Advertisement

ದೇವೇಂದ್ರನ ಎದುರು ಮಂಡಿಯೂರಿದ ಉಗ್ರಪ್ಪ

04:59 AM May 24, 2019 | mahesh |

ಬಳ್ಳಾರಿ: ಗಣಿನಾಡು ಬಳ್ಳಾರಿಯ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮತ್ತೂಮ್ಮೆ “ಕಮಲ’ ಅರಳಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಕಾಂಗ್ರೆಸ್‌ ಶಾಸಕರೇ ಇದ್ದರೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಬಲವಾದ ಹೊಡೆತ ನೀಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

Advertisement

ಮೈತ್ರಿ ಅಭ್ಯರ್ಥಿ ಹಾಗೂ ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಅವರನ್ನು ಬಿಜೆಪಿಯ ವೈ.ದೇವೇಂದ್ರಪ್ಪ 54,304 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. ಕ್ಷೇತ್ರದ ಉಪ ಚುನಾವಣೆಯಲ್ಲಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಬಿಜೆಪಿ ಸಾರ್ವತ್ರಿಕ ಚುನಾವಣೆಯಲ್ಲಿ ಸೇಡು ತೀರಿಸಿಕೊಳ್ಳುವುದರೊಂದಿಗೆ ಜಿಲ್ಲೆಯಲ್ಲಿ ತನ್ನ ಅಸ್ತಿತ್ವವನ್ನು ಮರು ಸ್ಥಾಪಿಸಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಟಿಕೆಟ್‌ ತಮಗೇ ಎಂಬುದನ್ನು ಖಾತ್ರಿ ಪಡಿಸಿಕೊಂಡ ಉಗ್ರಪ್ಪ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರು. ಆದರೆ ಬಿಜೆಪಿ ಟಿಕೆಟ್‌ ಯಾರಿಗೆ ಎಂಬುದು ಫೈನಲ್‌ ಆಗಿರಲಿಲ್ಲ. ಕೊನೆಗೂ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ್ದ ವೈ.ದೇವೇಂದ್ರಪ್ಪಗೆ ಬಿಜೆಪಿ ಟಿಕೆಟ್‌ ಘೋಷಿಸಿ ರಾಜಕೀಯ ಆಟ ಆಡಿತ್ತು. ಬಿಜೆಪಿ ಟಿಕೆಟ್‌ ಫೈನಲ್‌ ಆದ ನಂತರ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಎರಡೂ ಪಕ್ಷಗಳು ಇಡೀ ಕ್ಷೇತ್ರಾದ್ಯಂತ ಎಡಬಿಡದೆ ಪ್ರಚಾರ ನಡೆಸಿ ಮತದಾರರ ಸೆಳೆಯಲು ಯತ್ನಿಸಿದ್ದವು.

ಹೊರಗಿನ, ಸ್ಥಳೀಯ ಅಭ್ಯರ್ಥಿ, ಅಕ್ಷರಸ್ಥ, ಅನಕ್ಷರಸ್ಥ ಹೀಗೆ ಹಲವು ವಿಷಯಗಳು ಪ್ರಚಾರದಲ್ಲಿ ಪ್ರಸ್ತಾಪಗೊಂಡು ಕಣ ರಂಗೇರಿತ್ತು. ಅಲ್ಲದೆ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬಿ.ಶ್ರೀರಾಮುಲು ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಇದರಲ್ಲಿ ಗೆಲ್ಲುವ ಮೂಲಕ ರಾಮುಲು ಮತ್ತೂಮ್ಮೆ ತಮ್ಮ ರಾಜಕೀಯ ಶಕ್ತಿ ಏನು ಎಂಬುದನ್ನು ರಾಜಕೀಯ ವಿರೋಧಿಗಳಿಗೆ ತೋರಿಸಿದ್ದಾರೆ. ಬಳ್ಳಾರಿ ಲೋಕಸಭೆ ಇತಿಹಾಸದಲ್ಲೇ ಉಪ ಚುನಾವಣೆಯಲ್ಲಿ 2.43 ಲಕ್ಷ ಮತಗಳ ಅಂತರದ ಉಗ್ರಪ್ಪನವರ ದಾಖಲೆ ಗೆಲುವು
7 ತಿಂಗಳಿಗಷ್ಟೇ ಸೀಮಿತವಾಗಿದೆ. ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಸಂಸತ್‌ನಲ್ಲಿ ಬಳ್ಳಾರಿ ಧ್ವನಿ ಎತ್ತಿ ಹಿಡಿದಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎನ್ನುತ್ತಿದ್ದ ಉಗ್ರಪ್ಪ ಸಾರ್ವತ್ರಿಕ ಚುನಾವಣೆಯಲ್ಲೂ ಮತದಾರರು ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದರು. ಮತಗಳ ಅಂತರ ಕಡಿಮೆಯಾದರೂ,
ಗೆಲುವು ಪಕ್ಕಾ ಎಂದು ಉಪ ಚುನಾವಣೆಯ ಗುಂಗಿನಲ್ಲೇ ಮೈಮರೆತಿದ್ದ “ಕೈ’ ಪಕ್ಷಕ್ಕೆ ಜಿಲ್ಲೆಯ ಮತದಾರರು ಸಹ “ಕೈ’ ಕೊಟ್ಟಿದ್ದಾರೆ.

ಬಿಜೆಪಿ ಕಾರ್ಯಕರ್ತರು, ನಾಯಕರ ಶ್ರಮ ದಿಂದಾಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿ ಸಲು ಸಾಧ್ಯ ವಾಯಿತು. ರೈತನ ಮಗನಾದ ನನ್ನನ್ನು ಜಿಲ್ಲೆಯ ಮಗನನ್ನಾಗಿ ಪರಿಗಣಿಸಿ ಸಂಸತ್‌ಗೆ ಹೋಗಲು
ಅವಕಾಶ ಕಲ್ಪಿಸಿಕೊಟ್ಟ ಜಿಲ್ಲೆಯ ಮತದಾರರಿಗೆ ಧನ್ಯವಾದಗಳು.
● ವೈ.ದೇವೇಂದ್ರಪ್ಪ, ನೂತನ ಸಂಸದ, ಬಳ್ಳಾರಿ

ದೇಶ, ರಾಜ್ಯದಲ್ಲಿ ಮೋದಿ ಅಲೆ ಕೆಲಸಮಾಡಿದ್ದು, ಜನಾದೇಶವನ್ನು ಗೌರವಿಸಬೇಕು. ಜಿಲ್ಲೆಯ ಶಾಸಕರು, ಸಚಿವರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕೆಲಸ ಮಾಡಿದ್ದಾರೆ. ತಾಯಿಯಂತಿರುವ ಪಕ್ಷವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ.
● ವಿ.ಎಸ್‌.ಉಗ್ರಪ್ಪ,, ಪರಾಜಿತ ಅಭ್ಯರ್ಥಿ

Advertisement

ಬಳ್ಳಾರಿ (ಬಿಜೆಪಿ)
ವಿಜೇತರು ವೈ ದೇವೇಂದ್ರಪ್ಪ
ಪಡೆದ ಮತ 6,16388
ಎದುರಾಳಿ ವಿ.ಎ ಸ್‌. ಉಗ್ರಪ್ಪ
ಪಡೆದ ಮತ 5,60681
ಗೆಲುವಿನ ಅಂತರ 55,707
ಕಳೆದ ಬಾರಿ ಗೆದ್ದವರು: ವಿ.ಎಸ್‌. ಉಗ್ರಪ್ಪ(ಕಾಂಗ್ರೆಸ್‌ )


Advertisement

Udayavani is now on Telegram. Click here to join our channel and stay updated with the latest news.

Next