Advertisement

ತ್ರಿವಳಿ ತಲಾಖ್ ಮಸೂದೆಗೆ ಅಸ್ತು ಎಂದ ಲೋಕಸಭೆ

11:25 AM Jul 26, 2019 | Team Udayavani |

ನವದೆಹಲಿ: ಮುಸ್ಲಿಂ ಮಹಿಳೆಯರ ಹಿತರಕ್ಷಣೆಯ ಉದ್ದೇಶವನ್ನು ಹೊಂದಿರುವ ತ್ರಿವಳಿ ತಲಾಖ್ ಮಸೂದೆಗೆ ಅಂಗೀಕಾರ ದೊರಕಿದೆ. ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ, 2019 ಅನ್ನು ಲೋಕಸಭೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರಕಾರವು ಗುರುವಾರ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಲೋಕಸಭೆಯಲ್ಲಿ ಮಂಡಿಸಿತ್ತು. ಕೇಂದ್ರ ಸಚಿವ ರವಿಶಂಕರ್ ಅವರು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು.

Advertisement

ಕಾಂಗ್ರಸ್, ಸಮಾಜವಾದಿ ಪಕ್ಷ, ಟಿ.ಎಂ.ಸಿ. ಮತ್ತು ಡಿ.ಎಂ.ಕೆ. ಪಕ್ಷಗಳು ಈ ಮಸೂದೆಗೆ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದವು. ಆದರೆ ಅಂತಿಮವಾಗಿ ಮಸೂದೆಯನ್ನು ಮತಕ್ಕೆ ಹಾಕಿದಾಗ ಮಸೂದೆಯ ಪರ 303 ಮತ್ತು ವಿರೋಧವಾಗ 82 ಮತಗಳು ಬಿದ್ದವು. ಈ ಮೂಲಕ ಎನ್.ಡಿ.ಎ. ಸರಕಾರದ ಮಹತ್ವಾಕಾಂಕ್ಷಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಂತಾಗಿದೆ.

ಮುಸ್ಲಿಂ ಗಂಡಸರು ತಮ್ಮ ಪತ್ನಿಗೆ ಮೂರು ಸಲ ‘ತಲಾಖ್, ತಲಾಖ್, ತಲಾಖ್’ ಎಂದು ಹೆಳುವ ಮೂಲಕ ವೈವಾಹಿಕ ಬಂಧವನ್ನು ಕಳಚಿಕೊಳ್ಳುವ ಪರಿಪಾಠಕ್ಕೆ ಈ ಮಸೂದೆ ಅಂತ್ಯಹಾಡಲಿದೆ. ಮತ್ತು ಈ ರೀತಿಯಾಗಿ ತಲಾಖ್ ನೀಡುವಿಕೆಯನ್ನು ಈ ಮಸೂದೆ ಅಪರಾಧವೆಂದು ಪರಿಗಣಿಸಲಿದೆ. ಮತ್ತು ಇಂತಹ ಅಪರಾಧಗಳು ಸಾಬೀತುಗೊಂಡಲ್ಲಿ ಆ ವ್ಯಕ್ತಿಗೆ ಕಾರಾಗೃಹವಾಸ ಶಿಕ್ಷೆಯನ್ನು ವಿಧಿಸಲೂ ಈ ಕಾನೂನಿನಲ್ಲಿ ಅವಕಾಶವಿದೆ.

ಕಳೆದ ಮೇ ತಿಂಗಳಿನಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ ಸರಕಾರ ಸಂಸತ್ತಿನಲ್ಲಿ ಮಂಡಿಸಿದ ಮೊದಲ ಮಸೂದೆಯೂ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next