Advertisement

27ಕ್ಕೆ ಲೋಕ ‌ಅದಾಲತ್‌: 4 ಸಾವಿರ ಕೇಸು ಇತ್ಯರ್ಥ ಗುರಿ

10:41 AM Mar 18, 2021 | Team Udayavani |

ಹಾಸನ: ಜಿಲ್ಲೆಯ ಎಲ್ಲಾ ಕೋರ್ಟ್‌ಗಳಲ್ಲಿ ಮಾ.27ರಂದು ಬೃಹತ್‌ ಲೋಕ ಅದಾಲತ್‌ಹಮ್ಮಿಕೊಂಡು 4000 ಪ್ರಕರಣ ಇತ್ಯರ್ಥಪಡಿಸುವ ಗುರಿ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್‌ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ರವಿಕಾಂತ್‌ ತಿಳಿಸಿದರು.

Advertisement

ನಗರದ ಜಿಲ್ಲಾ ನ್ಯಾಯಲಯ ಆವರಣದಲ್ಲಿರುವಎಡಿಆರ್‌ ಕಟ್ಟಡದಲ್ಲಿ ಸುದ್ದಿಗೋಷ್ಠಿ ನಡೆಸಿ ಬೃಹತ್‌ ಲೋಕ ಅದಾಲತ್‌ ಕುರಿತು ಮಾಹಿತಿ ನೀಡಿದಅವರು, ಕೋರ್ಟ್‌ಗಳಲ್ಲಿ ಬಾಕಿ ಇರುವ ವಿವಿಧ ವ್ಯಾಜ್ಯಗಳು ಬಗೆಹರಿಸಬಹುದಾದ ಕ್ರಿಮಿನಲ್‌, ಚೆಕ್‌ ಬೌನ್ಸ್‌, ಬ್ಯಾಂಕ್‌ ವಸೂಲಾತಿ, ಮೋಟಾರು ವಾಹನವಿವಾದ, ಕೌಟುಂಬಿಕ, ಭೂಸ್ವಾಧೀನ, ಕಂದಾಯ,ಜನನ ಮತ್ತು ಮರಣ ನೋಂದಣಿ, ಜೀವನಾಂಶ,ಇನ್ನಿತರೆ ಲಘು ಕ್ರಿಮಿನಲ್‌ ಕೇಸುಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲುಅವಕಾಶವಿದೆ ಎಂದು ಹೇಳಿದರು.

ಸಂಬಂಧಪಟ್ಟ ಕಕ್ಷಿಗಾರರು ವಕೀಲರ ಮೂಲಕ ಅಥವಾ ಖುದ್ದಾಗಿ ರಾಜಿ ಸಂಧಾನದ ಮೂಲಕಪ್ರಕರಣ ಇತ್ಯರ್ಥಪಡಿಕೊಂಡು ಲೋಕ್‌ ಅದಾಲತ್‌ನ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಿವರಿಸಿದರು.

ಸಮಯ, ಹಣ ಉಳಿತಾಯ: ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥದಿಂದ ಸಮಯ, ಹಣ ಉಳಿಸಬಹುದಾಗಿದೆ. ಉಭಯ ಪಕ್ಷಗಾರರನಡುವಿನ ಬಾಂಧವ್ಯವು ವೃದ್ಧಿಸುತ್ತದೆ. ಹೀಗಾಗಿ ಕಕ್ಷಿದಾರರು ಲೋಕ್‌ ಅದಾಲತ್‌ನ ಅನುಕೂಲ ಪಡೆದುಕೊಳ್ಳಬಹುದು ಹೇಳಿದರು.

4000 ಪ್ರಕರಣ ಇತ್ಯರ್ಥದ ಗುರಿ: ಹಾಸನದ ಎಲ್ಲಾಕೋರ್ಟ್‌ಗಳಲ್ಲಿ ಒಟ್ಟು 72,881 ಪ್ರಕರಣ ಬಾಕಿಇದ್ದು, 16,738 ಪ್ರಕರಣ ರಾಜಿ ಸಂಧಾನದಮೂಲಕ ಇತ್ಯರ್ಥಕ್ಕೆ ಗುರ್ತಿಸಲಾಗಿದೆ. ಆ ಪೈಕಿ ಸದ್ಯಕ್ಕೆ 6751 ಪ್ರಕರಣಗಳಿಗೆ ಸಂಬಂಧಿಸಿದವರು ಲೋಕ ಅದಾಲತ್‌ ಮೂಲಕ ಇತ್ಯರ್ಥಕ್ಕೆ ನೋಂದಾಯಿಸಿ ಕೊಂಡಿದ್ದಾರೆ. ಮೇ 27 ರಂದುನಡೆಯುವ ಲೋಕ್‌ ಅದಾಲತ್‌ನಲ್ಲಿ 4000 ಕ್ಕೂ ಹೆಚ್ಚಿನ ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.

Advertisement

ಹಿಂದೆ 4500 ಪ್ರಕರಣ ಇತ್ಯರ್ಥ: ಈ ಹಿಂದೆ ನಡೆದ ಡಿಸೆಂಬರ್‌ನಲ್ಲಿ ಲೋಕ್‌ ಅದಾಲತ್‌ ನಡೆದಿತ್ತು. ಆಗ4500 ಪ್ರಕರಣ ಇತ್ಯರ್ಥವಾಗಿದ್ದವು. ಹೈಕೋಟ್‌ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಪ್ರತಿ ಮೂರು ತಿಂಗಳಿಗೊಮ್ಮೆಅದಾಲತ್‌ ನಡೆಸಲಾಗುವುದು ಎಂದು ತಿಳಿಸಿದರು. ಕಕ್ಷಿದಾರರು ಬೃಹತ್‌ ಲೋಕ ಅದಾಲತ್‌ನಲ್ಲಿಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದುನ್ಯಾ.ಬಿ.ಕೆ.ರವಿಕಾಂತ್‌ ಕೋರಿದ್ದಾರೆ. ಜಿಲ್ಲಾ ವಕೀಲರಸಂಘದ ಅಧ್ಯಕ್ಷ ಜೆ.ಪಿ.ಶೇಖರ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next