Advertisement

ಟೀಸಿ ನೀಡಲು ಲಂಚ ಸ್ವೀಕರಿಸಿದ ಪ್ರಾಂಶುಪಾಲ ಲೋಕಾಯುಕ್ತ ಬಲೆಗ

01:17 PM Jun 01, 2023 | Team Udayavani |

ಬೆಂಗಳೂರು: ಪರೀಕ್ಷೆಯ ಫಲಿತಾಂಶ ತಡೆಹಿಡಿದು ವರ್ಗಾವಣಾ ಪ್ರಮಾಣ ಪತ್ರ (ಟೀಸಿ) ನೀಡಲು 9ನೇ ತರಗತಿಯ ವಿದ್ಯಾರ್ಥಿಯ ಪಾಲಕರಿಗೆ 5 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟ ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

Advertisement

ರಾಜಾಜಿನಗರದ ಬಸ ವೇಶ್ವರ ಪ್ರೌಢಶಾಲೆಯ ಪ್ರಾಂಶುಪಾಲ ವಿ.ನಾರಾ ಯಣ ಬಂಧಿತ ಆರೋಪಿ. ರಾಜಾಜಿನಗರದ ಬಸವೇಶ್ವರ ಬಾಲಕರ ಅನುದಾನಿತ ಪ್ರೌಢಶಾಲೆಯಲ್ಲಿ 9 ತರಗತಿಯ ವಿದ್ಯಾರ್ಥಿಯ ಪರೀಕ್ಷೆಯ ಫಲಿತಾಂಶ ತಡೆ ಹಿಡಿದಿದ್ದರು. ಆದರೆ, ಟಿ.ಸಿ. ನೀಡಲು ವಿದ್ಯಾರ್ಥಿಯ ಸಮ್ಮುಖದಲ್ಲಿ ಅವರ ಪಾಲಕರಿಗೆ 5 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಲಂಚ ನೀಡಲು ಇಚ್ಛಿಸದ ವಿದ್ಯಾರ್ಥಿಯ ಪಾಲಕರು ನಾರಾಯಣ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಬುಧವಾರ ಶಾಲೆಯ ಆವರಣದಲ್ಲಿ ನಾರಾಯಣ 5 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಲಂಚದ ಹಣ ಜಪ್ತಿ ಮಾಡಿ ಬಂಧಿಸಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next