Advertisement
ಮೊದಲ ಹಂತದಲ್ಲಿ ಎ. 26ರಂದು ಮತದಾನ ನಡೆಯಲಿರುವ 14 ಸ್ಥಾನ ಗಳಿಗೆ 247 ಸ್ಪರ್ಧಿಗಳು ಕಣದಲ್ಲಿದ್ದರೆ, ಮೇ 7ರಂದು ನಡೆಯಲಿರುವ 2ನೇ ಹಂತದಲ್ಲಿ 14 ಸ್ಥಾನಗಳಿಗೆ 227 ಅಭ್ಯರ್ಥಿಗಳು ಸೇರಿ ಒಟ್ಟು 28 ಸ್ಥಾನಗಳಿಗೆ 474 ಹುರಿಯಾಳುಗಳು ಸ್ಪರ್ಧಾಕಣದಲ್ಲಿ ಇದ್ದಾರೆ. ಈ ಪೈಕಿ ಒಟ್ಟು 432 ಪುರುಷರು, 42 ಮಹಿಳಾ ಅಭ್ಯರ್ಥಿಗಳು. ದಾವಣಗೆರೆಯಲ್ಲಿ ಗರಿಷ್ಠ 30 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.
ಬೆಂಗಳೂರು: ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ರಾಜ್ಯದ14 ಲೋಕಸಭಾ ಕೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇನ್ನೆರಡು ದಿನಗಳಲ್ಲಿ ತೆರೆ ಬೀಳಲಿದೆ. ಹೀಗಾಗಿ ಪ್ರಚಾರ ತಾರಕಕ್ಕೆ ಏರಲಿದೆ. ಎ. 26 ರಂದು ರಾಜ್ಯದಲ್ಲಿ ಮತದಾನ ನಡೆಯಲಿರುವುದರಿಂದ ಗುರು ವಾರ ಒಂದು ದಿನ ಅಭ್ಯರ್ಥಿಗಳಿಗೆ ಮನೆ-ಮನೆ ಪ್ರಚಾರಕ್ಕೆ ಅವಕಾಶ ಸಿಗಲಿದೆ. ಚುನಾವಣೆ ಘೋಷಣೆಯಾದ ಬಳಿಕ ಪಕ್ಷಗಳು ಹಲವು ದಿನ ಅಭ್ಯರ್ಥಿಗಳ ಆಯ್ಕೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದವು. ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ವಂಚಿತರನ್ನು ಸಮಾಧಾನಪಡಿಸುವ ಕಾಯಕಕ್ಕೆ ಹೆಚ್ಚು ಸಮಯ ಬೇಕಾದ್ದರಿಂದ ಅಭ್ಯರ್ಥಿ ಗಳು, ಪ್ರಮುಖ ನಾಯಕರು ಪ್ರಚಾರ ಕಣಕ್ಕೆ ಧುಮುಕಿದ್ದೇ ತಡ ವಾಗಿ. ಅಲ್ಪ ಕಾಲದಲ್ಲಿ ಮತದಾರರ ಮನವೊಲಿಸುವ ಸವಾಲು ಇದ್ದುದ ರಿಂದ ಕೊನೆಯ ಘಳಿಗೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವಂತಾಗಿದೆ.
Related Articles
Advertisement
ರಾಹುಲ್, ಪ್ರಿಯಾಂಕಾ ಪ್ರಚಾರಮೈಸೂರು, ಚಾಮರಾಜನಗರ ಕ್ಷೇತ್ರಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿ ಪ್ರಚಾರ ನಡೆಸಿದ್ದ ಸಿಎಂ ಸಿದ್ದರಾಮಯ್ಯ, ಕೊನೆಯ ಅವಧಿಯಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೂ ಸಮಯ ಕೊಟ್ಟರು. ಇನ್ನು ಡಿ.ಕೆ. ಶಿವಕುಮಾರ್ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಹೆಚ್ಚು ನಿಗಾ ಇಟ್ಟು ಪ್ರಚಾರ ಕೈಗೊಂಡಿದ್ದರು. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎರಡು ಸುತ್ತಿನ ಪ್ರಚಾರವನ್ನಷ್ಟೇ ನಡೆಸಿದ್ದು, ಇತ್ತೀಚೆಗೆ ರಾಹುಲ್ ಗಾಂಧಿ ಮಂಡ್ಯ ಮತ್ತು ಕೋಲಾರದಲ್ಲಿ ಪ್ರಚಾರ ಮಾಡಿದರು. ಈಗ ಪ್ರಿಯಾಂಕಾ ಗಾಂಧಿ ಕೂಡ ಒಂದು ಸುತ್ತಿನ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಬರಲಿದ್ದಾರೆ. ಮಗ್ಗಲು ಬದಲಿಸಿದ ಪ್ರಚಾರ ತಂತ್ರಗಳು
ಆರಂಭದಲ್ಲಿ ನೀರಸವೆನಿಸಿದ್ದ ಪ್ರಚಾರದ ತಂತ್ರಗಳು ಮತದಾನದ ದಿನ ಸಮೀಪಿಸುತ್ತಿದ್ದಂತೆ ರಂಗು ಪಡೆಯ ಲಾರಂಭಿಸಿದೆ. ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವ ಭರದಲ್ಲಿ ಭಾಷೆ ಬಳಕೆ ಕೂಡ ಅನರ್ಥಗಳಿಗೆ ಎಡೆ ಮಾಡಿಕೊಟ್ಟಿದೆ. ಗ್ಯಾರಂಟಿ ಮತ್ತು ಬೆಲೆಯೇರಿಕೆ ವಿಚಾರವನ್ನು ಸಮೀಕರಿಸಿ ಮತದಾರರಿಗೆ ಅರ್ಥ ಮಾಡಿಸಲು ಯತ್ನಿಸಿದ ಬಿಜೆಪಿ ಒಂದೆಡೆಯಾದರೆ, ಗ್ಯಾರಂಟಿಯ ಸತ್ಪರಿಣಾಮಗಳು, ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಇತ್ಯಾದಿ ಅಂಶಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಪ್ರಚಾರ ಮಾಡುತ್ತಿತ್ತು. ಅನಂತರ ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ನಿಲ್ಲುತ್ತದೆ ಎಂದು ಬಿಜೆಪಿ ಆರೋಪಿಸಿದರೆ, ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲುವುದಿಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿಕೊಂ ಡಿತ್ತು. ಈಗ ಚೊಂಬು, ಡೇಂಜರ್ ಜಾಹೀರಾತು, ಕಾನೂನು ಸುವ್ಯವಸ್ಥೆ ವಿಚಾರಗಳು ಪ್ರಚಾರದ ಪ್ರಮುಖ ಅಸ್ತ್ರಗಳಾಗಿವೆ.