ಬೆಳಗಾವಿ: ಲೋಕಸಭಾ ಚುನಾವಣೆ-2019ರ ಬೆಳಗಾವಿ ಮತಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಮೇ 23ರಂದು ಬೆಳಗ್ಗೆ 8 ಗಂಟೆಯಿಂದ ನಗರದ ಟಿಳಕವಾಡಿ ಆರ್‌ಪಿಡಿ ಕಾಲೇಜಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್. ತಿಳಿಸಿದ್ದಾರೆ.
ಬೆಳಗಾವಿ ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಮತಕ್ಷೇತ್ರವಾರು ಮತ ಎಣಿಕೆ ಆರ್‌ಪಿಡಿ ಕಾಲೇಜಿನ ಲ್ಯಾಬೋರೇಟರಿ ಬಿಲ್ಡಿಂಗ್ ಹಾಗೂ ಹೊಸ ಕಟ್ಟಡದಲ್ಲಿ ನಡೆಯಲಿದೆ.
ಅರಭಾಂವಿ ಮತಕ್ಷೇತ್ರದ ಮತ ಎಣಿಕೆ ಮೊದಲನೇ ಮಹಡಿ ಲ್ಯಾಬೋರೇಟರಿ ಬಿಲ್ಡಿಂಗ್‌ನ ಹಾಲ್ ನಂ. 14, ಗೋಕಾಕ ಮತಕ್ಷೇತ್ರ ಮೊದಲನೇ ಮಹಡಿ ಹೊಸ ಕಟ್ಟಡದ ಹಾಲ್ ನಂ. 12, ಬೆಳಗಾವಿ ಉತ್ತರ ಮತಕ್ಷೇತ್ರ ಎರಡನೇ ಮಹಡಿ ಲ್ಯಾಬೋರೇಟರಿ ಬಿಲ್ಡಿಂಗ್‌ನ ಹಾಲ್ ನಂ. 22, ಬೆಳಗಾವಿ ದಕ್ಷಿಣ ಮತಕ್ಷೇತ್ರ ಎರಡನೇ ಮಹಡಿ ಲ್ಯಾಬೋರೇಟರಿ ಬಿಲ್ಡಿಂಗ್‌ನ ಹಾಲ್ ನಂ. 33, ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಮೊದಲನೇ ಮಹಡಿ ಹೊಸ ಕಟ್ಟಡದ ಹಾಲ್ ನಂ. 06, ಬೈಲಹೊಂಗಲ ಮತಕ್ಷೇತ್ರ ಮೊದಲನೇ ಮಹಡಿ ಲ್ಯಾಬೋರೇಟರಿ ಬಿಲ್ಡಿಂಗ್‌ನ ಹಾಲ್ ನಂ. 20, ಸವದತ್ತಿ ಯಲ್ಲಮ್ಮ ಮತಕ್ಷೇತ್ರ ಎರಡನೇ ಮಹಡಿ ಲ್ಯಾಬೋರೇಟರಿ ಬಿಲ್ಡಿಂಗ್‌ನ ಹಾಲ್ ನಂ.30, ರಾಮದುರ್ಗ ಮತಕ್ಷೇತ್ರ ಕೆಳ ಮಹಡಿ ಹೊಸ ಕಟ್ಟಡದ ಹಾಲ್ ನಂ. 01ರಲ್ಲಿ ನಡೆಯಲಿದೆ ಅದರಂತೆ ಅಂಚೆ ಮತಗಳ ಎಣಿಕೆ ಪ್ರಕ್ರಿಯೆ ಡಾ| ಹೆರಕೇರ್ ಬಿಲ್ಡಿಂಗ್‌ನ ಹಾಲ್ ನಂ. 37ರಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಮತಕ್ಷೇತ್ರವಾರು ಪ್ರತಿ ಒಂದು ಮತ ಎಣಿಕೆ ಹಾಲ್ಗಳಿಗೆ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಟೇಬಲ್ಗಳಿಗೆ ಒಬ್ಬರಂತೆ 14 ಏಜೆಂಟರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.