Advertisement

London: ಮೇಯರ್‌ ಚುನಾವಣೆ: ಕಣದಲ್ಲಿ ಇಬ್ಬರು ಭಾರತೀಯರು

12:16 AM Jan 13, 2024 | Team Udayavani |

ಲಂಡನ್‌: ಬ್ರಿಟನ್‌ ರಾಜಧಾನಿ ಲಂಡನ್‌ನ ಮೇಯರ್‌ ಸ್ಥಾನಕ್ಕೆ ಭಾರತೀಯ ಮೂಲದ ಇಬ್ಬರು ಉದ್ಯಮಿಗಳು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಾ ಕಣಕ್ಕೆ ಧುಮುಕಿದ್ದಾರೆ. ಉದ್ಯಮಿ ತರುಣ್‌ ಗುಲಾಟಿ ಈಗಾಗಲೇ ಪ್ರಚಾರ ನಡೆಸುತ್ತಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮಿ ಶ್ಯಾಮ್‌ ಭಾಟಿಯಾ ಸ್ಪರ್ಧಿಸಿದ್ದು, ಪ್ರಚಾರ ಆರಂಭಿಸಿದ್ದಾರೆ.

Advertisement

“ನಂಬಿಕೆ ಮತ್ತು ಬೆಳವಣಿಗೆ’ ಗುಲಾಟಿ ಅವರ ಚುನಾವಣಾ ಪ್ರಚಾರದ ಟ್ಯಾಗ್‌ಲೈನ್‌ ಆಗಿದೆ. ಅದೇ ರೀತಿ, “ಭರವಸೆಯ ರಾಯಭಾರಿ’ ಎಂಬುದು ಭಾಟಿಯಾ ಅವರ ಚುನಾವಣಾ ಪ್ರಚಾರದ ಟ್ಯಾಗ್‌ಲೈನ್‌ ಆಗಿದೆ. ತರುಣ್‌ ಗುಲಾಟಿ ಅವರು ಹೊಸದಿಲ್ಲಿಯಲ್ಲಿ ಜನಿಸಿದ್ದು, ಸದ್ಯ ಲಂಡನ್‌ನಲ್ಲಿದ್ದಾರೆ. ಶ್ಯಾಮ್‌ ಭಾಟಿಯಾ ಅವರು ಬ್ರಿಟನ್‌ನಲ್ಲಿ ಜನಿಸಿದ್ದಾರೆ. ಅವರ ಹೆತ್ತವರು ಭಾರತೀಯರು.

Advertisement

Udayavani is now on Telegram. Click here to join our channel and stay updated with the latest news.

Next