Advertisement

Lok Sabha Election 2024;ಲಿಂಗಾಯತರಿಗೆ, ಒಕ್ಕಲಿಗ, ಒಬಿಸಿಗೆ ಕಾಂಗ್ರೆಸ್‌ ಹೆಚ್ಚು ಟಿಕೆಟ್‌

12:14 AM Mar 23, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ ಹಾಗೂ ಬಿಜೆಪಿ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಆದ್ಯತೆ ನೀಡಿದೆ.ಪ್ರಕಟಿತ ಪಟ್ಟಿ ಪ್ರಕಾರ, ಬಿಜೆಪಿ ಯಲ್ಲಿ 8 ಹಾಗೂ ಕಾಂಗ್ರೆಸ್‌ನಿಂದ ಐವರು ಲಿಂಗಾಯತರಿದ್ದಾರೆ.

Advertisement

ಬಿಜೆಪಿಯಲ್ಲಿ ಇಬ್ಬರು ಒಕ್ಕಲಿಗರಿಗೆ ಹಾಗೂ ಅದೇ ಉಪಜಾತಿಯ ಬಂಟ ಸಮುದಾಯದ ಒಬ್ಬರಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್‌ನಲ್ಲಿ ರೆಡ್ಡಿ ಹಾಗೂ ಬಂಟರು ಸಹಿತ 8 ಜನರಿಗೆ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್‌ ಐವರು ಹಾಗೂ ಬಿಜೆಪಿಯಲ್ಲಿ ಮೂವರು ಒಬಿಸಿ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್‌ನಲ್ಲಿ ಒಬ್ಬರು ಮುಸ್ಲಿಂ ಇದ್ದು, ಬಿಜೆಪಿ ಯಲ್ಲಿ ಅಲ್ಪಸಂಖ್ಯಾಕ ಅಭ್ಯರ್ಥಿ ಗಳಿಲ್ಲ. ಬಿಜೆಪಿ ಇಬ್ಬರು ಬ್ರಾಹ್ಮಣರಿಗೆ ಅವಕಾಶ ನೀಡಿದ್ದು, ಕಾಂಗ್ರೆಸ್‌ನಲ್ಲಿ ಯಾವುದೇ ಪ್ರಾತಿನಿಧ್ಯ ನೀಡಿಲ್ಲ.

ಕಾಂಗ್ರೆಸ್‌ನ ಜಾತಿವಾರು ಟಿಕೆಟ್‌ ಹಂಚಿಕೆ
(ಮೀಸಲು ಕ್ಷೇತ್ರ ಹೊರತುಪಡಿಸಿ )
ಲಿಂಗಾಯತರು: ಮೃಣಾಲ್‌ ಹೆಬ್ಬಾಳ್ಕರ್‌, ಸಂಯುಕ್ತಾ ಪಾಟೀಲ್‌, ಸಾಗರ್‌ ಖಂಡ್ರೆ, ಆನಂದಸ್ವಾಮಿ ಗಡ್ಡದೇವರಮಠ, ಪ್ರಭಾ ಮಲ್ಲಿಕಾರ್ಜುನ.
ಒಕ್ಕಲಿಗರು: ಮುದ್ದಹನುಮೇ ಗೌಡ, ಸ್ಟಾರ್‌ ಚಂದ್ರು, ಎಂ.ಲಕ್ಷ್ಮಣ, ಡಿ.ಕೆ.ಸುರೇಶ್‌, ಪ್ರೊ| ರಾಜೀವ್‌ ಗೌಡ, ಸೌಮ್ಯಾ ರೆಡ್ಡಿ (ರೆಡ್ಡಿ), ಜಯಪ್ರಕಾಶ್‌ ಹೆಗ್ಡೆ (ಬಂಟ).
ಒಬಿಸಿ: ರಾಜಶೇಖರ ಹಿಟ್ನಾಳ್‌, ಗೀತಾ ಶಿವರಾಜ್‌ ಕುಮಾರ್‌, ಪದ್ಮರಾಜ್‌, ವಿನೋದ್‌ ಆಸೂಟಿ, ಅಂಜಲಿ ನಿಂಬಾಳ್ಕರ್‌.
ಮುಸ್ಲಿಂ: ಮನ್ಸೂರ್‌ ಅಲಿಖಾನ್‌.

ಬಿಜೆಪಿ ಜಾತಿವಾರು ಟಿಕೆಟ್‌ ಹಂಚಿಕೆ
(ಮೀಸಲು ಕ್ಷೇತ್ರ ಹೊರತುಪಡಿಸಿ )
ಲಿಂಗಾಯತರು: ಅಣ್ಣಾ ಸಾಹೇಬ್‌ ಜೊಲ್ಲೆ, ಪಿ.ಸಿ.ಗದ್ದಿಗೌಡರ್‌, ಭಗವಂತ ಖೂಬಾ, ಬಸವರಾಜ್‌ ಕ್ಯಾವಟೋರ್‌, ಬಸವರಾಜ್‌ ಬೊಮ್ಮಾಯಿ, ಗಾಯತ್ರಿ ಸಿದ್ದೇಶ್ವರ, ಬಿ.ವೈ.ರಾಘವೇಂದ್ರ, ವಿ.ಸೋಮಣ್ಣ.
ಒಕ್ಕಲಿಗರು: ಡಾ| ಸಿ.ಎನ್‌.ಮಂಜುನಾಥ, ಶೋಭಾ ಕರಂದ್ಲಾಜೆ, ಕ್ಯಾಪ್ಟನ್‌ ಬೃಜೇಶ್‌ ಚೌಟ (ಬಂಟ).
ಒಬಿಸಿ : ಪಿ.ಸಿ.ಮೋಹನ್‌, ಕೋಟ ಶ್ರೀನಿವಾಸ ಪೂಜಾರಿ (ಬಿಲ್ಲವ), ಯದುವೀರ ಒಡೆಯರ್‌ (ಕ್ಷತ್ರಿಯ).
ಬ್ರಾಹ್ಮಣ : ಪ್ರಹ್ಲಾದ್‌ ಜೋಷಿ, ತೇಜಸ್ವಿ ಸೂರ್ಯ.

Advertisement

Udayavani is now on Telegram. Click here to join our channel and stay updated with the latest news.

Next