ರಬಕವಿ-ಬನಹಟ್ಟಿ: ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಂಡರೆ ಕಕ್ಷಿದಾರರಲ್ಲಿ ಸೌಹರ್ದತೆ ಮೂಡುತ್ತದೆ. ಆದ್ದರಿಂದ ಕಕ್ಷಿದಾರರ ತಮ್ಮ ಚಿಕ್ಕಪುಟ್ಟ ಮನಸ್ತಾಪಗಳನ್ನು ಬದಿಗಿಟ್ಟು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಪ್ರಕರಣಗಳನ್ನು ಬಗೆಹರಿಸಿಕೊಂಡು ಉತ್ತಮ ಜೀವನ ಸಾಗಿಸಬೇಕು ಎಂದು ಸ್ಥಳೀಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಕಿರಣಕುಮಾರ ವಡಗೇರಿ ತಿಳಿಸಿದರು.
ಶನಿವಾರ ಹಮ್ಮಿಕೊಂಡ ರಾಷ್ಟ್ರೀಯ ಬೃಹತ್ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ 130 ಪ್ರಕರಣಗಳಲ್ಲಿ ೮೪ ಪ್ರಕರಣಗಳು ಇತ್ಯರ್ಥಗೊಂಡು, ರೂ. 2,28,46,848 ಸಂಧಾನದ ಪರಿಹಾರ ಮೊತ್ತವನ್ನು ನೀಡಲಾಗಿದೆ. ಲೋಕ್ ಅದಾಲತ್ ಯಶಸ್ವಿಯಾಗಬೇಕಾದರೆ ಕಕ್ಷಿದಾರರ ಮತ್ತು ವಕೀಲರ ಸಹಕಾರ ಬಹಳಷ್ಟು ಮುಖ್ಯವಾಗಿದೆ ಎಂದು ಕಿರಣಕುಮಾರ ವಡಗೇರಿ ತಿಳಿಸಿದರು.
ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಧೀಶೆ ಶುಷ್ಮ ಟಿ.ಸಿ ಮಾತನಾಡಿ, ಕಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ 764 ಪ್ರಕರಣಗಳಲ್ಲಿ 291 ಪ್ರಕರಣಗಳು ಇತ್ಯರ್ಥಗೊಂಡಿದ್ದು, ರೂ. 96,33,868 ಸಂಧಾನದ ಮೊತ್ತವನ್ನು ನೀಡಲಾಗಿದೆ ಎಂದರು.
ವಕೀಲರಾದ ಎಸ್.ಜಿ.ಸಲಬನ್ನವರ ಮತ್ತು ವಿಜಯಲಕ್ಷ್ಮಿ ಕೌಲಾಪುರ ಸಂಧಾನಕಾರ ವಕೀಲರಾಗಿದ್ದರು. ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಕಾರ್ಯದರ್ಶಿ ಮುಕುಂದ ಕೋಪರ್ಡೆ, ಎಂ.ಜಿ.ಕೆರೂರ, ರಮೇಶ ಎಕ್ಸಂಬಿ, ಬಸವರಾಜ ಪುಟಾಣಿ, ಬಸವರಾಜ ಗುರುವ, ಬಸವರಾಜ ಭೂತಿ, ಶಿವಕುಮಾರ ಷಣ್ಮುಖ, ಶಶಿ ಮೋಪಗಾರ, ಭೀಮಶಿ ಯಲ್ಲಟ್ಟಿ, ಸುಜಾತಾ ನಿಡೋಣಿ, ಅಶ್ವಿನಿ ಹಾರೂಗೇರಿ, ಲಾಳಕೆ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ: ಬೆಂಗಳೂರು ಏರೋ ಇಂಡಿಯಾ ಶೋ ಪೂರ್ವಾಭ್ಯಾಸ ; ಟ್ರಾಫಿಕ್ ನಲ್ಲಿ ಸಿಲುಕಿ ಜನರ ಪರದಾಟ