Advertisement

Lokayuktha Raid: ಚಿಕ್ಕಬಳ್ಳಾಪುರ, ಗಂಗಾವತಿ ಸೇರಿದಂತೆ ಹಲವೆಡೆ ಲೋಕಾಯುಕ್ತ ದಾಳಿ

09:38 AM Dec 05, 2023 | Team Udayavani |

ಚಿಕ್ಕಬಳ್ಳಾಪುರ: ರಾಮನಗರ ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರಾಗಿರುವ ಮುನೇಗೌಡ ಎಂಬವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡಸಿದ ಘಟನೆ ಡಿ. 5 ರ ಮಂಗಳವಾರ ನಡೆದಿದೆ.

Advertisement

ಚಿಕ್ಕಬಳ್ಳಾಪುರ ನಂದಿ ಕ್ರಾಸ್ ಬಳಿಯಿರುವ ಮುನೇಗೌಡ ಅವರ ಮನೆ ಮೇಲೆ ಜಿಲ್ಲಾ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ಮನೆ ಪರಿಶೀಲನೆ ನಡೆಸಿದ್ದಾರೆ.

ನಂದಿಕ್ರಾಸ್ ನಲ್ಲಿ ಭವ್ಯ ಬಂಗಲೆ ನಿರ್ಮಿಸಿರುವ ಮುನೇಗೌಡ ಕೋಟ್ಯಾಂತರ ರೂ. ‌ಅಕ್ರಮ ಆಸ್ತಿ ಹೊಂದಿರುವ ಆರೋಪ ಕೇಳಿ ಬಂದಿದೆ.

ಮುನೇಗೌಡ ಕಾರ್ಯನಿರ್ವಹಿಸುವ ರಾಮನಗರದ ಕಚೇರಿ, ಚಿಕ್ಕಬಳ್ಳಾಪುರ ಸಮೀಪ ಇರುವ ಮನೆ, ಬೆಂಗಳೂರಿನ ಕೆ.ಆರ್.ಪುರಂನಲ್ಲಿರುವ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ, ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಲೋಲಾಯುಕ್ತ ಪೊಲೀಸರು ಕಾರ್ಯಾಚರಣೆ.

ಗಂಗಾವತಿ: ಲೋಕಾಯುಕ್ತ ದಾಳಿ, ಅಕ್ರಮ ಆಸ್ತಿಯ ದಾಖಲೆ ಪರಿಶೀಲನೆ

Advertisement

ಗಂಗಾವತಿ: ಕಂಪ್ಲಿ ಪುರಸಭೆಯಲ್ಲಿ ನೈರ್ಮಲ್ಯ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ಶರಣಪ್ಪ ಭೋವಿ ಅವರ ಗಂಗಾವತಿಯಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ 6.30 ಕ್ಕೆ ದಾಳಿ ನಡೆಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ದೂರು ಬಂದ ಕಾರಣ ದಾಳಿ ನಡೆಸಲಾಗುತ್ತಿದ್ದು, ಅಕ್ರಮ ಆಸ್ತಿಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ನೈರ್ಮಲ್ಯ ಅಭಿಯಂತರ ಶರಣಪ್ಪ ಭೋವಿ ಅವರು ಗಂಗಾವತಿ ಹಾಗೂ ರಾಯಚೂರಿನ ನಗರಸಭೆಯಲ್ಲಿ ನೈರ್ಮಲ್ಯ ಅಭಿಯಂತರಾಗಿ ಕಾರ್ಯ ನಿರ್ವಹಿಸಿದ್ದು, ಸದ್ಯ ಗಂಗಾವತಿಯ ಟೀಚರ್ಸ್ ಕಾಲೋನಿಯಲ್ಲಿ ಸ್ವಂತ ಮೂರಂತಸ್ತಿನ ಮನೆ ಹೊಂದಿದ್ದು ಇದರಂತೆ ಕಂಪ್ಲಿ, ಗಂಗಾವತಿ ಸೇರಿದಂತೆ ರಾಜ್ಯದ ವಿವಿಧಡೆ ಅಪಾರ ಪ್ರಮಾಣದಲ್ಲಿ ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ದೂರು ಬಂದ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಲೋಕಾಯುಕ್ತ ಡಿ ವೈ ಎಸ್ ಪಿ ಸಲಿಂ ಪಾಷ ನಿರೀಕ್ಷಕ ಗಿರೀಶ್ ರೋಡಕರ್ ಸೇರಿದಂತೆ ಪೊಲೀಸ್ ಲೋಕಾಯುಕ್ತ ಪೊಲೀಸರು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.

ಸದ್ಯ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಸಂಜೆ ವೇಳೆ ಸ್ಪಷ್ಟ ಮಾಹಿತಿ ದೊರಕಲಿದೆ ಎಂದು ಲೋಕಾಯುಕ್ತ ಪೊಲೀಸರು ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next