Advertisement

ಲೋಕಾ ಬಲಕ್ಕೆ ಸಂಪುಟ ಒಪ್ಪಿಗೆ

11:23 PM Aug 25, 2022 | Team Udayavani |

ಬೆಂಗಳೂರು: ಎಸಿಬಿ ರಚನೆ ಯಾದ ಮೇಲೆ ಅಸ್ತಿತ್ವ ಕಳೆದುಕೊಂಡಿದ್ದ ಲೋಕಾಯುಕ್ತ ಸಂಸ್ಥೆಯನ್ನು ಮತ್ತೆ ಬಲಪಡಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

Advertisement

ಗುರುವಾರ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ  ಎಸಿಬಿ ರದ್ದು ಬಗ್ಗೆ ಹೈಕೋರ್ಟ್‌ ತೀರ್ಮಾನ   ವನ್ನು ಒಪ್ಪಿಕೊಳ್ಳಲಾಗಿದ್ದು, ಪಕ್ಷದ ಪ್ರಣಾ ಳಿಕೆಯಲ್ಲಿ ಘೋಷಿಸಿ ದಂತೆ ಮುಂದು ವರಿಯಲು ತೀರ್ಮಾ ನಿಸಲಾಗಿದೆ.

ಸಭೆಯ ಅನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ

ಮಾಧುಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿ, ಲೋಕಾಯುಕ್ತ ಸಂಸ್ಥೆ ಯನ್ನು ಬಲಪಡಿಸಲು ಸೂಕ್ರ ಕ್ರಮ ಕೈಗೊಳ್ಳುವಂತೆ ಡಿಪಿಎಆರ್‌ ಕಾರ್ಯ ದರ್ಶಿಗೆ ಸೂಚಿಸಲಾಗಿದೆ. ಎಸಿಬಿ ರದ್ದಾದ ಬಳಿಕ ಎಲ್ಲ ಭ್ರಷ್ಟಾಚಾರ ಪ್ರಕರಣ ಗಳು ಲೋಕಾಯುಕ್ತದಲ್ಲಿಯೇ ದಾಖ ಲಾಗು ತ್ತವೆ. ಲೋಕಾಯುಕ್ತ ಬಲಪಡಿಸಲು ಯಾವುದೇ ಕಾನೂನು ತಿದ್ದುಪಡಿ ಅಗತ್ಯವಿಲ್ಲ ಎಂದು ಹೇಳಿದರು.

ಲೋಕಾಯುಕ್ತದಲ್ಲಿ ಕಾರ್ಯ ನಿರ್ವ ಹಿಸುತ್ತಿರುವ 7 ಜನ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳನ್ನು ಮುಂದಿನ ಒಂದು ವರ್ಷದ ಅವಧಿಗೆ ಮುಂದುವರಿಸಲಾಗುವುದು. ಲೋಕಾಯುಕ್ತಕ್ಕೆ ಅಗತ್ಯವಿರುವ ನುರಿತ ಸಿಬಂದಿಗೆ ನಿವೃತ್ತ ಅಧಿಕಾರಿಗಳನ್ನು ನೇಮಿಸಿ ಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

Advertisement

ಸೆ.12ರಿಂದ 10 ದಿನ ಅಧಿವೇಶನ :

ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನವನ್ನು ಸೆ. 12ರಿಂದ 10 ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ರಜಾ ದಿನಗಳನ್ನು ಹೊರತುಪಡಿಸಿ 10 ದಿನ ಅಧಿವೇಶನ ನಡೆಯಲಿದೆ. ನಿಯಮಗಳಂತೆ ಆರು ತಿಂಗಳೊಳಗೆ ಅಧಿವೇಶನ ನಡೆಸಬೇಕಿರುವುದರಿಂದ ಸೆಪ್ಟಂಬರ್‌ನಲ್ಲಿ ಅಧಿವೇಶನ ನಡೆಸಲಾಗುತ್ತಿದೆ.

ಕೊಡಗೂ ಸೇರಿದಂತೆ 8 ವಿವಿ ಸ್ಥಾಪನೆಗೆ ಸಮ್ಮತಿ :

ಬೆಂಗಳೂರು: ಕೊಡಗು ವಿವಿ ಸೇರಿದಂತೆ ಎಂಟು ನೂತನ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲು “ಕರ್ನಾಟಕ ವಿವಿಗಳ ಕಾಯ್ದೆ-2000’ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಸಮ್ಮತಿಸಿದೆ.

ಕೊಡಗು, ಚಾಮರಾಜನಗರ, ಹಾವೇರಿ, ಹಾಸನ, ಕೊಪ್ಪಳ, ಬಾಗಲ ಕೋಟೆ, ಬೀದರ್‌ ಮತ್ತು ಮಂಡ್ಯ ವಿ.ವಿ. ಗಳನ್ನು ಸ್ಥಾಪಿಸಲಾಗುತ್ತಿದೆ. ಯುಜಿಸಿ ನಿರ್ದೇಶನದ ಮೇರೆಗೆ ಹೊಸ ವಿವಿಗಳನ್ನು ಸ್ಥಾಪಿಸಲಾಗುತ್ತಿದ್ದು,  ಆರಂಭದಲ್ಲಿ ಕೇಂದ್ರ ಸರಕಾರ ಅನುದಾನ ನೀಡಲಿದೆ.

ಹೊಸ ವಿ.ವಿ.ಗಳ ಪೈಕಿ ಕ್ರಮವಾಗಿ ಕೊಡಗು ವಿವಿಯಲ್ಲಿ 24, ಚಾಮ ರಾಜ ನಗರ 18, ಹಾಸನ 36, ಹಾವೇರಿ 40, ಬೀದರ್‌ 140, ಕೊಪ್ಪಳ 40 ಮತ್ತು ಬಾಗಲಕೋಟೆ ವಿವಿ ಗಳು 71 ಕಾಲೇಜುಗಳನ್ನು ಹೊಂದಿರ ಲಿವೆ. ಇವುಗಳೊಂದಿಗೆ ಮಂಡ್ಯ ವಿ.ವಿ. ವ್ಯಾಪ್ತಿಗೆ ಆ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳು ಬರಲಿವೆ. ಮಂಡ್ಯ ವಿ.ವಿ. ಹೊರತು ಪಡಿಸಿ ಮಿಕ್ಕ 7 ವಿ.ವಿ.ಗಳ ಆರಂಭ ವನ್ನು ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ಈಗಾಗಲೇ ತಲಾ 2 ಕೋಟಿ ರೂ.ಗಳಂತೆ ಒಟ್ಟು 14 ಕೋಟಿ ರೂ. ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next