Advertisement

ಲೋಕಸಭಾ ಚುನಾವಣೆ: ಉಡುಪಿ ಚಿಕ್ಕಮಗಳೂರು ಶೇ.75ಕ್ಕೆ ಏರಿಕೆ

10:40 AM Apr 19, 2019 | keerthan |

ಉಡುಪಿ: ಕಳೆದ ಎಲ್ಲ ಚುನಾವಣೆಗಳಿಗಿಂತ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇ.75.8 ಮತದಾನವಾಗಿರುವುದು ಸಾರ್ವಕಾಲಿಕ ದಾಖಲೆಯಾಗಿದೆ.

Advertisement

ಉಡುಪಿ, ಕಾರ್ಕಳ, ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು (ಶೇ.78) ಮತದಾನವಾದರೆ ಚಿಕ್ಕ ಮಗಳೂರು ಕ್ಷೇತ್ರದಲ್ಲಿ ಅತಿ ಕಡಿಮೆ (ಶೇ.69) ಮತದಾನ ನಡೆಯಿತು. ಕುಂದಾಪುರ, ಕಾಪುವಿನಲ್ಲಿ ಶೇ.77, ಮೂಡಿಗೆರೆಯಲ್ಲಿ ಶೇ.73, ತರಿಕೆರೆಯಲ್ಲಿ ಶೇ.72 ಮತದಾನವಾಗಿದೆ. ಉಡುಪಿ ಜಿಲ್ಲೆಯಲ್ಲಿ ಶೇ.78.2 ಮತದಾನ ವಾದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.73 ಮತದಾನವಾಯಿತು.

ಡಿಮಸ್ಟರಿಂಗ್‌
ಉಡುಪಿ ಸೈಂಟ್‌ ಸಿಸಿಲೀಸ್‌ ಶಾಲೆಯಲ್ಲಿ ಡಿಮಸ್ಟರಿಂಗ್‌ ಆರಂಭ ಗೊಂಡಿದ್ದು ಇಲ್ಲಿಗೆ ಪ್ರಥಮವಾಗಿ ಬಂದ ಮತಯಂತ್ರ ಉಡುಪಿ ಪುತ್ತೂರು ಹನುಮಂತನಗರ ಮತಗಟ್ಟೆಯದು. 2014ರಲ್ಲಿಯೂ ಇದೇ ಮತಗಟ್ಟೆಯ ಮತಯಂತ್ರ ಮೊದಲಾಗಿ ಬಂದಿತ್ತು. ಚಿಕ್ಕ ಮಗಳೂರು ಜಿಲ್ಲೆಯ ಮತ ಯಂತ್ರಗಳು ತಡವಾಗಿ ಬರಲಿವೆೆ. ಬೆಳಗ್ಗಿನವರೆಗೆ ನಡೆ ಯುವ ಸಾಧ್ಯತೆಯೂ ಇದೆ.ಎಂಟೂ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಇಲ್ಲಿ ತಂದಿ ಡಲಾಗುವುದು.

ಯುವ, ಎನ್‌ಆರ್‌ಐ ಮತದಾರರ ಉತ್ಸಾಹ
ಮತದಾನ ಹೆಚ್ಚಿಗೆ ಆಗಲು ಮುಖ್ಯವಾಗಿ ಯುವ ಮತ ದಾರರು ಉತ್ಸಾಹದಿಂದ ಮತ ಚಲಾಯಿಸಿರುವುದು ಮತ್ತು ಪರಸ್ಥಳದ ಮತದಾರರು ಆಸಕ್ತಿಯಿಂದ ಬಂದು ಮತ ಚಲಾಯಿಸಿರುವುದು ಕಾರಣವಾಗಿದೆ.

ತಾಂತ್ರಿಕ ದೋಷ: ಗುರುವಾರ ಒಟ್ಟು ಎಂಟು ಇವಿಎಂ ಮತ್ತು 53 ವಿವಿ ಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷ ಕಂಡುಬಂದು ಅವುಗಳನ್ನು ಬದ
ಲಾಯಿಸಲಾಯಿತು. ಯಾವುದೇ ಗೊಂದಲಗಳಿಲ್ಲದೆ ಶಾಂತಿಯುತ ವಾಗಿ ಮತದಾನ ನಡೆದಿದೆ ಮತ್ತು ಪರಿಸರಸ್ನೇಹಿ ಚುನಾವಣೆ ನಡೆಯಲು ಸಹಕರಿಸಿದ ಮತದಾರರಿಗೆ ಜಿಲ್ಲಾ ಚುನಾವಣಾಧಿ ಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

1957ರಲ್ಲಿ ಕನಿಷ್ಠ, 2019ರಲ್ಲಿ ಗರಿಷ್ಠ
2009ರ ಲೋಕಸಭಾ ಚುನಾವಣೆಯಲ್ಲಿ ಶೇ.68.17, 2012ರ ಲೋಕಸಭಾ ಚುನಾವಣೆಯಲ್ಲಿ ಶೇ.68.10 ಮತದಾನ, 2014ರಲ್ಲಿ 74.46 ಮತದಾನವಾಗಿತ್ತು. ಈ ಬಾರಿ ಆದಷ್ಟು ಮತದಾನ ಇದುವರೆಗಿನ ಚುನಾವಣೆಯಲ್ಲಿ ಆಗಿರಲಿಲ್ಲ. ಅಂತಿಮ ಲೆಕ್ಕಾಚಾರದಲ್ಲಿ ಶುಕ್ರವಾರ ಸ್ವಲ್ಪ ಹೆಚ್ಚು ಕಡಿಮೆಯಾಗಬಹುದು. ಈ ಬಾರಿ 15,13,231 ಮತದಾರರ ಪೈಕಿ 11,48,052 ಮಂದಿ ಮತದಾನ ಮಾಡಿದರು. ಅತಿ ಕಡಿಮೆ ಮತದಾನ ನಡೆದದ್ದು 1957ರಲ್ಲಿ ಶೇ.52.38.

Advertisement

Udayavani is now on Telegram. Click here to join our channel and stay updated with the latest news.

Next