Advertisement

ಬಿಬಿಎಂಪಿ ಎಂಜಿನಿಯರ್‌ಗಳಿಗೆ ಲೋಕಾಯುಕ್ತ ನೋಟಿಸ್‌

11:08 AM Sep 17, 2017 | Team Udayavani |

ಬೆಂಗಳೂರು: ಕಾಂಪ್ಯಾಕ್ಟರ್‌ ವಾಹನ ಖರೀದಿ ಅವ್ಯಹಾರ ಆರೋಪ ಸಂಬಂಧ ಉತ್ತರ ನೀಡುವಂತೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಎಂಜಿನಿಯರ್‌ಗಳಾದ ಹೇಮಲತಾ ಹಾಗೂ ಲೋಕೇಶ್‌ಗೆ ಲೋಕಾಯುಕ್ತ ನೋಟಿಸ್‌ ಜಾರಿಗೊಳಿಸಿದೆ.

Advertisement

ತಮ್ಮ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸೆ.18ಕ್ಕೆ ಮೊದಲು ಸೂಕ್ತ ದಾಖಲೆ ಹಾಗೂ ಆಕ್ಷೇಪಣೆ ಸಲ್ಲಿಸದಿದ್ದಲ್ಲಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೋಟಿಸನ್ನು ಅಧಿಕಾರಿಗಳಿಗೆ ಕಳಿಸಲಾಗಿದೆ. 2016ರಲ್ಲಿ 125 ಕಾಂಪ್ಯಾಕ್ಟರ್‌ ವಾಹನಹಾಗೂ 2017ರಲ್ಲಿ 46 ಕಸಗುಡಿಸುವ ಯಂತ್ರ ಹಾಗೂ 80 ಕಾಂಪ್ಯಾಕ್ಟರ್‌ಗಳನ್ನು ಬಿಬಿಎಂಪಿ ಖರೀದಿಸಿತ್ತು.

ಆದರೆ ವಾಹನಗಳ ಗುಣಮಟ್ಟ ಕಳಪೆಯಾಗಿದ್ದು, ಘನತ್ಯಾಜ್ಯ ವಿಭಾಗದ ಇಂಜಿನಿಯರ್‌ಗಳಾದ ಹೇಮಲತಾ ಹಾಗೂ ಲೋಕೇಶ್‌ ಹಾಗೂ ಜಂಟಿ ಆಯುಕ್ತ ಸಫ‌ìರಾಜ್‌ಖಾನ್‌ ಅಕ್ರಮ ಎಸಗಿದ್ದಾರೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ಕೋರಿ ಆರ್‌ಟಿಐ ಕಾರ್ಯಕರ್ತ ಸಾಯಿದತ್ತಾ ಜು.20ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next