Advertisement

ಲೊಂಬೋಕ್‌ನಲ್ಲಿ ಭೂಕಂಪ

06:00 AM Aug 20, 2018 | Team Udayavani |

ಲೊಂಬೋಕ್‌: ಇಂಡೋನೇಷ್ಯಾದ ಲೊಂಬೋಕ್‌ ದ್ವೀಪದಲ್ಲಿ ಭಾನುವಾರ ರಿಕ್ಟರ್‌ ಮಾಪಕದಲ್ಲಿ 6.9 ತೀವ್ರತೆಯುಳ್ಳ ಪ್ರಬಲ ಭೂಕಂಪ ಸಂಭವಿಸಿದೆ. ಪ್ರಾಕೃತಿಕ ವಿಕೋಪವು 460 ಮಂದಿಯನ್ನು ಬಲಿತೆಗೆದುಕೊಂಡ ಎರಡೇ ವಾರದಲ್ಲಿ ಮತ್ತೂಮ್ಮೆ ಭೂಮಿ ಕಂಪಿಸಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಪೂರ್ವ ಲೊಂಬೋಕ್‌ನ ಬೆಲಾಂಟಿಂಗ್‌ ನಗರವು ಭೂಕಂಪದ ಕೇಂದ್ರಬಿಂದು ವಾಗಿತ್ತು ಎಂದು ಅಮೆರಿಕದ ಭೂಗರ್ಭಶಾಸ್ತ್ರಜ್ಞರು ತಿಳಿಸಿದ್ದಾರೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿಯ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next