ಮೊಲಗಳ ಜಾಗೃತ ಮನಸ್ಥಿತಿಗೆ ಉದಾಹರಣೆಯೊಂದು ಇಲ್ಲಿದೆ. ಮೊಲಗಳಿಗೆ ಪರಿಚಿತವಾಗಿರುವ ಯಜಮಾನ ಎದುರಿನಿಂದ ಬಂದರೆ ನಲಿಯುತ್ತಾ ಅವನ ಬಳಿಗೆ ಓಡುತ್ತವೆ. ಆದೇ ಯಜಮಾನ ಹಿಂದಿನಿಂದ ಬಂದರೆ ಶತ್ರು ಬರುತ್ತಿದ್ದಾನೆ ಎಂದುಕೊಂಡು ಓಟ ಕೀಳುತ್ತವೆ. ಹಿಂದಿನಿಂದ ಬರುವವನು ಯಾವತ್ತೂ ಶತ್ರುವಾಗಿರುತ್ತಾನೆ ಎನ್ನುವ ಸತ್ಯ ಅವುಗಳಿಗೂ ತಿಳಿದಿರುವುದು ಸೋಜಿಗ ಅಲ್ಲವೇ?
Advertisement
ಆನೆಗಳ ಸೀಕ್ರೆಟ್ ವಿ.ಐ.ಪಿ ಕೋಡ್ನಮ್ಮಲ್ಲಿ ಕೆಲ ದೇವಸ್ಥಾನಗಳಲ್ಲಿ ವಿ.ಐ.ಪಿ(ಪ್ರಮುಖ ವ್ಯಕ್ತಿ)ಗಳಿಗೆಂದೇ ಪ್ರತ್ಯೇಕ ಸರದಿ ಇರುವುದನ್ನು ಗಮನಿಸಿರಬಹುದು. ಇಷ್ಟೂದ್ದದ ಸರದಿಯಲ್ಲಿ ನಿಂತು ಕಂಟೆಗಟ್ಟಲೆ ವ್ಯಯ ಮಾಡುವುದಕ್ಕೆ ಸಮಯ ಇರುವುದಿಲ್ಲವೆಂಬ ಕಾರಣಕ್ಕೆ ಈ ವ್ಯವಸ್ಥೆ. ವಿದೇಶಗಳಲ್ಲಿ ಆ್ಯಂಬುಲೆನ್ಸ್‌ಗಳಿಗೆಂದೇ ಪ್ರತ್ಯೇಕ ಲೇನುಗಳನ್ನು ಮಾಡಿರುತ್ತಾರೆ. ಕಾರ್ಯಕ್ರಮಗಳಲ್ಲಿ ಮುಂದಿನ ಆಸನಗಳನ್ನು ಪ್ರಮುಖ ವ್ಯಕ್ತಿಗಳಿಗಾಗಿ ಕಾದಿರಿಸಿರುತ್ತಾರೆ. ಒಟ್ಟಿನಲ್ಲಿ ಈ “ಪ್ರತ್ಯೇಕ’ ಅನ್ನುವುದು “ಮುಖ್ಯ’ ಎನ್ನುವುದರ ಜೊತೆ ಅಂಟಿಕೊಂಡಿರುವುದು ಸ್ಪಷ್ಟವಾಗುತ್ತದೆ. ಭೂಮಿ ಮೇಲಿನ ವಿ.ಐ.ಪಿಗಳನ್ನು ಪಟ್ಟಿ ಮಾಡುವುದಾದರೆ ಮೊದಲ ಸ್ಥಾನ ಮನುಷ್ಯನಿಗೆ. ಈ ವಿಚಾರ ಆನೆಗಳಿಗೂ ಗೊತ್ತು. ಅದಕ್ಕೆಂದೇ ಮನುಷ್ಯನಿಗಾಗಿ ಪ್ರತ್ಯೇಕ ಬಗೆಯ àಳನ್ನು ಅವು ಮೀಸಲಿಟ್ಟಿವೆ. ಸೀಕ್ರೆಟ್ ಕೋಡ್ ಥರ! ಪರಿವಾಗಿಲ್ವೇ ಆನೆಗಳಿಗೂ ನಮ್ಮ ಪ್ರಾಮುಖ್ಯತೆ ಗೊತ್ತಾಯಿತಲ್ಲ ಎಂದು ಇಷ್ಟು ಬೇಗ ಖುಷಿಪಡದಿರಿ. ಆನೆಗಳು ನಮ್ಮನ್ನು ಯಾವ ಲೆಕ್ಕದಲ್ಲಿ ವಿ.ಐ.ಪಿ ಎಂದು ಪರಿಗಣಿಸಿವೆ ಎಂದು ಮೊದಲು ತಿಳಿದುಕೊಳ್ಳಿರಿ. ನಮ್ಮನ್ನು ಅವು ಅಪಾಯಕಾರಿ ಎಂದು ಪರಿಗಣಿಸುತ್ತವೆ. ಹೀಗಾಗಿ ಮನುಷ್ಯನನ್ನು ಕಂಡ ಕೂಡಲೆ ವಿಭಿನ್ನ ಬಗೆಯ ಸದ್ದನ್ನು ಹೊರಡಿಸುತ್ತವೆ, ಇತರೆ ಆನೆಗಳು ಎಚ್ಚೆತ್ತುಕೊಳ್ಳಲಿ ಎಂದು.