ನವದೆಹಲಿ: ಬಹು ನಿರೀಕ್ಷಿತ 5ಜಿ ಸ್ಪೆಕ್ಟ್ರಂ ಹರಾಜು ಏಪ್ರಿಲ್-ಮೇ ನಲ್ಲಿ ನಡೆಯುವ ಸಾಧ್ಯತೆ ಇದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಮುಂದಿನ ತಿಂಗಳ ಒಳಗಾಗಿ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ಬಿಡುಗಡೆ ಮಾಡಿದರೆ ಪ್ರಕ್ರಿಯೆ ನಡೆಯಲಿದೆ.
ಈ ಬಗ್ಗೆ ಮಾತನಾಡಿದ ದೂರಸಂಪರ್ಕ ಕಾರ್ಯದರ್ಶಿ ಕೆ.ರಾಜಾರಾಮನ್, “ಮುಂದಿನ ತಿಂಗಳ ಒಳಗಾಗಿ 5ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ನಡೆಸುವ ನಿಟ್ಟಿನಲ್ಲಿ ಶಿಫಾರಸುಗಳನ್ನು ಸಲ್ಲಿಸಲಿದೆ.
ಮುಂದಿನ ತಿಂಗಳ ಒಳಗಾಗಿ ಟ್ರಾಯ್ ವತಿಯಿಂದ ಶಿಫಾರಸುಗಳು ಕೈಸೇರಿದ ಬಳಿಕ ಎರಡು ತಿಂಗಳು ಸಮಯ ದೂರಸಂಪರ್ಕ ಸಚಿವಾಲಯಕ್ಕೆ ಬೇಕಾಗುತ್ತದೆ. ನಂತರವಷ್ಟೇ ಪ್ರಕ್ರಿಯೆ ಶುರುವಾಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ನಿತ್ಯದ ಕೋವಿಡ್ ಕೇಸ್ ಸಾವಿರಕ್ಕೆ ಇಳಿಕೆ ;ಇಂದು 27 ಸಾವು
ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಕಂಪನಿಗಳಿಗೆ ಫೆ.15ರ ವರೆಗೆ ಟಿಪ್ಪಣಿ ಸಲ್ಲಿಸಲು ಅವಕಾಶವನ್ನು ಟ್ರಾಯ್ ಕಲ್ಪಿಸಿಕೊಟ್ಟಿದೆ.