Advertisement

ಮೆಗಾ ಲೋಕ ಅದಾಲತ್‌: ಸಂಧಾನ ಮೂಲಕ 370 ಪ್ರಕರಣಗಳು ಇತ್ಯರ್ಥ

06:38 PM Dec 18, 2021 | Team Udayavani |

ರಬಕವಿ-ಬನಹಟ್ಟಿ : ರಾಜೀ ಸಂಧಾನ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಲೋಕ ಅದಾಲತ್ ಸಹಕಾರಿಯಾಗಲಿದೆ ಎಂದು ಬನಹಟ್ಟಿಯ ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶ ಕಿರಣಕುಮಾರ ವಡಗೇರಿ ತಿಳಿಸಿದರು.

Advertisement

ಶನಿವಾರ ಬನಹಟ್ಟಿಯ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಪ್ರಾಧಿಕಾರ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನ ಮೇರೆಗೆ ಲೋಕ ಅದಾಲತ್ ಆಯೋಜಿಸಲಾಗಿದೆ. ಅದಾಲತ್‌ನಲ್ಲಿ ಅತಿ ಹೆಚ್ಚು ಸಿವಿಲ್ ಪ್ರಕರಣಗಳಾದ ಆಸ್ತಿ, ಜಮೀನು, ಮನೆ ಮಾರಾಟ, ಪ್ರಮುಖವಾಗಿ ಚೆಕ್ ಬೌನ್ಸ್ಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಮೋಟಾರ ವಾಹನ ಅಪಘಾತ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ ಎಂದರು.

ಕ್ಷಕಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುತ್ತಿರುವದು ವಿಶೇಷವಾಗಿತ್ತು. ಹಿರಿಯ ದಿವಾಣಿ ನ್ಯಾಯಾಲಯದಲ್ಲಿ 150 ಪ್ರಕರಣಗಳ ಪೈಕಿ 70 ಪ್ರಕರಣಗಳು ರಾಜೀ ಸಂಧಾನವಾದರೆ, ದಿವಾಣಿ ನ್ಯಾಯಾಲಯದಲ್ಲಿ 315 ಪ್ರಕರಣಗಳಲ್ಲಿ 300 ಪ್ರಕರಣಗಳು ರಾಜೀ ಸಂಧಾನವಾಗಿರುವದು ವಿಶೇಷವಾಗಿತ್ತು.

2011-12 ರಿಂದ ಪ್ರಕರಣಗಳು ನಡೆಯುತ್ತಿದ್ದವು. ಅಂಥಹ ಪ್ರಕರಣಗಳಿಗೆ ರಾಜೀಯಾಗಿರುವದು ವಿಶೇಷ. ಅಲ್ಲದೆ ಕೋವಿಡ್‌ದಿಂದ ಜನತೆ ಸಮಸ್ಯೆ ಎದುರಿಸುತ್ತಿದ್ದು, ಇವೆಲ್ಲವುಗಳ ಸಮಸ್ಯೆಯಿಂದ ಕೆಲ ಪ್ರಕರಣಗಳಲ್ಲಿ ಮಾನವೀಯತೆ ಎದ್ದು ಕಾಣುತ್ತಿತ್ತು ಎಂದು ತಿಳಿಸಿದರು.

ಇಂದು ನಡೆದ ಅದಾಲತ್‌ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಹಕಾರಿ ಸಂಘಗಳಿಗೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣಗಳೇ ಕೇಳಿ ಬಂದು ಬಹುತೇಕ ಪ್ರಕರಣಗಳಿಗೆ ರಾಜೀ ಸಂಧಾನದ ಮೂಲಕ ಅದಾಲತ್‌ನ ಮಹತ್ವ ಸಾರುತ್ತಿದೆ ಎಂದು ನ್ಯಾಯಾಧೀಶ ಕಿರಣಕುಮಾರ ವಡಗೇರಿ ತಿಳಿಸಿದರು.

Advertisement

ನ್ಯಾಯಾಂಗ ಸಂಧಾನಕರಾಗಿ ಹಿರಿಯ ದಿವಾಣಿ ನ್ಯಾಯಾಧೀಶರಾದ ಕಿರಣಕುಮಾರ ವಡಗೇರಿ ಹಾಗು ದಿವಾಣಿ ನ್ಯಾಯಾಧೀಶೆ ಶುಷ್ಮಾ ಟಿ.ಸಿ. ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಸಿ. ಮಸಳಿ, ವಕೀಲರ ಸಂಘದ ಅಧ್ಯಕ್ಷ ಸಾಗರ ಕುಲಕರ್ಣಿ, ಕೆ.ಜಿ. ಸಾಲಗುಡೆ, ಸಾಗರ ಚವಜ, ಬಿ.ಎನ್. ಗುರವ, ರವೀಂದ್ರ ಸಂಪಗಾಂವಿ, ಸುಜಾತಾ ನಿಡೋಣಿ, ಅಬೀದ್ ಹಸನ್ ಗಾಡಬೋಲೆ, ಮುಕುಂದ ಕೋಪರ್ಡೆ, ಅಮುಲ್ ಬದಾಮಿಕರ, ಚನ್ನು ಮಾಲಾಪುರ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next