ಹೊಸದಿಲ್ಲಿ: ಕೋವಿಡ್-19 ಆತಂಕದ ನಡುವೆ ಇಂದು ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದೆ. ಬೆಳಿಗ್ಗೆ ಒಂಬತ್ತು ಗಂಟೆಗೆ ಇಂದಿನ ಕಲಾಪ ಆರಂಭವಾಗಿದ್ದು, ಅಗಲಿದ ಗಣ್ಯರಿಗೆ ಗೌರವ ಸಂತಾಪ ಸೂಚಿಸಲಾಯಿತು.
ಇತ್ತೀಚೆಗೆ ಅಗಲಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸಂಗೀತ ಲೋಕದ ಪಂಡಿತ್ ಜಸ್ರಾಜ್, ಮಧ್ಯ ಪ್ರದೇಶ ರಾಜ್ಯಪಾಲರಾಗಿದ್ದ ಲಾಲ್ಜಿ ಟಂಡನ್, ಛತ್ತೀಸ್ ಗಡ್ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ, ಉತ್ತರ ಪ್ರದೇಶದ ಸಚಿವೆಯಾಗಿದ್ದ ಕಮಲಾ ರಾಣಿ, ರವಿವಾರ ನಿಧನರಾದ ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್ ಸೇರಿದಂತೆ ಈ ವರ್ಷ ನಿಧನರಾದ ಗಣ್ಯರಿಗೆ ಸದನದಲ್ಲಿ ಗೌರವ ಸಂತಾಪ ಸೂಚಿಸಲಾಯಿತು.
ಇದನ್ನೂ ಓದಿ: ಸುಲಲಿತವಾಗಿ ನಡೆದ ನೀಟ್: 3,843 ಪರೀಕ್ಷಾ ಕೇಂದ್ರಗಳಲ್ಲಿ 90% ವಿದ್ಯಾರ್ಥಿಗಳು ಹಾಜರು
ಇದಾದ ಬಳಿಕ ಕಲಾಪವನ್ನು ಒಂದು ಗಂಟೆಗಳ ಕಾಲ ಮುಂದೂಡಲಾಯಿತು.
Related Articles
18 ದಿನ ಅಧಿವೇಶನ
ಇಂದಿನಿಂದ ಆಗಸ್ಟ್ 1ರವರೆಗೆ ಮುಂಗಾರು ಅಧಿವೇಶನ ನಡೆಯಲಿದೆ. ಶನವಾರ ಮತ್ತು ರವಿವಾರ ರಜೆ ಇರುವುದಿಲ್ಲ. ಎಪಿಎಂಸಿ ತಿದ್ದುಪಡಿ ಕಾಯ್ದೆ ಮಾತ್ರವಲ್ಲದೆ 11 ಆಧ್ಯಾದೇಶಗಳು ಮಸೂದೆ ರೂಪದಲ್ಲಿ ಮಂಡನೆಯಾಗಲಿದೆ.