Advertisement

Chitradurga: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಸಿಟಿ ರೌಂಡ್ಸ್

08:13 AM Aug 11, 2023 | Team Udayavani |

ಚಿತ್ರದುರ್ಗ: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಚಿತ್ರದುರ್ಗಕ್ಕೆ ಆಗಮಿಸಿದ್ದು, ಬೆಳ್ಳಂ ಬೆಳಗ್ಗೆ ಸಿಟಿ ರೌಂಡ್ಸ್ ಮಾಡುವ ಮೂಲಕ ಅಧಿಕಾರಿಗಳ ಚಳಿ ‌ಬಿಡಿಸುವ ಕೆಲಸ ಮಾಡುತ್ತಿದ್ದಾರೆ.

Advertisement

ಕಾವಾಡಿಗರಹಟ್ಟಿ ಕಲುಷಿತ ನೀರಿನ ಪ್ರಕರಣದ ಹಿನ್ನೆಲೆ ಆ.10ರ ಗುರುವಾರ ಸಂಜೆಯೇ ಚಿತ್ರದುರ್ಗಕ್ಕೆ ಆಗಮಿಸಿರುವ ಅವರು ಶುಕ್ರವಾರ ಬೆಳಗ್ಗೆ 7.30 ರಿಂದಲೇ ನಗರದ ವಿವಿಧ ರಸ್ತೆಗಳು, ಬಡಾವಣೆಗಳಲ್ಲಿ‌ ಸಂಚರಿಸುತ್ತಿದ್ದಾರೆ. ಮೆದೇಹಳ್ಳಿ ರಸ್ತೆ, ಹೊರಪೇಟೆ, ಬಸವೇಶ್ವರ ಟಾಕೀಸ್ ರಸ್ತೆ, ಜೆಸಿಆರ್ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಸಂಚರಿಸಿ ರಸ್ತೆಯ ಅಕ್ಕಪಕ್ಕದಲ್ಲಿ ಬಿದ್ದಿರುವ ಕಸದ ರಾಶಿ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗುರು ವೈಭವ ಪಕ್ಕದ ಖಾಲಿ‌ ನಿವೇಶನದಲ್ಲಿ ಕಂಡು ಬಂದ ಕಸದ ರಾಶಿ‌‌ ಕಂಡ‌ ಲೋಕಾಯುಕ್ತರು, ನಗರಸಭೆ ಆಯುಕ್ತ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡರು. ‌ಇದರ ಸ್ವಚ್ಛತೆ ನಿಮ್ಮ ಕೆಲಸ ಅಲ್ಲವೇ, ಮಾಡಲು ಆಗದಿದ್ದರೆ ಇಲ್ಲಿರಬೇಡಿ. ಆರೋಗ್ಯ ನಿರೀಕ್ಷಕರು ಹಾಗೂ ನಿಮ್ಮ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next