Advertisement

ಒಮ್ಮೆ ಭೇಟಿ ನೀಡಿ; ಮಣಿಪುರದಲ್ಲಿದೆ ವಿಶ್ವದ ಏಕೈಕ “ತೇಲುವ ಸರೋವರ”

09:07 AM Sep 28, 2019 | Nagendra Trasi |

ಯಾವುದಾದರು ಸ್ಥಳ, ಬೆಟ್ಟದ ಮೇಲೆ ನಿಂತಾಗ ತೇಲಬೇಕು ಎಂದು ಎಂದಾದರು ಆಲೋಚಿಸಿದ್ದೀರಾ? ಹೌದು ಎಂದಾದರೆ ನೀವೊಮ್ಮೆ ಮಣಿಪುರದ ವಿಷ್ಣುಪುರ್ ಜಿಲ್ಲೆಯ ಲೋಕ್ಟಾಕ್ ಸರೋವರಕ್ಕೆ ಭೇಟಿ ನೀಡಬೇಕು. ಯಾಕೆಂದರೆ ಇದು ತೇಲುವ ಸರೋವರ ಎಂದೇ ಅತ್ಯಂತ ಜನಪ್ರಿಯವಾಗಿದೆ. ಇದು ವಿಶ್ವದಲ್ಲಿಯೇ ತೇಲುವ ಏಕೈಕ ಸರೋವರವಾಗಿದೆ. ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ.

Advertisement

ಲೋಕ್ಟಾಕ್ ತೇಲುವ ಸರೋವರ ಇಡೀ ಉತ್ತರ ಭಾರತದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರವಾಗಿದೆ. ಈ ಸರೋವರದಲ್ಲಿ ಫ್ಯೂಮಿಡ್ ಗಳೆಂದು ಕರೆಯುವ ಅಂದರೆ ಜೈವಿಕ ಅಂಶ, ಸಸ್ಯರಾಶಿ ಸಮೂಹ ಮತ್ತು ಮಣ್ಣು ಸೇರಿ ದ್ವೀಪದ ಮಾದರಿಯಲ್ಲಿ ಅವುಗಳು ತೇಲುತ್ತಾ ಇರುತ್ತದೆ. ಈ ಸರೋವರ ಸುಮಾರು 300 ಚದರ ಅಡಿ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿದೆ.

ಲೋಕ್ಟಾಕ್ ಸರೋವರ ಇಲ್ಲಿ ಜನರ ಜೀವನ ನಿರ್ವಹಣೆಯ ಮೂಲವಾಗಿದೆ. ಇಲ್ಲಿ ಮೀನು ಸಾಕಾಣಿಕೆಯ ಮೂಲಕ ಈ ಸರೋವರ ಜೀವನಾಧಾರಕ್ಕೆ ಕೊಂಡಿಯಾಗಿದೆ. ಸರೋವರ ಪ್ರದೇಶದಲ್ಲಿ ಪ್ರವಾಸಿ ಹೌಸ್ ಕೂಡಾ ಇದ್ದು ಇದನ್ನು ಸೆಂಡ್ರಾ ಟೂರಿಸ್ಟ್ ಹೋಮ್ ಎಂದು ಕರೆಯುತ್ತಾರೆ. ಸೆಂಡ್ರಾ ದ್ವೀಪದಲ್ಲಿ 233 ಹೆಚ್ಚು ಜಾತಿಯ ಅಪರೂಪದ ಸಸ್ಯಗಳಿವೆ, 425 ಬಗೆಯ  ಪ್ರಾಣಿಗಳು  ಹಾಗೂ 100 ಅಧಿಕ ಪ್ರಬೇಧದ ಪಕ್ಷಿಗಳು ಇದೆ. ಅಲ್ಲದೇ ಅಳಿವಿನ ಅಂಚಿನಲ್ಲಿರುವ ಸಂಗಾಯ್ ಜಾತಿಯ ಜಿಂಕೆಗಳು ಇಲ್ಲಿ ಕಾಣಸಿಗುತ್ತದೆ. ಜಲಕ್ರೀಡೆ ಪ್ರವಾಸಿಗರಿಗೆ ಹೆಚ್ಚು ಮನರಂಜನೆ ನೀಡುತ್ತದೆ.

ಈ ಸರೋವರದ ಒಂದು ಭಾಗವಾಗಿರುವ ಕೈಬುಲ್ ಲಾಮ್ಜಾವೋ ರಾಷ್ಟ್ರೀಯ ಉದ್ಯಾನವನ ಈ ಸರೋವರದ ಮೇಲೆ ನಿಂತಿದೆ. ಇದು ಇಡೀ ವಿಶ್ವದಲ್ಲಿಯೇ ತೇಲುವ ಏಕೈಕ ಸರೋವರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಲ್ಲಿಗೆ ಯಾವಾಗ ಭೇಟಿ ನೀಡುವುದು ಸೂಕ್ತ:

Advertisement

ಮಣಿಪುರದ ಉಷ್ಣಾಂಶಭರಿತ ಮತ್ತು ಶೀತ ಗಾಳಿಯಿಂದ ಕೂಡಿದ ಹವಾಮಾನ ಹೊಂದಿದ್ದು, ಸಾಮಾನ್ಯವಾಗಿ 25-35 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಹೀಗಾಗಿ ಪ್ರವಾಸಿಗರು ಯಾವ ಸಮಯದಲ್ಲಿಯೂ ಭೇಟಿ ನೀಡಬಹುದಾಗಿದೆ. ಮಣಿಪುರ ಪರ್ವತ ಪ್ರದೇಶವಾಗಿದ್ದರಿಂದ ಚಳಿಗಾಳಿಯಿಂದ ಕೂಡಿರುವುದರಿಂದ ಅದಕ್ಕೆ ಅಗತ್ಯವಾದ ಬಟ್ಟೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಮಣಿಪುರಕ್ಕೆ ಹೋಗುವ ಮಾರ್ಗ:

ಬೆಂಗಳೂರಿನಿಂದ ಮಣಿಪುರಕ್ಕೆ ಇರುವ ದೂರ 2,847 ಕಿಲೋ ಮೀಟರ್. ಬೆಂಗಳೂರಿನಿಂದ ಇಂಫಾಲ್ ಗೆ ವಿಮಾನದಲ್ಲಿ ಪ್ರಯಾಣಿಸಿದರೆ 2,156 ಕಿಲೋ ಮೀಟರ್ ದೂರ. ಬೆಂಗಳೂರಿನಿಂದ ಇಂಫಾಲ್ ಕ್ಕೆ ನೇರ ಯಾವುದೇ ಬಸ್, ರೈಲು ಸೌಲಭ್ಯ ಇಲ್ಲ. ಸುಲಭ ಉಪಾಯವೆಂದರೆ ಬೆಂಗಳೂರಿನಿಂದ ಗುವಾಹಟಿಗೆ ವಿಮಾನ ಅಥವಾ ರೈಲಿನಲ್ಲಿ ಹೋಗಿ, ಗುವಾಹಟಿಯಿಂದ ಇಂಪಾಲ್ ಗೆ ಹೋಗಬಹುದು.

ಇಂಫಾಲ್ ನಿಂದ 48 ಕಿಲೋ ಮೀಟರ್ ದೂರದಲ್ಲಿ ಲೋಕ್ಟಾಕ್ ತೇಲುವ ಸರೋವರ ಇದೆ. ಸಮೀಪದ ರೈಲು ನಿಲ್ದಾಣ ದಿಮಾಪುರ್, ಇದು ಇಂಫಾಲ್ ನಿಂದ 215 ಕಿಲೋ ಮೀಟರ್ ದೂರದಲ್ಲಿದೆ. ದಿಮಾಪುರ್ ನಿಂದ ತೇಲುವ ಸರೋವರ ಪ್ರದೇಶಕ್ಕೆ ಬಸ್ ಅಥವಾ ಕಾರಿನಲ್ಲಿ ಬರಬಹುದು. ಇಂಫಾಲ್ ಗೆ ಬಂದರೆ ಲೋಕ್ಟಾಕ್ ಗೆ ಬಸ್ ಸೌಲಭ್ಯ ಇದೆ.

Advertisement

Udayavani is now on Telegram. Click here to join our channel and stay updated with the latest news.

Next