Advertisement

ಎಲ್‌ಜೆಪಿಗೆ ಲೈಂಗಿಕ ಕಿರುಕುಳದ ಸವಾಲು

12:58 AM Jun 18, 2021 | Team Udayavani |

ಪಟ್ನಾ/ಹೊಸದಿಲ್ಲಿ: ಲೋಕಜನಶಕ್ತಿ ಪಕ್ಷವನ್ನು ಹತೋಟಿ­ಯಲ್ಲಿ ಇರಿಸಿಕೊಳ್ಳುವ ಬಗ್ಗೆ ಚಿರಾಗ್‌ ಪಾಸ್ವಾನ್‌ ಮತ್ತು ಪಶುಪತಿ ಕುಮಾರ್‌ ಪರಸ್‌ ನಡುವೆ ಗುದ್ದಾಟದ ನಡುವೆಯೇ ಲೈಂಗಿಕ ಕಿರುಕುಳ ಪ್ರಕರಣದ ಅಂಶ ಬೆಳಕಿಗೆ ಬಂದಿದೆ.

Advertisement

ಸಮಷ್ಟಿಪುರದ ಸಂಸದ ಪ್ರಿನ್ಸ್‌ ರಾಜ್‌ ಮಹಿಳೆಯೊಬ್ಬರಿಗೆ ಮತ್ತು ಬರುವ ಔಷಧ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೊಸದಿಲ್ಲಿಯ ಕನ್ಹಾಟ್‌ಪ್ಲೇಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅದಕ್ಕೆ ಪ್ರತಿಯಾಗಿ ಸಂಸದ ಪ್ರಿನ್ಸ್‌ ರಾಜ್‌ ಕೂಡ ಮಹಿಳೆ ಸೇರಿದಂತೆ ಇಬ್ಬರ ವಿರುದ್ಧ 1 ಕೋಟಿ ರೂ. ಪಾವತಿ ಮಾಡಬೇಕು ಮತ್ತು ನಕಲಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಕ್ಕಿ ಹಾಕಿಸುವ ಬಗ್ಗೆ ಬೆದರಿಕೆಯೊಡ್ಡಿದ್ದಾರೆ ಎಂದು ದೂರು ನೀಡಿದ್ದಾರೆ. ಪೊಲೀಸರ ಜತೆಗಿನ ವಿಚಾರಣೆ ವೇಳೆ, ಮಹಿಳೆ ಪರಿಚಯ ಇತ್ತು ಎಂದು ಒಪ್ಪಿಕೊಂಡಿದ್ದಾರೆ.

ಜೂ.15ರಂದು ಮಹಿಳೆ ದೂರು ನೀಡಿದ ಬಳಿಕ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಿರಾಗ್‌ ಪಾಸ್ವಾನ್‌, ಪ್ರಿನ್ಸ್‌ ರಾಜ್‌ ಅವರಿಗೆ ಪೊಲೀಸರಿಗೆ ದೂರು ನೀಡುವಂತೆ ಸಲಹೆ ಮಾಡಿದ್ದಾಗಿ ಹೇಳಿದ್ದಾರೆ. ಮತ್ತೂಂದೆಡೆ, ಎಲ್‌ಜೆಪಿಯಿಂದ ಸಿಡಿದಿರುವ ಗುಂಪಿಗೆ ಸಂಸದ ಪಶುಪತಿ ಕುಮಾರ್‌ ಪರಸ್‌ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next