Advertisement
ಪರಿಕರಗಳುಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ, ವಿವಿ ಪ್ಯಾಟ್, ಮತದಾರರ ರಿಜಿಸ್ಟರ್, ಮತದಾರರ ಪಟ್ಟಿ, ಶಾಯಿ, ಮತ ಪತ್ರ, ಸೀಲ್, ಅಣಕು ಮತದಾನದ ಸ್ಲಿಪ್, ಮತಯಂತ್ರವನ್ನು ಅಧಿಕಾರಿಗಳಿಗೆ ನೀಡಲಾಯಿತು.
ತಾಲೂಕಿನ 241 ಬೂತ್‌ಗಳ ಪೈಕಿ 46 ನಕ್ಸಲ್ ಪೀಡಿತ ಮತಗಟ್ಟೆಗಳಿದ್ದು, 12 ಅತಿ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಪ್ರತಿ ಮತಗಟ್ಟೆ ಗಳಲ್ಲಿಯೂ ವೀಡಿಯೋ ಮತ್ತು ಫೋಟೋಗ್ರಫಿ ವ್ಯವಸ್ಥೆ ಮಾಡ ಲಾಗಿದ್ದು, 14 ವೀಡಿಯೋ ಕೆಮರಾ, 31 ಮಂದಿ ಮೈಕ್ರೋ ಅಬ್ಸರ್ವರ್ ನಿಯೋಜಿಸಲಾಗಿದೆ. ಗುರುವಾಯನಕೆರೆಯಲ್ಲಿ ಮತಗಟ್ಟೆ ಸಂಖ್ಯೆ 116ರಲ್ಲಿ ವೆಬ್ ಕೆಮರಾ ಅಳವಡಿಸಲಾಗಿದ್ದು, ಮತದಾನ ಪ್ರಕ್ರಿಯೆ ಯನ್ನು ದಿಲ್ಲಿ ಕೇಂದ್ರ ಚುನಾವಣ ಕಚೇರಿಯಲ್ಲಿ ವೀಕ್ಷಿಸಬಹುದಾಗಿದೆ. ವಾಹನದ ವ್ಯವಸ್ಥೆ
ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆ ಗಳಿಗೆ ತೆರಳುವ ಅಧಿಕಾರಿಗಳು ಹಾಗೂ ಸಿಬಂದಿಗೆ ಸೂಕ್ತ ವಾಹನ ಸೌಲಭ್ಯ ಒದಗಿಸಲಾಗಿತ್ತು. 33 ಬಸ್, 22 ಜೀಪ್, 15 ಕ್ಯಾಬ್, ಹೆಚ್ಚುವರಿಯಾಗಿ 3 ಬಸ್, 2 ಜೀಪ್, 2 ಕ್ಯಾಬ್ ನಿಯೋಜಿಸಲಾಗಿತ್ತು. ಈಗಾಗಲೇ ವಾಹನಗಳ ಚಾಲಕರಿಗೆ ಜಿಲ್ಲಾಧಿಕಾರಿ ಸೂಚನೆಯಂತೆ ಇಡಿಸಿ ಫಾರ್ಮ್ ಮೂಲಕ ಪೋಸ್ಟಲ್ ಮತದಾನಕ್ಕೆ ಅವಕಾಶ ಮಾಡಲಾಗಿತ್ತು.
Related Articles
ತಾಲೂಕಿನಲ್ಲಿ ಶಾಂತಿಯುತ ಹಾಗೂ ನಿರ್ಭೀತ ಮತದಾನಕ್ಕಾಗಿ ಮತಗಟ್ಟೆ ಅಧಿಕಾರಿಗಳ ಸಹಿತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬೂತ್‌ಗಳಿಗೆ ನಿಯೋಜನೆಗೊಂಡ ಪೊಲೀಸರಿಗೆ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಸಲಹೆ- ಸೂಚನೆ ನೀಡಿದರು. ಹೆಚ್ಚುವರಿ ನಿಯೋಜಿತ ಡಿವೈಎಸ್‌ಪಿ ಲಿಂಗಪ್ಪ ಪೂಜಾರಿ, ಬೆಳ್ತಂಗಡಿ ಎಸ್‌ಐ ರವಿ ಬಿ.ಎಸ್., ಧರ್ಮಸ್ಥಳ ಎಸ್‌ಐ ಅವಿನಾಶ್, ಪೂಂಜಾಲ ಕಟ್ಟೆ ಎಸ್‌ಐ ಸುನಿತಾ, ವೇಣೂರ್ ಎಸ್‌ಐ ನಾಗರಾಜ್, ಟ್ರಾಫಿಕ್ ಇನ್ಸ್‌ಪೆಕ್ಟರ್ ನಾರಾಯಣ ಗಾಣಿಗ ಇದ್ದರು.
Advertisement
ತಾಲೂಕಿನ 241 ಬೂತ್‌ಗಳಿಗೆ ಸೂಕ್ತ ಬಂದೋಬಸ್ತ್ ಒದಗಿಸ ಲಾಗಿದೆ. ಈಗಾಗಲೇ ಒಂದು ಡಿವೈಎಸ್‌ಪಿ, 3 ಸಿಪಿಐ, 7 ಪಿಎಸ್‌ಐ, 14 ಮಂದಿ ಎಎಸ್‌ಐ, 54 ಮಂದಿ ಎಚ್‌ಸಿ, 145 ಪಿಸಿ, 176 ಹೋಮ್‌ಗಾರ್ಡ್‌ಗಳನ್ನು ಆಯಾಯ ಬೂತ್‌ಗಳಿಗೆ ಅನುಕ್ರಮದಂತೆ ನಿಯೋ ಜಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಇಂಡೋ ಟಿಬೇಟಿಯನ್ ಬಾರ್ಡರ್ ಒಂದು ತುಕಡಿ (100 ಮಂದಿ) ನಿಯೋಜಿಸಲಾಗಿದೆ.
ಪುಂಜಾಲಕಟ್ಟೆ, ಗುರುವಾಯನ ಕೆರೆ, ಚಾರ್ಮಾಡಿ, ಕೊಕ್ಕಡ ಪ್ರದೇಶಗಳನ್ನು ಕೇಂದ್ರವಾಗಿಸಿ 4 ಕಡೆಗಳಲ್ಲಿ ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದ್ದು. ಉಜಿರೆಯಲ್ಲಿ ಒಂದು ತುಕಡಿ ನಿಯೋಜಿಸಲಾಗಿದೆ. ಅವಶ್ಯವಿದ್ದಲ್ಲಿ ಜಾಗೃತವಾಗಲಿದೆ. ಅತಿ ಸೂಕ್ಷ್ಮ ಮತಗಟ್ಟೆಯಲ್ಲಿ 4 ಬೂತ್‌ಗಳಿದ್ದರೆ ಎರಡು ಪೊಲೀಸ್ ಸಿಬಂದಿ, 9 ಹೋಮ್‌ಗಾರ್ಡ್, 4 ಮಂದಿ ಐ.ಟಿ.ಬಿ.ಪಿ. ಸಿಬಂದಿ ನಿಯೋಜಿಸಲಾಗಿದೆ.
ತಹಶೀಲ್ದಾರ್ ಮುತುವರ್ಜಿಮಸ್ಟರಿಂಗ್ ಕೊಠಡಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡಿದ ಮತದಾನ ಪರಿಕರಗಳ ಬಗ್ಗೆ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮಾರ್ಗದರ್ಶನ ನೀಡಿದರು. ಪ್ರತಿ ಕೊಠಡಿಗೆ ತೆರಳಿ ಮಾಹಿತಿ ನೀಡಿದರು. ಸ. ಚುನಾವಣಾಧಿಕಾರಿ ಎಚ್.ಆರ್. ನಾಯಕ್, ಎಆರ್‌ಒ ಸಹಾಯಕ ಸುಭಾಷ್ ಜಾಧವ್, ನೋಡಲ್ ಅಧಿಕಾರಿ ಶಿವಪ್ರಸಾದ್ ಅಜಿಲ, ಸ್ವೀಪ್ ಅಧಿಕಾರಿ ಕುಸುಮಾಧರ, ಸಂಪನ್ಮೂಲ ವ್ಯಕ್ತಿ ಧರಣೇಂದ್ರ ಕೆ., 6 ಮಾಸ್ಟ ರಿಂಗ್ ಅಧಿಕಾರಿಗಳು, 20 ಸೆಕ್ಟರ್ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಸಹಕರಿಸಿದರು. ವಿಶೇಷ ಮತಗಟ್ಟೆಗಳು
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 163 ಈ ಬಾರಿ ಎಥಿ°ಕ್ (ಸಾಂಪ್ರದಾಯಿಕ ಮತಗಟ್ಟೆ), ಬೆಳ್ತಂಗಡಿ ಮಾದರಿ ಸರಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 109 ಸಖೀ (ಮಹಿಳಾ ಮತದಾರರು ಹೆಚ್ಚಿರುವ ಪ್ರದೇಶ), ಉಪ್ಪರ ಪಳಿಕೆಯ ಮತಗಟ್ಟೆ ಸಂಖ್ಯೆ 236 ಅಂಗವಿಕಲರಿಗಾಗಿ ಗುರುತಿಸಲಾಗಿದೆ.