Advertisement

Lok Adalat; ರಬಕವಿ-ಬನಹಟ್ಟಿಯಲ್ಲಿ 472 ಪ್ರಕರಣಗಳು ಇತ್ಯರ್ಥ

07:19 PM Sep 09, 2023 | Team Udayavani |

ರಬಕವಿ-ಬನಹಟ್ಟಿ: ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಬೇಕಾದರೆ ವಕೀಲರು ಮತ್ತು ಕಕ್ಷಿದಾರರ ಸಹಕಾರ ಬಹಳಷ್ಟು ಮುಖ್ಯವಾಗಿದೆ. ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ಲೋಕ್ ಅದಾಲತ್ ಮೂಲಕ ಬಗೆ ಹರಿಸಿಕೊಂಡರೆ ಮುಂದಿನ ದಿನಗಳಲ್ಲಿ ಉತ್ತಮ ಸೌಹಾರ್ದ ಬಾಂಧವ್ಯವನ್ನು ಹೊಂದಬಹುದಾಗಿದೆ ಎಂದು ಸ್ಥಳೀಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಕಿರಣಕುಮಾರ ವಡಗೇರಿ ತಿಳಿಸಿದರು.

Advertisement

ಶನಿವಾರ ಇಲ್ಲಿನ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಹಿರಿಯ ಶ್ರೇಣಿಯ ಸಿವಿಲ್ ಮತ್ತು ಕಿರಿಯ ಶ್ರೇಣಿಯ ನ್ಯಾಯಾಲಯ ಒಟ್ಟು 672 ಪ್ರಕರಣಗಳಲ್ಲಿ 482 ಪ್ರಕರಣಗಳು ಇತ್ಯರ್ಥವಾಗಿದ್ದು, ರೂ. 1,74,58,248 ಪರಿಹಾರ ಧನವನ್ನು ವಿತರಣೆ ಮಾಡಲಾಯಿತು.

ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ಸುಶ್ಮ, ಟಿ.ಎಸ್. ಮಧ್ಯಸ್ಥಗಾರ ವಕೀಲರಾದ ಅಶ್ವಿನಿ ಹಾರೂಗೇರಿ, ಕಾಡೇಶ ನ್ಯಾಮಗೌಡ, ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಶ್ರೀನಿವಾಸ ಶೇಗುಣಶಿ, ಎಸ್.ಜಿ.ಸಲಬನ್ನವರ, ಎಸ್.ಎಂ. ಫಕೀರಪೂರ, ಮುಕುಂದ ಕೋಪರ್ಡೆ, ಶಿವಕುಮಾರ ಷಣ್ಮುಖ, ಆರ್.ಕೆ.ಪಾಟೀಲ, ಪಿ.ಜಿ.ಪಾಟೀಲ, ಬಿ.ಎಂ. ಲಾಳಕೆ, ಎಲ್.ಎಂ. ಬನಾಜ, ಡಿ.ಎಂ. ಬೋಳಗೊಂಡ, ಬಸವರಾಜ ಕುಂಬಾರ, ಧರ್ಮಟ್ಟಿ, ಬಕ್ಕನವರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next