Advertisement

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

10:31 AM Apr 19, 2024 | sudhir |

ದಾವಣಗೆರೆ: ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಗುರುವಾರ ವಿವಿಧ ಮಠಾಧೀಶರನ್ನು ಭೇಟಿ ಮಾಡಿ, ಗೌರವ ಸಲ್ಲಿಸಿ, ಆಶೀರ್ವಾದ ಪಡೆದರು.

Advertisement

ಚನ್ನಗಿರಿ ತಾಲೂಕಿನ ಹಾಲಸ್ವಾಮಿ ವಿರಕ್ತ ಮಠಕ್ಕೆ ಭೇಟಿ ನೀಡಿ ಡಾ| ಬಸವಜಯಚಂದ್ರ ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸಿ, ಆಶೀರ್ವಾದ ಪಡೆದರು. ಬಳಿಕ ಚನ್ನಗಿರಿಯ ಕೇದಾರ ಮಠಕ್ಕೆ ಭೇಟಿ ನೀಡಿ ಶ್ರೀ ಶಾಂತವೀರ ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು. ಚನ್ನಗಿರಿ ತಾಲೂಕಿನ ಅಮ್ಮನಗುಡ್ಡದ ಶ್ರೀ ಕುಕ್ವಾಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಅಮ್ಮನವರ ಆಶೀರ್ವಾದ ಪಡೆದರು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಪ್ರಸಿದ್ಧ ವಿಜಯಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ವಿಘ್ನನಿವಾರಕನ ಆಶೀರ್ವಾದ ಪಡೆದರು.

ವಿವಿಧ ಮಠ, ದೇವಾಲಯಗಳಿಗೆ ಭೇಟಿ ನೀಡಿ ಮಾತನಾಡಿದ ಗಾಯಿತ್ರಿ ಸಿದ್ದೇಶ್ವರ, ಏ. 19ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ಧೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ನಾಮಪತ್ರ ಸಲ್ಲಿಕೆಯ ಬೃಹತ್‌ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಗರೋಪಾದಿ ಯಲ್ಲಿಕಾರ್ಯಕರ್ತರು, ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈಗಾಗಲೇ ಎಂಟು ವಿಧಾನಸಭಾ ಕ್ಷೇತ್ರಗಳ ನೂರಾರು ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದ್ದೇನೆ. ಎರಡನೇ ಸುತ್ತಿನಲ್ಲಿ ಎಲ್ಲ ಗ್ರಾಮಗಳಿಗೂ ಖುದ್ದು ಭೇಟಿ ನೀಡಿ ಮತಯಾಚಿಸುತ್ತೇನೆ. ನಾನು ಹೋದಲೆಲ್ಲ ಉತ್ತಮ ಪ್ರತಿಕ್ರಿಯೆ ಇದೆ. ಎಲ್ಲರೂ ಗೆಲುವಿನ ಸೂಚನೆ ಕೊಡುತ್ತಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ನಮ್ಮ ಮಾವನವರಾದ ಜಿ. ಮಲ್ಲಿಕಾರ್ಜುನಪ್ಪ ಅವರ ಅಭಿವೃದ್ಧಿ ಕೆಲಸಗಳು, ಮೋದಿ ಜೀ ಅವರ ಆಡಳಿತ ನನಗೆ ಶ್ರೀರಕ್ಷೆಯಾಗಿದೆ. ದಾವಣಗೆರೆ ಲೋಕಸಭಾಕ್ಷೇತ್ರದಲ್ಲಿ ನಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಕಮಲಾ ನಿರಾಣಿ, ತುಂಕೋಸ್ ಮಾಜಿ ಅಧ್ಯಕ್ಷ ಎಚ್‌.ಎಸ್‌. ಶಿವಕುಮಾರ್‌, ಬಿಜೆಪಿ ಮುಖಂಡರಾದ ನಾಗರಾಜ್‌, ಗುರುಸಿದ್ಧಯ್ಯ, ಕಮಲಾ, ಹರೀಶ್‌, ಸವಿತಾ ರಘು, ಮಹೇಶ್‌ ಜವಳಿ, ಧನಂಜಯ್‌ ಅಜ್ಜಿಹಳ್ಳಿ, ಚಂದ್ರಯ್ಯ, ಪ್ರೇಮಾ ನಟರಾಜ್‌, ಗಾಯಿತ್ರಿ ಸುಭಾಷ್‌, ಸುನಂದಮ್ಮ, ಜಯಮ್ಮ, ಆಂಬುಜಾ ನಾಗರಾಜ್‌, ಕೃತಿಕಾ, ತೇಜಸ್ವಿನಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಸಾಥ್‌ ನೀಡಿದರು.

Advertisement

ಇದನ್ನೂ ಓದಿ: Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Advertisement

Udayavani is now on Telegram. Click here to join our channel and stay updated with the latest news.

Next