Advertisement

ಅಯೋಧ್ಯೆಯಿಂದ ಶಬರಿಮಲೆಗೆ ಸುದೀರ್ಘ‌ ಪಾದಯಾತ್ರೆ

12:46 AM Sep 22, 2019 | Sriram |

ಕುಂಬಳೆ : ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಭವ್ಯ ದೇಗುಲ ನಿರ್ಮಾಣ ಗೊಳ್ಳಬೇಕು. ಶ್ರೀ ಶಬರಿಮಲೆ ಸನ್ನಿ ಧಾನಕ್ಕೆ ಮತ್ತು ಆಚಾರಕ್ಕೆ ಯಾವುದೇ ಚ್ಯುತಿ ಬರಬಾರ ದೆಂಬ ಸಂಕಲ್ಪದೊಂದಿಗೆ ಕರಾವಳಿಯ ನಾಲ್ಕು ಮಂದಿ ಅಯ್ಯಪ್ಪ ಭಕ್ತರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಿಂದ ಶ್ರೀ ಶಬರಿಮಲೆ ತನಕ ಒಟ್ಟು ಮೂರು ಸಹಸ್ರ ಕಿ.ಮೀ ಪಾದಯಾತೆಯನ್ನು ಆರಂಭಿಸಿದರು.

Advertisement

ಸೆ. 18ರಂದು ಆರಂಭಗೊಂಡಿರುವ ಪಾದಯಾತ್ರೆಯು ಮೂರು ತಿಂಗಳ ಕಾಲ ಸಾಗಿ ಶವಬರಿಮಲೆ ಸನ್ನಿಧಿ ಸೇರಲಿದೆ.ಮಂಜೇಶ್ವರದ ಹಿರಿಯ ಗುರು ಸ್ವಾಮಿ ರಾಜಪ್ಪ ಸಪಲಿಗ ಕುಪ್ಪೆಪದವು ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಇರುಮುಡಿ ಕಟ್ಟಿ ಚರಣ್‌ ರಾಜ್‌ ಕುಲಶೇಖರ, ಮಿಥುನ್‌ ಚಿತ್ರಪುರ ಹಾಗೂ ಶಶಿಕುಮಾರ್‌ ಕಕ್ಕಿಂಜೆ ಯವರೊಂದಿಗೆ ಸುದೀರ್ಘ‌ ಪುಣ್ಯ ಪಾದಯಾತ್ರೆಯನ್ನು ಕೈಗೊಂಡರು. ಈ ನಾಲ್ವರು ತಪ್ಪಸ್ಸಿನ ಮೂಲಕ ಪಾದಯಾತ್ರೆ ಕೈಗೊಂಡಿರುವ ಸ್ವಾಮಿಗಳನ್ನು ಅಯೋಧ್ಯೆಯ ಶ್ರೀ ಹನುಮಾನ್‌ ಘಡಿ ಮಂದಿರದಿಂದ ಶ್ರೀ ಮಹಂತ ರಾಜದಾಸ್‌ ಸ್ವಾಮೀಜಿಯವರು ಆಶೀರ್ವದಿಸಿ ರಾಷ್ಟ್ರ ಧ್ವಜವನ್ನು ಸ್ವಾಮಿಗಳಿಗೆ ಹಸ್ತಾಂತರಿಸಿ ಬೀಳ್ಕೊ ಟ್ಟರು.

ಈ ಅಪೂರ್ವ ಸಮಾರಂಭದಲ್ಲಿ ಗುಜರಾತಿನ ಬರೋಡದ ಕೋರ್ಪರೇಟರ್‌ನೀಲೇಶ್‌ ರಾವುತ್‌,ಉದ್ಯಮಿಗಳಾದ ಮನೋಹರ ಶೆಟ್ಟಿ,ಮಂಜುನಾಥ ರೈ, ರಾಜ ಕೃಷ್ಣನಗರ ತೊಕೋಟು,ಬಿಜೆಪಿ ನಾಯಕ ಹರಿಶಚ್ಚಂದ್ರ ಮಂಜೇಶ್ವರ,ರಾ.ಸ. ಸಂಘದ ಮಂಗಳೂರು ನಗರಪಾಲಿಕೆಯ ಪ್ರಮುಖ್‌ ಪ್ರಸಾದ್‌, ಬಜರಂಗದಳದ ಸಂಪತ್‌, ಭವಿತ್‌, ಸಚಿನ, ಪೃಥ್ವಿರಾಜ್‌,ಜಯಪ್ರಶಾಂತ್‌ ಉಪಸ್ಥಿತರಿದ್ದರು. ಪಾದಯಾತ್ರೆಯು 90 ದಿನಗಳಲ್ಲಿ ಶಬರಿಮಲೆಯಲ್ಲಿ ಸಮಾರೋಪಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next