Advertisement

ಲೋಕಸಭೆ ಚುನಾವಣೆ: ನಾಳೆ ಎನ್‌ಡಿಎ ಬಲಪ್ರದರ್ಶನ

12:17 AM Jul 17, 2023 | Team Udayavani |

ಹೊಸದಿಲ್ಲಿ/ಲಕ್ನೋ: ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಸಿದ್ಧತೆಗಳನ್ನು ಮತ್ತಷ್ಟು ಬಿರುಸುಗೊಳಿಸಿದೆ. ಹಾಲಿ ಮಿತ್ರರ ಜತೆಗೆ ಹೊಸ ಮಿತ್ರರನ್ನು ಶೋಧಿಸುವ ನಿಟ್ಟಿನಲ್ಲಿ ಮುಂದಡಿ ಇರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ಹೊಸದಿಲ್ಲಿಯಲ್ಲಿ ಚುನಾವಣೆ ಕಾರ್ಯತಂತ್ರ ರೂಪಿಸಲು ಸಭೆ ನಡೆಸಲು ತೀರ್ಮಾನಿಸಿದೆ.

Advertisement

ಈ ಸಭೆಯಲ್ಲಿ ಸುಮಾರು 30 ಪಕ್ಷಗಳ ಮುಖಂಡರು ಭಾಗವಹಿಸುವ ಸಾಧ್ಯತೆ ಇದೆ. ಸಂಸ ತ್ತಿನ ಮುಂಗಾರು ಅಧಿವೇಶನ ಜು. 20ರಿಂದ ಆರಂಭ ವಾಗಲಿರುವಂತೆಯೇ ಈ ಸಭೆ ನಡೆಯಲಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿಯ ಹಲವು ನಾಯಕರು ಅದರಲ್ಲಿ ಭಾಗವಹಿಸಲಿದ್ದಾರೆ.

ರವಿವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಉತ್ತರ ಪ್ರದೇಶದಲ್ಲಿ ಶಾಸಕ ಓಂ ಪ್ರಕಾಶ್‌ ರಾಜ್‌ಭರ್‌ ತಮ್ಮ ಸುಹೆಲ್‌ದೇವ್‌ ಭಾರತೀಯ ಸಮಾಜ ಪಾರ್ಟಿ (ಎಸ್‌ಬಿಎಸ್‌ಪಿ) ಮತ್ತೆ ಎನ್‌ಡಿಎ ಸೇರ್ಪಡೆ ಘೋಷಣೆ ಮಾಡಿದ್ದಾರೆ. ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಇರುವ ಒಬಿಸಿ ಸಮುದಾಯದಲ್ಲಿ ಅವರ ನಾಯಕತ್ವ ಪ್ರಭಾವಶಾಲಿಯಾಗಿದೆ.

ಬಿಹಾರದಿಂದ ಎಲ್‌ಜೆಪಿಯ ಪಾಸ್ವಾನ್‌ ಬಣದ ಚಿರಾಗ್‌ ಪಾಸ್ವಾನ್‌, ಮಾಜಿ ಸಿಎಂ ಜಿತನ್‌ ರಾಮ್‌ ಮಾಂಝಿ ನೇತೃತ್ವದ ಹಿಂದುಸ್ಥಾನಿ ಅವಾಮಿ ಮೋರ್ಚಾ, ರಾಷ್ಟ್ರೀಯ ಲೋಕಸಮತಾ ಪಾರ್ಟಿಯ ಉಪೇಂದ್ರ ಸಿಂಗ್‌ ಖುಶ್ವಾಹ, ಮುಕೇಶ್‌ ಸಾಹಿ° ಅವರ ವಿಕಾಸಶೀಲ ಇನ್ಸಾನ್‌ ಪಾರ್ಟಿ, ಮಹಾರಾಷ್ಟ್ರದಿಂದ ಶಿವಸೇನೆಯ ಏಕನಾಥ ಶಿಂಧೆ ಬಣ, ಎನ್‌ಸಿಪಿಯ ಅಜಿತ್‌ಪವಾರ್‌ ಬಣದ ನಾಯಕರು ಎನ್‌ಡಿಎ ಹೊಸ ಅಂಗಪಕ್ಷಗಳಾಗಿವೆ.

ಎನ್‌ಡಿಎಯಲ್ಲಿ ಸದ್ಯ 24 ಪಕ್ಷಗಳು ಇವೆ. ಆಂಧ್ರದಲ್ಲಿ ಟಿಡಿಪಿ, ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳ ಸೇರ್ಪಡೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೂ ಇನ್ನೂ ತೀರ್ಮಾನವಾಗಿಲ್ಲ.

Advertisement

ಶರದ್‌ ಜತೆಗೆ ಅಜಿತ್‌ ಬಣ ಭೇಟಿ
ಮುಂಬಯಿ: ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಅವರು ರವಿವಾರ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರನ್ನು ದಿಢೀರ್‌ ಭೇಟಿಯಾಗಿ ಆಶೀರ್ವಾದ ಪಡೆದರು. ಮಹಾರಾಷ್ಟ್ರ ವಿಧಾನ
ಸಭೆಯ ಮುಂಗಾರು ಅಧಿವೇಶನ, ಸೋಮವಾರ ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆ, ಮಂಗಳವಾರ ಹೊಸದಿಲ್ಲಿಯಲ್ಲಿ ಎನ್‌ಡಿಎ ಸಭೆ ನಡೆಯಲಿ ರುವಂತೆಯೇ ಈ ಬೆಳವಣಿಗೆ ನಡೆದಿದೆ.

ಪ್ರಫ‌ುಲ್‌ ಪಟೇಲ್‌, ಸಚಿವರಾದ ದಿಲೀಪ್‌ ಪಾಟೀಲ್‌,ಹಸನ್‌ ಮುಶ್ರಿಫ್, ಛಗನ್‌ ಭುಜಬಲ್‌, ಧನಂ ಜಯ್‌ ಮುಂಡೆ, ಅದಿತಿ ತಕ್ತಾರೆ ಮತ್ತು ಡೆಪ್ಯುಟಿ ಸ್ಪೀಕರ್‌ ನರಹರಿ ಜಿರ್‌ವಾಲ್‌ ಇದ್ದರು. ಬಳಿಕ ಮಾತನಾಡಿದ ಪ್ರಫ‌ುಲ್‌ ಪಟೇಲ್‌, “ನಾವು ನಮ್ಮ ನಾಯಕ ಶರದ್‌ ಪವಾರ್‌ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದೆವು. ಅವರು ಚವ್ಹಾಣ್‌ ಕೇಂದ್ರದಲ್ಲಿ ಇದ್ದಾರೆ ಎಂಬ ಮಾಹಿತಿ ಪಡೆದು, ಅವರಿಗೆ ಹೇಳದೆ ಭೇಟಿ ನೀಡಿದ್ದೇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next