Advertisement

ಒಲಿಂಪಿಕ್ಸ್‌  ಅರ್ಹತೆ ಪಡೆದ ಲಾಂಗ್‌ಜಂಪರ್‌ ಶ್ರೀಶಂಕರ್‌

12:08 AM Jul 16, 2023 | Team Udayavani |

ಬ್ಯಾಂಕಾಕ್‌: ಭಾರತದ ಸ್ಟಾರ್‌ ಲಾಂಗ್‌ಜಂಪರ್‌ ಮುರಳಿ ಶ್ರೀಶಂಕರ್‌ 2024ರ ಪ್ಯಾರಿಸ್‌ ಒಲಿಂಪಿ ಕ್ಸ್‌ಗೆ ಅರ್ಹತೆ ಸಂಪಾದಿಸಿದ್ದಾರೆ. ಅವರು ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ವಿಭಾಗದಿಂದ ಪ್ಯಾರಿಸ್‌ ಟಿಕೆಟ್‌ ಪಡೆದ ಭಾರತದ ಮೊದಲ ಆ್ಯತ್ಲೀಟ್‌.

Advertisement

ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಮುರಳಿ ಶ್ರೀಶಂಕರ್‌ ಜೀವನಶ್ರೇಷ್ಠ 8.37 ಮೀಟರ್‌ ದೂರಕ್ಕೆ ನೆಗೆದು ಬೆಳ್ಳಿ ಪದಕ ಗೆದ್ದರು. ಅವರ ಮೊದಲ ಸುತ್ತಿನ ನೆಗೆತದಲ್ಲೇ ಈ ದೂರ ದಾಖಲಾಯಿತು. ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆಗೆ 8.27 ಮೀಟರ್‌ ನೆಗೆತ ಮಾನದಂಡವಾಗಿತ್ತು.

ನಾಲ್ವರು ರೇಸ್‌ ವಾಕರ್‌ಗಳಾದ ಆಕಾಶದೀಪ್‌ ಸಿಂಗ್‌, ವಿಕಾಸ್‌ ಸಿಂಗ್‌, ಪರಮ್‌ಜೀತ್‌ ಸಿಂಗ್‌ ಬಿಷ್ಟ್ ಮತ್ತು ಪ್ರಿಯಾಂಕಾ ಗೋಸ್ವಾಮಿ ಈಗಾಗಲೇ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಗಳಿಸಿದ್ದಾರೆ.

ರಿಲೇಯಲ್ಲಿ ಚಿನ್ನ
ಬ್ಯಾಂಕಾಕ್‌ ಕೂಟದ ಶನಿವಾರದ ಸ್ಪರ್ಧೆಯಲ್ಲಿ ಭಾರತದ 4×400 ಮೀ. ಮಿಶ್ರ ರಿಲೇ ತಂಡ ಚಿನ್ನದ ಪದಕ ಜಯಿಸಿದೆ (3 ನಿಮಿಷ, 14.70 ಸೆಕೆಂಡ್‌). ರಾಜೇಶ್‌ ರಮೇಶ್‌, ಐಶ್ವರ್ಯಾ ಮಿಶ್ರಾ, ಅಮೋಜ್‌ ಜೇಕಬ್‌ ಮತ್ತು ಶುಭಾ ವೆಂಕಟೇಶ್‌ ಈ ತಂಡದ ಸದಸ್ಯರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next