Advertisement
ಮಹೇಶ್ ಗೌಡ ಈ ಚಿತ್ರದ ನಿರ್ದೇಶಕರು. ಇವರ ಸ್ನೇಹಿತ ವಿವೇಕ್ ಕೊಡಪ್ಪ ನಿರ್ಮಾಪಕರು. ಮಹೇಶ್ ಅವರು ಹೇಳಿದ ಕಥೆ ಇಷ್ಟವಾಗಿ ಈ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು ವಿವೇಕ್. ಕನ್ನಡಕ್ಕೆ ಇದೊಂದು ಹೊಸ ಬಗೆಯ ಸಿನಿಮಾವಾಗಿ ಮೆಚ್ಚುಗೆ ಪಡೆಯುತ್ತದೆ ಎಂಬ ವಿಶ್ವಾಸ ಕೂಡಾ ಚಿತ್ರತಂಡಕ್ಕಿದೆ. ನಿರ್ದೇಶಕ ಮಹೇಶ್ ಗೌಡ ತುಂಬು ವಿಶ್ವಾಸದಿಂದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇಷ್ಟು ವರ್ಷಗಳ ಕಾಯುವಿಕೆ ಮುಕ್ತಿ ಸಿಗುವ ಸಮಯ ಬಂದಿದೆ ಎನ್ನುವುದು ಮಹೇಶ್ ಅವರ ಮಾತು. ಚಿತ್ರದ ಬಗ್ಗೆ ಮಾತನಾಡುವ ಮಹೇಶ್, “ಮಹಿರ ಹೊಸ ಸಿನಿಮಾ ಮೇಕರ್ಗಳಿಗೆ ಪ್ರೇರಣೆಯಾಗಬಹುದೆಂಬ ಭರವಸೆಯೂ ಇದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ತಾಯಿ ಮಗಳ ಸುತ್ತ ಸಾಗುತ್ತದೆ. ಚಿತ್ರದಲ್ಲಿ ತನಿಖಾಧಿಕಾರಿಯ ಪಾತ್ರವೂ ಪ್ರಮುಖವಾಗಿದೆ. ಸಾಕಷ್ಟು ಟ್ವಿಸ್ಟ್‌ಗಳೊಂದಿಗೆ ಸಾಗುವ ಚಿತ್ರ ಕ್ಷಣ ಕ್ಷಣಕ್ಕೂ ಪ್ರೇಕ್ಷಕರಿಗೆ ರೋಚಕ ಅನುಭವ ಕೊಡುತ್ತದೆ’ ಎಂದರು. ಖುಷಿಯಾಗಿದ್ದ ತಾಯಿ-ಮಗಳ ನಡುವೆ ಘಟನೆಯೊಂದು ನಡೆದು ಅದು ಯಾವ ರೀತಿ ಅವರನ್ನು ತೊಂದರೆಗೆ ಸಿಲುಕಿಸುತ್ತದೆ ಮತ್ತು ಅದರಿಂದ ಹೊರಬರಲು ಹೇಗೆ ಪ್ರಯತ್ನಿಸುತ್ತಾರೆಂಬುದೇ ಚಿತ್ರದ ಕಥಾಹಂದರ. ಈ ಕಥೆಯನ್ನು ತುಂಬಾ ಸಾಹಸಮಯವಾಗಿ ಹೇಳಲಾಗಿದೆಯಂತೆ. ಅಂದಹಾಗೆ, ಲಂಡನ್‌ನಲ್ಲಿ ಉದ್ಯೋಗದಲ್ಲಿದ್ದ ಮಹೇಶ್ ಸಿನಿಮಾ ಮೇಲಿನ ಆಸಕ್ತಿಯಿಂದ ಲಂಡನ್ ಫಿಲಂ ಅಕಾಡೆಮಿಯಿಂದ ನಿರ್ದೇಶನದ ತರಬೇತಿ ಪಡೆದು ಬಂದು “ಮಹಿರ’ ಚಿತ್ರವನ್ನು ನಿರ್ದೇಶಿಸಿದ್ದಾರೆ.
Advertisement
ಮಹಿರ ಆಟ ಶುರು
08:20 PM Jul 25, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.