Advertisement

ಲೋಕಸಭಾ ಚುನಾವಣೆ: ಕಾರ್ಮಿಕರ ಸನ್ನದು ಬಿಡುಗಡೆ

12:30 AM Mar 18, 2019 | Team Udayavani |

ಕುಂದಾಪುರ: ಕೇಂದ್ರ ಕಾರ್ಮಿಕ ಸಂಘಟನೆಗಳು ತಮ್ಮ ಹೋರಾಟದ ಮುಂದುವರಿದ ಭಾಗವಾಗಿ 2019ರ ಲೋಕಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳ ಮುಂದೆ ಕಾರ್ಮಿಕರ ಸನ್ನದು ರಾಷ್ಟ್ರ ಮಟ್ಟದಲ್ಲಿ  ಬಿಡುಗಡೆ ಮಾಡಿದೆ. ಕುಂದಾಪುರ  ಹೆಂಚು  ಕಾರ್ಮಿಕಭವನದಲ್ಲಿ ನಡೆದ ಕಾರ್ಮಿಕರ ಸಭೆಯಲ್ಲಿ ಮುಷ್ಕರದಲ್ಲಿ ಎತ್ತಿದ ಬೇಡಿಕೆ ಗಳನ್ನೊಳಗೊಂಡು ಇತರೆ 45 ಅಂಶಗಳ ಈಡೇರಿಕೆಗೆ ಆಗ್ರಹಿಸಿ ಬಿಡುಗಡೆ ಗೊಳಿಸಲಾಯಿತು. ಭಾತೃತ್ವ ಮತ್ತು ಸಾಮಾಜಿಕ ಸೌಹಾರ್ದಕ್ಕಾಗಿ ಕಾರ್ಮಿಕರ ಐಕ್ಯತೆ ಎಂಬ ಘೋಷಣೆ ಯೊಂದಿಗೆ ರಾಜ್ಯದ ಜನತೆ ಎದುರಿಸುತ್ತಿರುವ ಸವಾಲುಗಳನ್ನು ಮನಗಾಣಬೇಕೆಂದು ಮನವಿ ಮಾಡಿದೆ.

Advertisement

ಕಾರ್ಮಿಕ ಸಂಘಟನೆಗಳ ಬಲಿಷ್ಠ ವಿರೋಧದ ನಡುವೆಯೂ ಕೇಂದ್ರ ಸರಕಾರ ಕಾರ್ಮಿಕರ 44 ಕೇಂದ್ರ ಕಾರ್ಮಿಕ ಕಾನೂನುಗಳನ್ನು ತೆಗೆದು ಹಾಕಿ 4 ಕಾರ್ಮಿಕ ಸಂಹಿತೆಗಳಲ್ಲಿ ವಿಲೀನಗೊಳಿಸಲು ಮುಂದಾಗಿದೆ. ಸರಕಾರವು ಜನತೆಯ ಜ್ವಲಂತ ಸಮಸ್ಯೆಗಳನ್ನು  ತುರ್ತಿನ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಬಂದಿದೆ. ವಸತಿ, ಆರೋಗ್ಯ, ಶಿಕ್ಷಣ, ಸಾರಿಗೆ, ವಿದ್ಯುತ್‌ ಮುಂತಾದ ಅಗತ್ಯ ವಸ್ತುಗಳ ಬೆಲೆಗಳು ಏರುತ್ತಿದೆ.ಆದರೆ ಕಾರ್ಮಿಕರ ವೇತನಗಳು ಸ್ಥಗಿತಗೊಂಡಿವೆೆ. ನಿರುದ್ಯೋಗ ಕೇವಲ ಯುವಜನತೆಗೆ ಮಾತ್ರವಲ್ಲದೆ ಕೈಗಾರಿಕೆ ಮುಚ್ಚುವಿಕೆ ಮತ್ತು ಸ್ಥಗಿತಗಳಿಂದಾಗಿ ಕಾರ್ಮಿಕರ ಬದುಕು ಅತಂತ್ರವಾಗುತ್ತಿದೆ. ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಕಾರ್ಮಿಕರು ಮತ್ತು ಸಾಮಾನ್ಯ ಜನತೆ ಉಳಿತಾಯ ಮಾಡಿರುವ ಸಾವಿರಾರು ಕೋ. ರೂ. ಹಣವನ್ನು ಕಾರ್ಪೊರೇಟ್‌ ಲೂಟಿಕೋರರು  ವಂಚಿಸಿ ವಿದೇಶಗಳಿಗೆ ಪರಾರಿಯಾಗುತ್ತಿದ್ದಾರೆ. ಬ್ಯಾಂಕ್‌ಗಳು ನೀಡಿರುವ ಕಾರ್ಯನಿರ್ವಹಣೆಯಲ್ಲಿಲ್ಲದ ಸಾಲಗಳು ಶೇ. 80ರಷ್ಟಿದ್ದು ಕೇವಲ 50 ಜನ ಕಾರ್ಪೊರೇಟ್‌ ಮನೆತನಕ್ಕೆ ಸೇರಿದ್ದಾಗಿದೆ. ಸರಕಾರವು ದೇಶ ಮತ್ತು ವಿದೇಶಿ ದೊಡ್ಡ ಬಂಡವಾಳದಾರರಿಗೆ ವಾರ್ಷಿಕ 5 ಲಕ್ಷ ಕೋಟಿಗೂ ರೂ.ಗೂ ಹೆಚ್ಚು  ತೆರಿಗೆ ರಿಯಾಯಿತಿ ಮತ್ತು ವಿನಾಯಿತಿ ನೀಡುತ್ತಿದೆ. ಬಡವರು, ಕಾರ್ಮಿಕರಿಗೆ ಸಾಮಾಜಿಕ ಕಲ್ಯಾಣ ಖಾತ್ರಿಗೆ ಅಗತ್ಯ ಹಣ ಖರ್ಚು ಮಾಡಲು ನಿರಾಕರಿಸುತ್ತಿದೆ. ಈ ನೀತಿಗಳನ್ನು ಸೋಲಿಸಲು ಚುನಾವಣೆ ಸಮಯದಲ್ಲಿ ಬಡವರ, ಕಾರ್ಮಿಕರ ಬೇಡಿಕೆಗಳನ್ನು ಎತ್ತುವ ಸಮಯವಾಗಿ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ನಾವು ಆಗ್ರಹಿಸಬೇಕು ಎಂಬ ಅಂಶ ಕಾರ್ಮಿಕರ ಸನ್ನದು ಕಿರುಪುಸ್ತಕದಲ್ಲಿದೆ.

ಬೇಡಿಕೆಗಳನ್ನು  ಚುನಾವಣಾ ವಿಷಯ ವಾಗಿ ಮಾರ್ಪಡಿಸಲು ಜನರ ಮಧ್ಯೆ ಕೊಂಡೊಯ್ದು ವ್ಯಾಪಕ ಪ್ರಚಾರ ಮಾಡಲು ತೀರ್ಮಾನಿಸಲಾಯಿತು. ಸಿಐಟಿಯು ಜಿಲ್ಲಾ ಪ್ರ. ಕಾರ್ಯದರ್ಶಿ ಕೆ. ಶಂಕರ್‌, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ವಿ. ನರಸಿಂಹ, ಎಚ್‌. ನರಸಿಂಹ, ವೆಂಕಟೇಶ್‌ ಕೋಣಿ, ಸುರೇಶ್‌ ಕಲ್ಲಾಗರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next