Advertisement

ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಲೋಕಪಾಲ್‌

09:46 AM Jan 03, 2020 | Hari Prasad |

ಹೊಸದಿಲ್ಲಿ: ಭ್ರಷ್ಟಾಚಾರ ನಿಗ್ರಹಕ್ಕಾಗಿ ಕೇಂದ್ರ ಸರಕಾರ ಆರಂಭಿಸಿರುವ ಲೋಕಪಾಲ್‌ ಸಂಸ್ಥೆಯ ಕೇಂದ್ರ ಕಚೇರಿಯು ತಾನಿದ್ದ ಪಂಚತಾರಾ ಹೊಟೇಲ್‌ನಿಂದ ತನ್ನ ಸ್ವಂತ ಕಟ್ಟಡಕ್ಕೆ ಸದ್ಯದಲ್ಲೇ ಸ್ಥಳಾಂತರಗೊಳ್ಳಲಿದೆ.

Advertisement

ಪಂಚತಾರಾ ಹೊಟೇಲಿನಲ್ಲಿ ತನ್ನ ತಾತ್ಕಾಲಿಕ ಕಚೇರಿಗಾಗಿ ಲೋಕಪಾಲ್‌ ಮಾಸಿಕ 50 ಲಕ್ಷ ರೂ. ಬಾಡಿಗೆ ನೀಡುತ್ತಿತ್ತು! ಈಗ, ಚಾಣಕ್ಯಪುರಿಯಲ್ಲಿ ಲೋಕಾಯುಕ್ತಕ್ಕಾಗಿ ಹೊಸ ಕಟ್ಟಡ ನಿಗದಿಗೊಳಿಸಲಾಗಿದೆ.

ಹಾಗಾಗಿ, ಸ್ವಂತ ಕಟ್ಟಡಕ್ಕೆ ಲೋಕಪಾಲ್‌ ಕಚೇರಿ ಇದೇ ತಿಂಗಳಲ್ಲಿ ಸ್ಥಳಾಂತರಗೊಳ್ಳಲಿದೆ ಎಂದು ಕೇಂದ್ರ ಸಿಬಂದಿ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. ಮಾಸಿಕ 50 ಲಕ್ಷ ರೂ. ಬಾಡಿಗೆ ಕರಾರಿನಡಿ 2019ರ ಮಾ. 22ರಿಂದ 2019ರ ಅ. 31ರವರೆಗೆ 3.85 ಕೋಟಿ ರೂ.ಗಳನ್ನು ಬಾಡಿಗೆ ಪಾವತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next