Advertisement

Lok Adalat; ಉತ್ತರಕನ್ನಡ ಜಿಲ್ಲೆಯಲ್ಲಿ 27,555 ಪ್ರಕರಣ ಇತ್ಯರ್ಥ

08:36 PM Sep 09, 2023 | Team Udayavani |

ಕಾರವಾರ: ಜಿಲ್ಲೆಯಲ್ಲಿ ಲೋಕ್ ಅದಾಲತ್ ಯಶಸ್ವಿಯಾಗಿದೆ. ಜಿಲ್ಲೆಯ ಒಟ್ಟು 28 ನ್ಯಾಯಪೀಠಗಳಲ್ಲಿ ರಾಜಿ ಸಂಧಾನದ ಮೂಲಕ 27,555 ಪ್ರಕರಣ ಇತ್ಯರ್ಥವಾದವು. ಇದರಲ್ಲಿ 23,353 ವ್ಯಾಜ್ಯಪೂರ್ವ ಪ್ರಕರಣಗಳು, 22 ಮೋಟಾರವಾಹನ ಅಪಘಾತ ಪ್ರಕರಣಗಳು, ಸೇರಿವೆ ಎಂದು ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ಕಾರ್ಯದರ್ಶಿ ರೇಣುಕಾ ರಾಯ್ಕರ್ ತಿಳಿಸಿದ್ದಾರೆ.

Advertisement

ಇತರೆ ಕ್ರಿಮಿನಲ್ ಪ್ರಕರಣಗಳು 25,465 ಸಹ ಒಟ್ಟು ಪ್ರಕರಣಗಳಲ್ಲಿ ಸೇರಿವೆ. ಮೋಟಾರ್ ವಾಹನ ಪ್ರಕರಣಗಳಲ್ಲಿ ಬಾಧಿತರಿಗೆ 1,71,67,900 ರೂ.ಪರಿಹಾರ ನೀಡಲಾಗಿದೆ. ಬ್ಯಾಂಕ್ ಸಾಲ ಮರುಪಾವತಿ, ವಿವಿಧ ಪ್ರಕರಣಗಳಲ್ಲಿ ದಂಡ, ಕೆಲ ಪ್ರಕರಣಗಳಲ್ಲಿ ಪರಿಹಾರ, ಸೇರಿ 27 ಕೋಟಿ ರೂ.ಗಳಿಗೂ ಹೆಚ್ಚಿನ ಪರಿಹಾರ ವಿತರಿಸಲಾಗಿದೆ.

ಅಂತರ್ಜಾತಿ ವಿವಾಹ ಒಂದುಗೂಡಿಕೆ
ಹಳಿಯಾಳ ಸಿನೀಯರ್ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಲೋಕಾ ಅದಾಲತ್ ನಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಮಹಿಳೆ, ಲಿಂಗಾಯತ ಸಮಾಜದ ಪುರುಷ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿದ್ಯಾರ್ಹತೆ ವಿಷಯದಲ್ಲಿ ಭಿನ್ನಾಭಿಪ್ರಾಯ ಬಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು‌. ಭಾಗ್ಯಶ್ರೀ ಮತ್ತು ವೆಂಕಟೇಶ್ ಹೊನ್ನಿಕೇರಿಗೆ ಬುದ್ಧಿವಾದ ಹೇಳಿದ ನ್ಯಾಯಾಧೀಶೆ ನಾಗಮ್ಮ ಇಚ್ಚಂಗಿ, ನ್ಯಾಯಾಧೀಶ ದೇಶಭೂಷಣ ಕೌಜಲಗಿ ಜೋಡಿಯನ್ನು ಮತ್ತೆ ಒಂದು ಮಾಡಿದರು. ಇವರ ಪರ ವಕೀಲರಾದ ಅರಶಿಣಗೇರಿ, ರೇಣುಕಾ ಹಾಗೂ ವಕೀಲರಾದ ಜಯಾ ಡಿ. ನಾಯ್ಕ, ಗಡೆಪ್ಪನವರ, ಕವಿತಾ ಗಡೆಪ್ಪನವರ , ವಕೀಲರ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next