Advertisement

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

10:33 PM Apr 30, 2024 | Team Udayavani |

ಲಂಡನ್‌: ಲಂಡನ್‌ನ ಹೈನಾಲ್ಟ್ ಪ್ರದೇಶದಲ್ಲಿ 36 ವರ್ಷದ ಯುವಕನೊಬ್ಬ ಮಂಗಳವಾರ ದಾರಿಹೋಕರ ಮೇಲೆ ಬೇಕಾಬಿಟ್ಟಿ ಖಡ್ಗ ಬೀಸಿದ್ದರಿಂದ ಬಾಲಕ ಬಾಲಕ ಮೃತಪಟ್ಟಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಇಬ್ಬರು ಪೊಲೀಸ್‌ ಅಧಿಕಾರಿಗಳು ಕೂಡ ಸೇರಿದ್ದಾರೆ.

Advertisement

ಖಡ್ಗ ಹಿಡಿದಿದ್ದ ಯುವಕ ಹೈನಾಲ್ಟ್ನ ಸುರಂಗ ನಿಲ್ದಾಣ ಪ್ರದೇಶದಲ್ಲಿ ಮೊದಲು ವಾಹನಗಳ ಮೇಲೆ ದಾಳಿ ನಡೆಸಿದ್ದು ಬಳಿಕ ಸಿಕ್ಕಸಿಕ್ಕವರ ಮೇಲೆ ಹಲ್ಲೆ ಮಾಡಿದ್ದಾನೆ.

ತಕ್ಷಣವೇ ಪೊಲೀಸರು ಆತನನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದೊಂದು ಖಂಡನೀಯ ಎಂದು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next