Advertisement

ʼThalaivar171ʼ ಸಿನಿಮಾಕ್ಕಾಗಿ ಸೋಶಿಯಲ್‌ ಮೀಡಿಯಾದಿಂದ 6 ತಿಂಗಳು ಕನಕರಾಜ್‌ ಬ್ರೇಕ್‌?

02:39 PM Oct 31, 2023 | Team Udayavani |

ಚೆನ್ನೈ: ʼಮಾಸ್ಟರ್‌ʼ ಲೋಕೇಶ್‌ ಕನಕರಾಜ್‌ʼಲಿಯೋʼ ಸಿನಿಮಾ ಸಕ್ಸಸ್ ಆದ ಖುಷಿಯಲ್ಲಿದ್ದಾರೆ. ಬಾಕ್ಸ್‌ಆಫೀಸ್‌ನಲ್ಲಿ ದಳಪತಿ ಸಿನಿಮಾ ಭರ್ಜರಿ ಗಳಿಕೆ ಕಾಣುತ್ತಿದೆ. ಈ ನಡುವೆ ಲೋಕೇಶ್‌ಅವರ ಮುಂದಿನ ಸಿನಿಮಾದ ಬಗ್ಗೆ ತಯಾರಿ ಶುರುವಾಗಿದೆ.

Advertisement

ಲೋಕೇಶ್‌ಅವರು ಮುಂದಿನ ಸಿನಿಮಾವನ್ನು ರಜಿನಿಕಾಂತ್‌ಅವರೊಂದಿಗೆ ಮಾಡಲಿದ್ದಾರೆ. ಈ ಸಿನಿಮಾದ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಆಗಿದೆ. ಲೋಕೇಶ್‌ ಕನರಾಜ್‌ ಅವರು ಮೊದಲಿನಿಂದಲೂ ತನ್ನ ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ರಜಿನಿಕಾಂತ್‌ ಸಿನಿಮಾಕ್ಕಾಗಿ ಲೋಕೇಶ್‌ ಸೋಶಿಯಲ್‌ ಮೀಡಿಯಾದಿಂದ ಬ್ರೇಕ್‌ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಇಂಡಸ್ಟ್ರಿ ಟ್ರ್ಯಾಕರ್ ಅಮೃತ ಭಾರತಿ ಅವರು ಈ ಬಗ್ಗೆ ಎಕ್ಸ್‌ ನಲ್ಲಿ ಟ್ವೀಟ್‌ ಮಾಡಿದ್ದಾರೆ. ʼThalaivar171ʼ ಸಿನಿಮಾಕ್ಕಾಗಿ ಲೋಕೇಶ್‌ ಕನಕರಾಜ್‌ ಅವರು 6 ತಿಂಗಳ ಕಾಲ ಸೋಶಿಯಲ್‌ ಮೀಡಿಯಾದಿಂದ ಬ್ರೇಕ್‌ ತೆಗೆದುಕೊಳ್ಳಲಿದ್ದಾರೆ. ಈ ಸಮಯದಲ್ಲಿ ಅವರು ಪ್ರೀ- ಪ್ರೊಡಕ್ಷನ್‌ ಹಾಗೂ ಸ್ಕ್ರಿಪ್ಟ್‌ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ” ಎಂದು ಟ್ವೀಟ್‌ ಮಾಡಿದ್ದಾರೆ.

ಸಿನಿಮಾದಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಒಂದು ಅಂದಾಜಿನ ಪ್ರಕಾರ ಮಲ್ಟಿಸ್ಟಾರ್ಸ್‌  ಗಳು ಸಿನಿಮಾದಲ್ಲಿ ಕಾಣಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 2024 ರ ಮಾರ್ಚ್‌ ಅಥವಾ ಏಪ್ರಿಲ್‌ ವೇಳೆ ಸಿನಿಮಾ ಸಟ್ಟೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next