ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಉಳ್ಳಾಲ ಮತ್ತು ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 7 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.
Advertisement
ಅವುಗಳ ಪೈಕಿ 3ರಲ್ಲಿ ಕರ್ನಾಟಕ ಪೊಲೀಸರು ತಪಾಸಣೆ ನಡೆಸಲಿದ್ದು, ಒಂದರಲ್ಲಿ ಕರ್ನಾಟಕ ಮತ್ತು ಕೇರಳ ಪೊಲೀಸರು ಜಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಮೂರು ಚೆಕ್‌ಪೋಸ್ಟ್‌ಗಳನ್ನು ಕೇರಳ ಪೊಲೀಸರು ನಿರ್ವಹಿಸಲಿದ್ದಾರೆ.
ಬೆಳ್ಮಣ್: ಬಹುತೇಕ ನೇಪಥ್ಯಕ್ಕೆ ಸೇರಿದ್ದ ಮುಂಡ್ಕೂರು ಜಾರಿಗೆಕಟ್ಟೆ ಚೆಕ್‌ಪೋಸ್ಟ್ ಮತ್ತೆ ಸಕ್ರಿಯಗೊಂಡಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತಿಗಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳ ನೇತೃತ್ವದಲ್ಲಿ ಇಲಾಖೆಯ ಸಿಬಂದಿ ಕರ್ತವ್ಯದಲ್ಲಿ ತೊಡಗಿದ್ದು ಕಾರ್ಕಳ ತಾಲೂಕಿನ ಶಿಕ್ಷಕರು ಸಹಕರಿಸುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಲಾಕ್‌ಡೌನ್‌ಗಾಗಿ ಇಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿತ್ತು.
Related Articles
ಬೈಂದೂರು: ಉತ್ತರ ಕನ್ನಡ – ಉಡುಪಿ ಜಿಲ್ಲೆ ಗಡಿ ಭಾಗವಾದ ಶಿರೂರಿನಲ್ಲಿ ವಾಹನ ತಪಾಸಣೆ ಆರಂಭಗೊಂಡಿದೆ. ವಿವಿಧ ಇಲಾಖೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಜಿಲ್ಲೆಗೆ ಪ್ರವೇ ಶಿಸುವ ಪ್ರತೀ ವಾಹನಗಳ ವಿವರ ದಾಖಲಿಸಿ ತಪಾಸಣೆ ನಡೆಸ ಲಾಗುತ್ತಿದೆ. ಜತೆಗೆ ವಿವಿಧ ಸರಕಾರಿ ಜಾಹಿರಾತುಗಳಲ್ಲಿ ಇರುವ ರಾಜಕೀಯ ವ್ಯಕ್ತಿಗಳ ಭಾವಚಿತ್ರವನ್ನು ಮರೆ ಮಾಡ ಲಾಗಿದೆ ಹಾಗೂ ಬ್ಯಾನರ್‌ಗಳನ್ನು ತೆರವು ಗೊಳಿಸಲಾಗಿದೆ.
ಸಹಾಯಕ ಚುನಾವಣಾಧಿಕಾರಿ ಎ.ಆರ್. ಮಂಜುನಾಥ, ಬೈಂದೂರು ತಹಶೀಲ್ದಾರ್ ಪ್ರದೀಪ್ ಆರ್., ಕಂದಾಯ ನಿರೀಕ್ಷಕ ಮಂಜು, ಶಿರೂರು ಗ್ರಾಮ ಲೆಕ್ಕಾಧಿಕಾರಿ ವಿಜಯ್ ಕುಮಾರ್, ಚುನಾವಣೆ ಉಸ್ತುವಾರಿ ಚಂದ್ರಶೇಖರ ಹಾಗೂ ಬೈಂದೂರು ಪೊಲೀಸ್ ಸಿಬಂದಿ ಹಾಜರಿದ್ದರು.
Advertisement
ಸಾಹೇಬ್ರಕಟ್ಟೆ, ಸೋಮೇಶ್ವರ ಚೆಕ್‌ಪೋಸ್ಟ್‌ಗೆ ಡಿಸಿ, ಎಸ್‌ಪಿ ಭೇಟಿ ಕೋಟ: ಚುನಾವಣೆ ಹಿನ್ನಲೆಯಲ್ಲಿ ಬ್ರಹ್ಮಾವರ ತಾಲೂಕಿನ ಸಾಹೇಬ್ರಕಟ್ಟೆಯಲ್ಲಿ ತೆರೆದಿರುವ ಪೊಲೀಸ್ ಚೆಕ್‌ಪೋಸ್ಟ್ ಗೆ ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕುಮಾರ್ ರವಿವಾರ ಸಂಜೆ ಭೇಟಿ ನೀಡಿದರು. ಎಲ್ಲ ವಾಹನಗಳನ್ನು ಪರಿಶೀಲಿಸಿ ಅಕ್ರಮ ಕಂಡುಬಂದರೆ ಕಠಿನ ಕ್ರಮ ಕೈಗೊಳ್ಳುವಂತೆ ಸಿಬಂದಿಗೆ ತಿಳಿಸಿದರು. ಸ್ಥಳೀಯ ಕಂದಾಯ, ಪೊಲೀಸ್ ಅಧಿಕಾರಿಗಳು ಈ ಸಂದರ್ಭ ಸ್ಥಳದಲ್ಲಿದ್ದರು. ಹೆಬ್ರಿ: ಹೆಬ್ರಿ ತಾಲೂಕಿನ ಸೋಮೇಶ್ವರ ಚೆಕ್‌ಪೋಸ್ಟ್‌ಗೆ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೋಡಾರ್‌ನಲ್ಲಿ ದಾಖಲೆ ಇಲ್ಲದ 1.32 ಲ.ರೂ. ವಶ
ಮಂಗಳೂರು: ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಗೊಂಡ ಬೆನ್ನಿಗೆ ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 1.32 ಲಕ್ಷ ರೂ. ನಗದನ್ನು ಚುನಾವಣ ಆಯೋಗ ಮಂಗಳೂರು ಸಮೀಪ ರವಿವಾರ ರಾತ್ರಿ ವಶಪಡಿಸಿಕೊಂಡಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೋಡಾರ್ - ಎಡಪದವು ಚೆಕ್ ಪೋಸ್ಟ್‌ನಲ್ಲಿ ರಾತ್ರಿ 11ರ ಸುಮಾರಿಗೆ ಚುನಾವಣಾ ಧಿಕಾರಿಗಳ ತಂಡ ವಾಹನಗಳ ತಪಾಸಣೆ ನಡೆಸು ತ್ತಿದ್ದು, ಆಗ ಆಗಮಿಸಿದ ಕೈಕಂಬ ನಿವಾಸಿಯೊಬ್ಬರ ಕಾರನ್ನು ಪರಿಶೀಲಿಸಿ ದಾಗ 1.32 ಲಕ್ಷ ರೂ. ನಗದು ದೊರಕಿದೆ. ಸೂಕ್ತ ದಾಖಲೆ ನೀಡುವಂತೆ ಅಧಿಕಾರಿಗಳು ತಿಳಿಸಿದರೂ ಕಾರಿನಲ್ಲಿದ್ದವರು ದಾಖಲೆ ನೀಡದ ಕಾರಣ ವಶಪಡಿಸಿ ಕೊಳ್ಳಲಾಗಿದೆ. ಈ ಕುರಿತಂತೆ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಸಹಾಯಕ ಚುನಾವಣಾಧಿಕಾರಿ ಕೆ. ಜಾನ್ಸನ್ ಅವರು “ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ 50 ಸಾವಿರ ರೂ.ಗಳಿಗಿಂತ ಹೆಚ್ಚು ಹಣ ಸಾಗಿಸುವಂತಿಲ್ಲ. ಒಂದುವೇಳೆ ಸಾಗಿಸುವುದಾದರೆ ಸರಿಯಾದ ದಾಖಲೆ ಒದಗಿಸ ಬೇಕು. 50 ಸಾವಿರಕ್ಕಿಂತ ಹೆಚ್ಚು ಹಣ ಸಾಗಿಸಿದಾಗ ದಾಖಲೆ ನೀಡದಿದ್ದರೆ ಅದನ್ನು ವಶಕ್ಕೆ ಪಡೆಯಲಾಗುತ್ತದೆ. ಸಂಬಂಧ ಪಟ್ಟವರು ದಾಖಲೆಯನ್ನು ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿಯವರ ಅಪೀಲು ಕಮಿಟಿಗೆ ಮನವಿ ಸಲ್ಲಿಸಿ ಹಣ ವಾಪಸ್ ಪಡೆಯಲೂ ಅವಕಾಶ ಇದೆ ಎಂದರು.