Advertisement

ತಲಪಾಡಿ : ಆರ್ ಟಿ ಓ ಕಚೇರಿಗೆ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ

07:39 AM Nov 08, 2022 | Team Udayavani |

ಉಳ್ಳಾಲ: ತಲಪಾಡಿ ಆರ್ ಟಿ ಓ ಕಚೇರಿಗೆ ಲೋಕಾಯುಕ್ತ ಎಸ್.ಪಿ ಲಕ್ಷ್ಮೀಗಣೇಶ್ ನೇತೃತ್ವದ ತಂಡ ದಾಳಿ ನಡೆಸಿ ಸತತ ಮೂರು ಗಂಟೆಗಳಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.

Advertisement

ಕೇರಳ – ಕರ್ನಾಟಕ ಗಡಿಭಾಗ ಮೇಲಿನ ತಲಪಾಡಿಯಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ, ತಲಪಾಡಿ ತನಿಖಾ ಠಾಣೆಗೆ ಲೋಕಾಯುಕ್ತ ದಾಳಿ ನಡೆಸಿದೆ. ಲಾರಿ ಚಾಲಕರಿಂದ ಲಂಚ ಪಡೆಯುವ ಆರೋಪಗಳು ಈ ಹಿಂದೆ ಹಲವು ಬಾರಿ ವ್ಯಕ್ತವಾಗಿತ್ತು. ಈ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ.

ಸಂಜೆ 7 ಗಂಟೆಗೆ ತಂಡ ದಾಳಿ ನಡೆಸಿ ರಾತ್ರಿ 11 ರ ವರೆಗೆ ಚೆಕ್ ಪೋಸ್ಟ್ ಒಳಗಡೆ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಇದನ್ನೂ ಓದಿ : ಮಾನವನ ದೇಹಕ್ಕೆ ಪ್ರಯೋಗಾಲಯದಲ್ಲಿ ತಯಾರಿಸಿದ ರಕ್ತ ಕಣಗಳು!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next