ಪಾದಯಾತ್ರೆ ಉದ್ದಕ್ಕೂ ವೀರರಾಣಿ ಕಿತ್ತೂರ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಜ್ಯೋತಿಬಾ ಫುಲೆ ಪರ ಅಭಿಮಾನಿಗಳು ಜಯಘೋಷಣೆ ಮುಗಿಲು ಮುಟ್ಟಿತ್ತು. ವೀರ ಮಹನೀಯರ ಮೂರ್ತಿ
ತೆರವುಗೊಳಿಸಿದ ತಾಲೂಕಾಡಳಿತ, ಜಿಲ್ಲಾಡಳಿತ, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Advertisement
ಪಾದಯಾತ್ರಿಗಳು ಲೋಕಾಪುರಕ್ಕೆ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ವೆಂಕಟಾಪುರಕ್ಕೆ ತೆರಳಿ ರಾಯಚೂರು- ಬೆಳಗಾವಿ ಹೆದ್ದಾರಿಯನ್ನು ಬಂದ್ ಮಾಡಿ ರಸ್ತೆ ತಡೆ ನಡೆಸಿದರು. ನಂತರ ಕಾಶಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬಹಿರಂಗ ಸಭೆಯಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಯ ಮೃತ್ಯುಂಜಯ ಸ್ವಾಮೀಜಿಮಾತನಾಡಿ, ಸ್ವಾತಂತ್ರ್ಯಗೋಸ್ಕರ ವೀರರಾಣಿ ಚನ್ನಮ್ಮಾ, ಸಂಗೊಳ್ಳಿ ರಾಯಣ್ಣ ತಮ್ಮ ಪ್ರಾಣವನ್ನು ತ್ಯಾಗ, ಬಲಿದಾನ ಮಾಡಿ ಹೋರಾಟ ಮಾಡಿದ್ದಾರೆ ಅಂತವರ ಪ್ರತಿಮೆಗಳಿಗೆ
ಅಗೌರವ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು. ಕೂಡಲೇ ಸರಕಾರ ಮಹನೀಯರ ಮೂರ್ತಿಗಳನ್ನು ಪುನರ್ ಪ್ರತಿಷ್ಠಾಪಿಸಲು ಒತ್ತಾಯಿಸಿದರು.
ದೇಶಭಕ್ತರಿಗೆ ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿದರು. ಗಣಿ ಮತು ಮುಗಳಖೋಡದ ಚಿನ್ಮಾಯನಂದ ಸ್ವಾಮೀಜಿ, ಹುಲಜಂತಿಯ ಪಟ್ಟದದೇವರು ಮಾಳಿಂಗರಾಯ ಸ್ವಾಮೀಜಿ,
ನಾಗರಾಳದ ಲಕ್ಕಪ್ಪ ಮಹಾರಾಜರು, ಬುದ್ನಿಯ ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ.ಜಿ.ಬಿಸನಕೊಪ್ಪ, ಕುರುಬ ಸಮಾಜದ ಅಧ್ಯಕ್ಷ ಮಲ್ಲಪ್ಪ ಮಂಟೂರ, ಯಲ್ಲಪ್ಪ ಹೆಗಡೆ, ವಿನಯ ತಿಮ್ಮಾಪುರ, ಗೋವಿಂದಪ್ಪ ಕೌಲಗಿ, ಗುರು ಉದಪುಡಿ, ಮಹೇಶ ಮಳಲಿ, ಪರಮಾನಂದ ಕುಟ್ರಟ್ಟಿ, ಸಿದ್ದಣ್ಣ ಅವರಾದಿ, ಮಹಾದೇವ ಹೊಸಟ್ಟಿ, ಸಿದ್ರಾಮ ಕುರಿ, ಮುತ್ತಪ್ಪ ಗಡ್ಡದವರ, ಸಿದ್ದಣ್ಣ ಸೊನ್ನದ, ಲಕ್ಕಪ್ಪ ಕರೊಲಿ ಇದ್ದರು.