Advertisement
ರಾಜಸ್ಥಾನದಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ನೇರ ಪೈಪೋಟಿ ಇದೆ. ಮಾಯಾವತಿ ನೇತೃತ್ವದ ಬಿಎಸ್‌ಪಿ ಎಲ್ಲ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ರಾಜ್ಯದಲ್ಲಿರುವ ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಅಳ್ವಾರ್ ಮತ್ತು ಶ್ರೀಗಂಗಾನಗರ ಕ್ಷೇತ್ರದಿಂದ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವನ್ನು ನೋಡಿದಾಗ ಕಾಂಗ್ರೆಸ್ ನಗೌರ್ ಕ್ಷೇತ್ರವನ್ನು ಆರ್‌ಎಲ್‌ಪಿಗೆ, ಅಮ್ರಾ ಕ್ಷೇತ್ರವನ್ನು ಸಿಪಿಎಂಗೆ ಬಿಟ್ಟುಕೊಟ್ಟಿದೆ. ಜಾತಿ ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ 2 ಕ್ಷೇತ್ರಗಳಲ್ಲಿಯೂ ಕೂಡ ಜಾಟರೇ ಹೆಚ್ಚು ಪ್ರಭಾವಶಾಲಿಗಳಾಗಿದ್ದಾರೆ. ರಾಜಸ್ಥಾನಕ್ಕೆ ಸಂಬಂಧಿಸಿದಂತೆ ಎನ್‌ಡಿಎಯಲ್ಲಿ ಯಾವ ಮಿತ್ರಪಕ್ಷವೂ ಇಲ್ಲ. ಹೀಗಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಈ ಬಾರಿ ರಾಜಸ್ಥಾನದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಎ.19ರಂದು 11, ಎ.26ರಂದು 13 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಸರಕಾರ ಬದಲಿನಿಂದ ಪ್ರಯೋಜನ: 6 ತಿಂಗಳ ಹಿಂದಷ್ಟೇ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆದು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ, ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂಬ ಬಗ್ಗೆ ವಿಶ್ಲೇಷಣೆಗಳು ನಡೆದಿವೆ. 2019ರಲ್ಲಿ ರಾಜಸ್ಥಾನದಲ್ಲಿ ಅಶೋಕ್ ಗೆಹೊÉàಟ್ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗಲೂ ಕೂಡ, ಎನ್‌ಡಿಎಯೇ ಎಲ್ಲ ಕ್ಷೇತ್ರಗಳಲ್ಲಿಯೂ ಜಯ ಸಾಧಿಸಿದೆ. ಹಿಂದಿನ ಚುನಾವಣೆಯಲ್ಲಿ ನಗೌರ್ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಮಿತ್ರ ಪಕ್ಷ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ ಅಭ್ಯರ್ಥಿ ಹನುಮಾನ್ ಬೇನಿವಾಲ್ ಜಯ ಸಾಧಿಸಿದ್ದರು.
Related Articles
Advertisement
2019ರ ಚುನಾವಣೆಯಲ್ಲಿ ನಗೌರ್ ಕ್ಷೇತ್ರದಲ್ಲಿ ಮಾತ್ರ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ)ಯ ಹನುಮಾನ್ ಬೇನಿವಾಲ್ ಜಯ ಸಾಧಿಸಿದ್ದರು. ಅವರಿಗೆ 6.60 ಲಕ್ಷ ಮತಗಳು ಪ್ರಾಪ್ತ ವಾಗಿದ್ದವು. ಆ ಸಂದರ್ಭದಲ್ಲಿ ಅವರು ಬಿಜೆಪಿಯ ಜತೆಗೆ ಮೈತ್ರಿ ಮಾಡಿಕೊಂಡಿದ್ದರು. ಬೇನಿವಾಲ್ ಮೂಲತಃ ಬಿಜೆಪಿಯವರೇ ಆಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಜತೆಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅಲ್ಲಿ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ.ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜ್ಯೋತಿ ಮಿರ್ಧಾ ಬಿಜೆಪಿಗೆ ನಿಷ್ಠೆ ಬದಲಿಸಿ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ನಗೌರ್ ಎನ್ನುವುದು ಮರುಭೂಮಿ ರಾಜ್ಯ ರಾಜಸ್ಥಾನದ 5ನೇ ಅತ್ಯಂತ ದೊಡ್ಡ ಜಿಲ್ಲೆಯೂ ಹೌದು. 2019ರ ಫಲಿತಾಂಶ
ಒಟ್ಟು ಕ್ಷೇತ್ರ25
ಬಿಜೆಪಿ24
ಆರ್‌ಎಲ್‌ಪಿ 01 ಚುನಾವಣ ವಿಷಯಗಳು
ಕಾಂಗ್ರೆಸ್ ಬಿಡುಗಡೆ ಮಾಡಿ ರುವ 25 ಗ್ಯಾರಂಟಿಗಳ ಕುರಿತು ಇಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ಯಲ್ಲೂ ಇಲ್ಲಿ ಗ್ಯಾರಂಟಿ ಚರ್ಚೆ ಜೋರಾಗಿತ್ತು.
ರಾಷ್ಟ್ರೀಯತೆಯ ವಿಷಯವನ್ನು ಬಿಜೆಪಿ ಇಲ್ಲಿ ಪ್ರಮುಖವಾಗಿ ಬಳಸಿಕೊಳ್ಳುತ್ತಿದೆ.
ಬಿಜೆಪಿ ಇದಕ್ಕೆ ಪರ್ಯಾಯ ವಾಗಿ ಮೋದಿ ಗ್ಯಾರಂಟಿ ಎಂಬ ಅಸ್ತ್ರವನ್ನು ಮುಂದಿಟ್ಟಿದೆ. ಕಳೆದ ವಿಧಾನಸಭಾ ಚುನಾ ವಣೆಯಲ್ಲಿಯೂ ಬಿಜೆಪಿ ಮೋದಿ ಗ್ಯಾರಂ ಟಿಯ ಲಾಭ ಪಡೆದಿತ್ತು.
ಕಾಂಗ್ರೆಸ್ ಇಲ್ಲಿ ನಿರು ದ್ಯೋಗ ಮತ್ತು ಬೆಲೆ ಏರಿಕೆಯನ್ನು ಮುಖ್ಯ ಅಸ್ತ್ರವಾಗಿಸಿಕೊಂಡಿದೆ.
ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲು ನೀಡುವ ವಿಚಾರ ಮುನ್ನೆಲೆಗೆ ಸದಾಶಿವ ಕೆ.