Advertisement
ರಾಜ್ಯದ 9 ಚೆಕ್‌ಪೋಸ್ಟ್‌ಗಳ ಮೇಲೆ ಶುಕ್ರವಾರ ಮುಂಜಾನೆ 4.30ಕ್ಕೆ ಏಕಕಾಲದಲ್ಲಿ ನೂರಾರು ಲೋಕಾಯಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ಪೈಕಿ 7 ಚೆಕ್‌ಪೋಸ್ಟ್‌ಗಳಲ್ಲಿ ಅಕ್ರಮವಾಗಿ ಸಾರಿಗೆ ಇಲಾಖೆ ಸಿಬ್ಬಂದಿ ಸಂಗ್ರಹಿಸಿಟ್ಟಿದ್ದ ಕಂತೆ-ಕಂತೆ ನೋಟುಗಳನ್ನು ಕಂಡು ಲೋಕಾ ಪೊಲೀಸರೇ ದಂಗಾಗಿದ್ದಾರೆ. ಇನ್ನು 2 ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಲೋಪ ಎಸಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ಮಹಿಳಾ ನಿರೀಕ್ಷಕಿಯೊಬ್ಬರು ಲೋಕಾ ಪೊಲೀಸರನ್ನು ಕಂಡ ಕೂಡಲೇ 14 ಸಾವಿರ ರೂ. ನಗದನ್ನು ಕಿಟಕಿಯಲ್ಲಿ ಎಸೆದ ಪ್ರಸಂಗವೂ ನಡೆದಿದೆ.
Related Articles
Advertisement
3 ತಿಂಗಳ ಹಿಂದೆ ಸ್ವಯಂ ಪ್ರೇರಿತ ದೂರು: ಜೂ.24ರಂದು ಲೋಕಾಯುಕ್ತ ನ್ಯಾ.ಜಿ.ಎಸ್.ಪಾಟೀಲ್ ವಿಜಯಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಚೆಕ್ ಪೋಸ್ಟ್‌ಗಳಲ್ಲಿ ನಡೆಯುತ್ತಿರುವ ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಮೌಖೀಕವಾಗಿ ದೂರು ನೀಡಿದ್ದರು. ಈ ಆರೋಪದ ಮೇಲೆ ಜೂ.30ರಂದು ಲೋಕಾಯುಕ್ತದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿತ್ತು.
ಆರೋಪಗಳೇನು ?: ಚೆಕ್‌ಪೋಸ್ಟ್‌ಗಳಲ್ಲಿ ತೆರಳುವ ಗೂಡ್ಸ್ ಲಾರಿಗಳು ಹಾಗೂ ಇತರ ವಾಹನಗಳನ್ನೇ ಟಾರ್ಗೆಟ್ ಮಾಡುವ ಅಲ್ಲಿನ ಸಿಬ್ಬಂದಿ ಲಂಚ ಕೊಡದಿದ್ದರೆ ಮುಂದೆ ಸಾಗಲು ಬಿಡುತ್ತಿರಲಿಲ್ಲ. ಯಾವುದೋ ನೆಪವೊಡ್ಡಿ ಲಾರಿಗಳನ್ನು ಸೀಜ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.