Advertisement

Yadagiri: ಡಿಎಚ್ಓ ಮನೆ ಮೇಲೆ ಲೋಕಾಯುಕ್ತರ ದಾಳಿ

10:27 AM Dec 05, 2023 | Team Udayavani |

ಯಾದಗಿರಿ: ಬೆಳ್ಳಂ ಬೆಳಿಗ್ಗೆ ಯಾದಗಿರಿ ಡಿಎಚ್ಓ ಮನೆ ಮೇಲೆ ದಾಳಿ ನಡೆಸಿ, ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ.

Advertisement

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಡಿಎಚ್ ಓ ಡಾ.ಪ್ರಭುಲಿಂಗ ಮಾನಕರ್ ಅವರ ಮನೆ ಮೇಲೆ ಡಿ.5ರ ಮಂಗಳವಾರ ಮುಂಜಾನೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎರಡು ಗಂಟೆಗಳಿಂದ ವಿವಿಧ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಯಾದಗಿರಿ ನಗರದಲ್ಲಿನ ಡಿಎಚ್ಓ ಕಚೇರಿ ಹಾಗೂ ಬಾಡಿಗೆ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.

ಯಾದಗಿರಿ ಡಿಎಚ್ಓ ಡಾ.ಪ್ರಭುಲಿಂಗ ಮಾನಕರ್ ಲೋಕಾಯುಕ್ತ ದಾಳಿ ವೇಳೆ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಕಲಬುರಗಿ ಲೋಕಾಯುಕ್ತ ಎಸ್ಪಿ ಎ.ಆರ್. ಕರ್ನುಲ್ ಮಾರ್ಗದರ್ಶನದಲ್ಲಿ ಹಾಗೂ ಲೋಕಾಯುಕ್ತ‌ ಡಿ.ವೈ.ಎಸ್.ಪಿ. ಹಣಮಂತರಾಯ ನೇತೃತ್ವದಲ್ಲಿ ಲೋಕಾಯುಕ್ತ ದಾಳಿ ನಡೆಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next