ವೀಕೆಂಡ್ ಬಂದ್ರೆ ಸಾಕು ಬೆಂಗಳೂರಿನಲ್ಲಿ ಸ್ಟಾಂಡ್‌ಅಪ್ ಕಾಮಿಡಿಗಳದ್ದೇ ಜಾತ್ರೆ. ಉತ್ತರ ಭಾರತದಿಂದ ಬರುವ ಕಲಾವಿದರು, ಹಿಂದಿಯಲ್ಲೋ, ಇಂಗ್ಲಿಷಿನಲ್ಲೋ ಚಟಾಕಿ ಹಾರಿಸಿ, ಬೆಂಗಳೂರಿಗನ್ನು ನಗಿಸಿ, ಇಲ್ಲಿನವರ ಜೇಬು ಖಾಲಿಮಾಡಿ ಹೋಗ್ತಾರೆ. ಹಾಗಾದರೆ, ಕನ್ನಡದಲ್ಲಿ ಸ್ಟಾಂಡ್‌ಅಪ್ ಕಾಮಿಡಿಯೇ ಇಲ್ವೇ? ಎಂಬ ಪ್ರಶ್ನೆ ಎದ್ದಾಗ, ನಗುತ್ತಾ ಎದ್ದುಬಂದವರು ಅನೂಪ್ ಮಯ್ನಾ. ಲಾಲ್‌ಬಾಗ್ ನಗರಿಯಲ್ಲಿ “ಲೋಲ್‌ಭಾಗ್’ ಎನ್ನುವ ಶೋ ಸೃಷ್ಟಿಸಿ, ಬೇಜಾನ್ ತಮಾಷೆ ಮಾಡಿ, ಕಾಲೆಳೆದು, ರಂಜಿಸುತ್ತಿದ್ದಾರೆ. ಇಲ್ಲಿನ ಟ್ರಾಫಿಕ್, ರಾಜಕೀಯ ಪ್ರಸಂಗಗಳು, ಸ್ಥಳೀಯ ವಿದ್ಯಮಾನಗಳನ್ನೇ ಹಾಸ್ಯಕ್ಕೆ ಬಳಸಿಕೊಂಡು, ಸಮಾಜಕ್ಕೊಂದು ಸಂದೇಶವನ್ನೂ ನೀಡುತ್ತಾ, ಮನೆಮಾತಾಗಿರುವ ತಂಡವೀಗ ಮತ್ತೂಂದು ಪ್ರದರ್ಶನಕ್ಕೆ ಸಜ್ಜಾಗಿದೆ. ಹೊಟ್ಟೆ ಹಿಡಿದುಕೊಂಡು ನಗಲು ಇದೊಂದು ಸುವರ್ಣಾವಕಾಶ. ಮರೆಯದೇ, ಪಾಲ್ಗೊಳ್ಳಿ.
ಯಾವಾಗ?: ಸೆ.2, ಭಾನುವಾರ, ಸಂ.5.30
ಎಲ್ಲಿ?: ಪ್ರಯೋಗ್ ಸ್ಟುಡಿಯೋ ಥಿಯೇಟರ್, ಬನಶಂಕರಿ 3ನೇ ಹಂತ
ಪ್ರವೇಶ: 200 ರೂ.