Advertisement

ಲೋಕಾಪುರ: ಮಧ್ವ ಜಯಂತಿ ಆಚರಣೆ

12:09 PM Feb 07, 2020 | Suhan S |

ಲೋಕಾಪುರ: ವೇದವ್ಯಾಸರ ಬ್ರಹ್ಮಸೂತ್ರಗಳಿಗೆ ಸುಲಭ ಮತ್ತು ಸಂಶಯಾತೀತ ಭಾಷ್ಯಗಳನ್ನು ರಚಿಸಿದವರು ಜಗದ್ಗುರು ಮದ್ವಾಚಾರ್ಯರು ಎಂದು ಆರ್‌.ಎಸ್‌. ಜೋಶಿ ಹೇಳಿದರು.

Advertisement

ಸ್ಥಳೀಯ ರಾಘವೇಂದ್ರ ಮಠದಲ್ಲಿ ವಿಪ್ರ ಸಮಾಜದ ಆಶ್ರಯದಲ್ಲಿ ನಡೆದ ಮಧ್ವಜಯಂತಿ ಉತ್ಸವದಲ್ಲಿ ಅವರು ಮಧ್ವಜಯಂತಿ ಸಂದೇಶ ಉಪನ್ಯಾಸ ನೀಡಿ ಮಾತನಾಡಿದ ಅವರು, ಜಗತ್ತಿನ ಅಸ್ತಿತ್ವ ಮತ್ತು ಭಗವಂತನು ಸರ್ವೋತ್ತಮದ ಬಗ್ಗೆ ಸಾಮಾನ್ಯರಲ್ಲಿರಬಹುದಾದ ಗೊಂದಲಗಳಿಗೆ ಮಧ್ವಾಚಾರ್ಯರು ನೀಡಿದ ಸುಲಭತತ್ವ ಮತ್ತು ಭಕ್ತಿ ಸಂದೇಶಗಳು ಸರ್ವರಿಗೂ ಅನುಕರಣೀಯವಾಗಿವೆ ಎಂದರು.

ನಿವೃತ್ತ ಶಿಕ್ಷಕ ಗುರುರಾಜ ಜೋಶಿ ಮಧ್ವಾಚಾರ್ಯರ ಸಂದೇಶಗಳನ್ನು ಭಕ್ತರಿಗೆ ತಿಳಿಸಿದರು. ಮಧ್ವನವಮಿ ನಿಮಿತ್ತ ಅಷ್ಟೋತ್ತರ, ಸತ್ಯನಾರಾಯಣ ಪೂಜೆ, ಹೋಮ, ಪಲ್ಲಕ್ಕಿ ಸೇವೆ, ಅಭಿಷೇಕ, ಮಂಗಳಾರತಿ, ಮಹಾನೈವೇದ್ಯ, ಅನ್ನಸಂತರ್ಪಣೆ, ರಾಘವೇಂದ್ರ ಮಠದಲ್ಲಿ ರಥೋತ್ಸವ ಜರುಗಿತು. ರಾಘವೇಂದ್ರ ಮಠದಲ್ಲಿ ರಥೋತ್ಸವ ಸಾಗುತ್ತಿದ್ದಂತೆ ಮಹಿಳೆಯರು, ಯುವಕರು, ಮಕ್ಕಳು ಕೋಲಾಟ, ಭಜನೆ, ಕೀರ್ತನೆಗಳು ನಡೆದವು. ಸಮಾಜ ಬಾಂಧವರಾದ ಬಿ.ಡಿ. ಚಿನಗುಂಡಿ, ಬಿ.ಎಲ್‌. ಬಬಲಾದಿ, ಆನಂದಚಾರ್ಯ ಜಂಬಗಿ, ಅಣ್ಣಾರಾವ ದೇಶಪಾಂಡೆ, ಗೋವಿಂದರಾವ್‌ ಕುಲಕರ್ಣಿ, ಗೋಪಾಲ ದೇಶಪಾಂಡೆ, ಸಂತೋಷ ದೇಶಪಾಂಡೆ, ಪವನ ಸೋಮಾಪುರ, ಹಣಮಂತರಾವ ಕುಲಕರ್ಣಿ, ರಾಹುಲ ಗೂಡುರ, ರಾಘವೇಂದ್ರ ಮುರಗೋಡ, ಲಲಿತಾ ಜೋಶಿ, ಹೇಮಕ್ಕಾ ಜೋಶಿ, ಪದ್ಮಾವತಿ ಕುಲಕರ್ಣಿ, ಮಂಜುಳಾ ಬಬಲಾದಿ, ವಿದ್ಯಾ ಕುಲಕರ್ಣಿ, ಉಮಾ ಕುಲಕರ್ಣಿ, ರತ್ನಾ ದೇಶಪಾಂಡೆ, ವನಿತಾ ಜೋಶಿ, ರಾಧಿಕಾ ಸೋಮಾಪುರ, ಆರತಿ ಜಂಬಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next