Advertisement

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

04:33 PM Apr 24, 2024 | Team Udayavani |

ಪಣಜಿ: ಗೋವಾ ಲೋಕಸಭೆ ಚುನಾವಣೆಯ ಚಿತ್ರಣ ಸ್ಪಷ್ಟವಾಗಿದ್ದು, ಎರಡೂ ಕ್ಷೇತ್ರಗಳಿಂದ ಒಟ್ಟು ಹದಿನಾರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉತ್ತರ ಮತ್ತು ದಕ್ಷಿಣದಲ್ಲಿ ತಲಾ ಮೂವರು ಸ್ವತಂತ್ರ ಅಭ್ಯರ್ಥಿಗಳಿದ್ದಾರೆ. ಇದಲ್ಲದೇ ಬಹುಜನ ಸಮಾಜ ಪಕ್ಷ, ಅಖಿಲ ಭಾರತೀಯ ಪರಿವಾರ ಪಕ್ಷ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಪಕ್ಷದ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.

Advertisement

ಗೋವಾದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಆರ್‍ಜಿ ಅಭ್ಯರ್ಥಿಗಳ ನಡುವೆಯೇ ಪ್ರಮುಖ ಸ್ಪರ್ಧೆ ಏರ್ಪಟ್ಟಿದ್ದರೂ, ಎರಡೂ ಕ್ಷೇತ್ರಗಳ ಇತರ ಅಭ್ಯರ್ಥಿಗಳು ಯಾರು ಎಂಬ ಕುತೂಹಲ ಮತದಾರರಲ್ಲಿದೆ. ನಾಮಪತ್ರ ಹಿಂಪಡೆಯುವ ದಿನ ಯಾವುದೇ ಅಭ್ಯರ್ಥಿ ನಾಮಪತ್ರ ಹಿಂಪಡೆಯದ ಕಾರಣ ರಾಜ್ಯದಲ್ಲಿ ಉತ್ತರ ಮತ್ತು ದಕ್ಷಿಣದಲ್ಲಿ ತಲಾ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಕ್ರಾಂತಿಕಾರಿ ಗೋವಾನ್ಸ್ (ಆರ್‍ಜಿ) ಅಭ್ಯರ್ಥಿಗಳು ಭಾರತ್ ಮೈತ್ರಿಗೆ ಮುಂದಾದ ಷರತ್ತುಗಳನ್ನು ಒಪ್ಪಿಕೊಳ್ಳದ ಕಾರಣ ಆರ್‍ಜಿ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯಲಿಲ್ಲ. ಇದರಿಂದ ಕಾಂಗ್ರೆಸ್ ನೇತೃತ್ವದ ಭಾರತ ಮೈತ್ರಿ ಮತಗಳು ವಿಭಜನೆಯಾಗಲಿವೆ ಎಂಬುದು ಸ್ಪಷ್ಟವಾಗಿದೆ. ಇದಲ್ಲದೇ ಕ್ಷೇತ್ರದ ಇತರೆ ಅಭ್ಯರ್ಥಿಗಳೂ ಒಂದಷ್ಟು ಮತಗಳನ್ನು ಪಡೆಯಲಿದ್ದಾರೆ ಎಂಬುದು ಕೂಡ ರಾಜಕೀಯ ಲೆಕ್ಕಾಚಾರವಾಗಿದೆ.

ಯಾವ ಜಿಲ್ಲೆಯಲ್ಲಿ ಯಾವ ಅಭ್ಯರ್ಥಿ?
ಉತ್ತರ ಗೋವಾ (ಉತ್ತರ ಗೋವಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು)

1) ಶ್ರೀಪಾದ್ ನಾಯಕ್ (ಬಿಜೆಪಿ – ಕಮಲ)

Advertisement

2) ರಮಾಕಾಂತ್ ಖಲಪ್ (ಕಾಂಗ್ರೆಸ್ – ಕೈ)

3) ತುಕಾರಾಂ ಪರಬ್ (ಆರ್‍ಜಿ- ಫುಟ್‍ಬಾಲ್)

4) ಮಿಲನ್ ವಯಂಗಾಂಕರ್ (ಬಹುಜನ ಸಮಾಜ ಪಕ್ಷ- ಆನೆ)

5) ಸಖಾರಾಮ್ ನಾಯಕ್ (ಅಖಿಲ ಭಾರತೀಯ ಪರಿವಾರ್ ಪಾರ್ಟಿ- ಕಿತಲಿ)

6) ಥಾಮಸ್ ಫೆನಾರ್ಂಡಿಸ್ (ಸ್ವತಂತ್ರ – ಪ್ಲೇಟ್ ಫುಲ್ ಫುಡ್)

7) ವಿಶಾಲ್ ನಾಯಕ್ (ಸ್ವತಂತ್ರ – ಗ್ಯಾಸ್ ಸಿಲಿಂಡರ್)

8) ಶಕೀಲ್ ಶೇಖ್ (ಸ್ವತಂತ್ರ – ಹೆಲ್ಮೆಟ್)

ದಕ್ಷಿಣ ಗೋವಾ ಲೋಕಸಭಾ ಅಭ್ಯರ್ಥಿಗಳು

1) ಪಲ್ಲವಿ ಧೆಂಪೊ (ಬಿಜೆಪಿ – ಕಮಲ)

2) ವಿರಿಯಾಟೊ ಫೆನಾರ್ಂಡಿಸ್ (ಕಾಂಗ್ರೆಸ್ – ಕೈ)

3) ರೂಪರ್ಟ್ ಪೆರೇರಾ (ಆರ್‍ಜಿ- ಫುಟ್ಬಾಲ್)

4) ಡಾ. ಶ್ವೇತಾ ಗಾಂವ್ಕರ್ (ಬಹುಜನ ಸಮಾಜ ಪಕ್ಷ- ಕಿತಲಿ)

5) ಹರಿಶ್ಚಂದ್ರ ನಾಯಕ್ (ಭ್ರಷ್ಟಾಚಾರ ನಿರ್ಮೂಲನಾ ಪಕ್ಷ – ಫುಟ್ಬಾಲ್ ಆಟಗಾರ)

6) ಅಲೆಕ್ಸಿ ಫೆನಾರ್ಂಡಿಸ್ (ಸ್ವತಂತ್ರ -ಹಲಸಿನ ಹಣ್ಣು)

7) ಡಾ. ಕಾಳಿದಾಸ್ ವಯಂಗಾಂಕರ್ (ಸ್ವತಂತ್ರ – ದೋಣಿ)

8) ದೀಪಕುಮಾರ್ ಮಾಪಾರಿ (ಸ್ವತಂತ್ರ – ಸಿಸಿಟಿವಿ ಕ್ಯಾಮೆರಾ)

ಇದನ್ನೂ ಓದಿ: ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next