Advertisement

ಆರ್‌ಟಿಐ ತಿದ್ದುಪಡಿ ಕಾಯ್ದೆಗೆ ಲೋಕಸಭೆ ಅನುಮೋದನೆ

01:25 AM Jul 23, 2019 | Team Udayavani |

ನವದೆಹಲಿ: ವಿಪಕ್ಷಗಳ ವಿರೋಧದ ನಡುವೆಯೂ ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿಗೆ ಲೋಕಸಭೆ ಸೋಮವಾರ ಅನುಮೋದನೆ ನೀಡಿದೆ. ತಿದ್ದುಪಡಿ ಕಾಯ್ದೆಯ ಪ್ರಕಾರ ಮಾಹಿತಿ ಆಯುಕ್ತರ ಸಂಬಳ ಹಾಗೂ ಸೇವಾವಧಿಯನ್ನು ಕೇಂದ್ರ ಸರ್ಕಾರ ನಿರ್ಧರಿಸಲಿದೆ.

Advertisement

ಈವರೆಗೆ ಮಾಹಿತಿ ಆಯುಕ್ತರನ್ನು ಚುನಾವಣಾ ಆಯುಕ್ತರಿಗೆ ಸಮಾನ ಮಾನ್ಯತೆ ನೀಡಲಾಗುತ್ತಿತ್ತು. ಇದರಿಂದಾಗಿ ಮಾಹಿತಿ ಆಯೋಗವು ಹಲ್ಲಿಲ್ಲದ ಹಾವಿನಂತಾಗುತ್ತದೆ ಎಂದು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಇದನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ, ತಿದ್ದುಪಡಿಯಲ್ಲಿ ಪಾರದರ್ಶಕತೆ ಮತ್ತು ಸ್ವಾಯತ್ತತೆಯ ಬಗ್ಗೆ ಯಾವುದೇ ಬದಲಾವಣೆ ಮಾಡಿಲ್ಲ ಎಂದಿದೆ.

ತಿದ್ದುಪಡಿಗೆ ವಿರೋಧಿಸಿದ ವಿಪಕ್ಷಗಳು, ಮತಕ್ಕೆ ಹಾಕಬೇಕೆಂದು ಆಗ್ರಹಿಸಿದರು. ಆಗ 218-79 ಮತಗಳಿಂದ ವಿಪಕ್ಷಗಳಿಗೆ ಸೋಲಾಯಿತು. ಇದಕ್ಕೆ ಸ್ಪಷ್ಟನೆ ಬೇಕೆಂದು ಕಾಂಗ್ರೆಸ್‌ ಲೋಕಸಭೆ ನಾಯಕ ಅಧಿರ್‌ ರಂಜನ್‌ ಚೌಧರಿ ಪ್ರತಿಭಟಿಸಿದರಾದರೂ, ಸ್ಪೀಕರ್‌ ಅನುವು ಮಾಡಲಿಲ್ಲ. ಇದರಿಂದ ಸಿಟ್ಟಾದ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.

ಆ್ಯಂಬ್ಯುಲೆನ್ಸ್‌ ಚಾಲಕರಿಗೆ ತರಬೇತಿ: ಅಪಘಾತದ ಸಮಯದಲ್ಲಿ ತುರ್ತಾಗಿ ಆಸ್ಪತ್ರೆಗೆ ದಾಖಲಿಸುವುದರ ಜೊತೆಗೆ ಪ್ರಥಮ ಚಿಕಿತ್ಸೆಯನ್ನು ಅಪಘಾತದ ಸ್ಥಳದಲ್ಲೇ ಒದಗಿಸುವುದಕ್ಕಾಗಿ ಆಂಬುಲೆನ್ಸ್‌ ಚಾಲಕರಿಗೆ ಪ್ರಥಮ ಚಿಕಿತ್ಸೆ ತರಬೇತಿಯನ್ನು ನೀಡಲಾಗುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಲೋಕಸಭೆಗೆ ಸೋಮವಾರ ತಿಳಿಸಿದ್ದಾರೆ. ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ವಿಶ್ವದಲ್ಲೇ ಇದು ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಬಹುತೇಕ ಪ್ರಕರಣಗಳಲ್ಲಿ ಮೊದಲ ಒಂದು ಗಂಟೆಯಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೇ ಸಾವು ಸಂಭವಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next