಾಯಿತು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಗುಂಡ್ಲುಪೇಟೆ ಉಪ ಚುನಾವಣಾ ಪ್ರಚಾರ ಸಭೆ ಯೊಂದರಲ್ಲಿ ತಾವು ಹಾಗೂ ಎಚ್.ಎಸ್. ಮಹದೇ ವಪ್ರಸಾದ್ ಮಾತ್ರ ನಿಜವಾದ ವೀರಶೈ ವರು, ಯಡಿಯೂರಪ್ಪ ಚುನಾವಣೆಯ ಸಮಯದಲ್ಲಿ ತಾವು ಲಿಂಗಾಯಿತರು ಎಂದು ಹೇಳಿಕೊಂಡು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.