Advertisement

Lok Sabha Elections; ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆಗಳ ಸ್ವಾಗತ

01:20 AM Apr 14, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮೈಸೂರು ಮತ್ತು ಮಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಯವರ ಮುಂದೆ ಕೆಪಿಸಿಸಿ ಹಲವು ಪ್ರಶ್ನೆಗಳನ್ನು ಇರಿಸಿದ್ದು, ಕರ್ನಾಟಕಕ್ಕೆ ಮಾಡಿರುವ ಅನ್ಯಾಯವನ್ನು ಸರಿಪಡಿಸುವಿರಾ ಎಂದು ಕೇಳಿದೆ.

Advertisement

ನೆಂಟರ ಮನೆಗೆ ಹೋದಾಗ ಖಾಲಿ ಕೈಯಲ್ಲಿ ಹೋಗುವುದು ಭಾರತೀಯ ಸಂಸ್ಕೃತಿಯಲ್ಲ. ಆದರೆ ಬಿಜೆಪಿಯದ್ದು ಉಂಡೂ ಹೋದ ಕೊಂಡೂ ಹೋದ ಸಂಸ್ಕೃತಿ ಎಂದು ಕೆಪಿಸಿಸಿ ಕಚೇರಿ ಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಟೀಕಿಸಿದರು. “ನಮ್ಮಿಂದ ಸಂಸತ್‌ ಸ್ಥಾನಗಳನ್ನು ಕಸಿಯಲಾಗುತ್ತಿದೆ.

ತೆರಿಗೆ ಜತೆಗೆ ನದಿ ನೀರು ಹಂಚಿಕೆಯಲ್ಲೂ ನಮಗೆ ಸಾಕಷ್ಟು ಅನ್ಯಾಯವಾಗಿದೆ. ಮೈತ್ರಿ ಅಭ್ಯರ್ಥಿ ಸೇರಿ 27 ಸಂಸದರಿದ್ದರೂ ರಾಜ್ಯಕ್ಕೆ ಏನೂ ಪ್ರಯೋಜನವಾಗಲಿಲ್ಲ’ ಎಂದು ದೂರಿದರು. ಇದೇ ವಿಚಾರವಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ| ರಾಜೀವ್‌ ಗೌಡ ಕೂಡ ಪತ್ರಿಕಾಗೋಷ್ಠಿ ನಡೆಸಿ ಬಹುತೇಕ ಇದೇ ರೀತಿಯ 7 ಪ್ರಶ್ನೆಗಳನ್ನು ಕೇಳಿದ್ದರು.

ಪ್ರಧಾನಿ ಮೈಸೂರಿಗೆ ಯಾವ ಮುಖ ಹೊತ್ತುಕೊಂಡು ಬರುತ್ತಾರೋ ಗೊತ್ತಿಲ್ಲ. ಬರಗಾಲ, ಪ್ರವಾಹ ಸಂದರ್ಭದಲ್ಲಿ ರೈತರ ಅಳಲು ಕೇಳಲು ಬರಲಿಲ್ಲ. ಜನತೆಯ ಮತ ಕೇಳಲು ಮಾತ್ರ ಬರುವ ಅವರಿಗೆ ರಾಜ್ಯದ ಮೇಲೆ ದ್ವೇಷ ಭಾವನೆ ಇದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಧಾನಿಗೆ 4 ಪ್ರಶ್ನೆಗಳು
-ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋ.ರೂ. ಬಿಡುಗಡೆ ಮಾಡುತ್ತೇವೆ ಎಂದು ಘೋಷಣೆ ಮಾಡುವಿರಾ?
-ಮಹದಾಯಿ ಯೋಜನೆಗೆ ಬಾಕಿ ಇರುವ ಪರಿಸರ ಇಲಾಖೆ ಅನುಮತಿ ಪತ್ರವನ್ನು ಕೊಡಿಸುವಿರಾ?
-ಮೇಕೆದಾಟು ಯೋಜನೆಗೆ 5 ವರ್ಷಗಳಿಂದ ಅನುಮತಿ ಕೊಡದೆ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಸರಿಪಡಿಸಿ ಅನುಮತಿ ನೀಡುವಿರಾ?
-ದಕ್ಷಿಣ ಭಾರತದಲ್ಲಿ 129 ಲೋಕಸಭಾ ಸ್ಥಾನಗಳಿದ್ದು, ಕ್ಷೇತ್ರ ಮರುವಿಂಗಡಣೆಯಿಂದ 103ಕ್ಕೆ ಇಳಿಯಲಿದೆ. ದಕ್ಷಿಣ ಭಾರತದ ಎಲ್ಲ ಲೋಕಸಭಾ ಸೀಟುಗಳನ್ನು ಹೇಗೆ ಇವೆಯೊ ಅದೇ ರೀತಿ ಉಳಿಸುವಿರಾ?

Advertisement
Advertisement

Udayavani is now on Telegram. Click here to join our channel and stay updated with the latest news.

Next