Advertisement
ಹಗರಿ ಕೃಷಿ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರ ವಿಜ್ಞಾನಿ ಡಾ| ಆನಂದ್‌ಕುಮಾರ್ ಮಾತನಾಡಿ, ತಾಲೂಕಿನ ಟಿ.ರಾಂಪುರ ಗ್ರಾಮದ ಹಗರಿ ದಡದಲ್ಲಿರುವ ಬಳ್ಳಾರಿ ಜಾಲಿ ಬೆಳೆದಿರುವ ಪ್ರದೇಶದಲ್ಲಿ ಮಿಡತೆಗಳು ಕಂಡುಬಂದಿದ್ದು, ಇವುಗಳನ್ನು ಪರಿಶೀಲಿಸಲಾಗಿ ಈ ಮಿಡತೆಗಳು ಆಫ್ರಿಕಾದ ಮರುಭೂಮಿಯಿಂದ ಬಂದಿರುವ ಮಿಡತೆಗಳಲ್ಲ, ಸ್ಥಳಿಯ ಮಿಡತೆಗಳಾಗಿದ್ದು, ಇವುಗಳು ವಾತಾವರಣ ತಂಪಾಗಿರುವುದರಿಂದ ಸಂತಾನೋತ್ಪತ್ತಿಯಲ್ಲಿ ತೊಡಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಿಡತೆಗಳು ಹೊರಬಂದಿರುವುದರಿಂದ ಗುಂಪು ಗುಂಪಾಗಿ ಕಾಣುತ್ತಿವೆ. ಆದರೆ ಈ ಮಿಡತೆಗಳು ರೈತರು ಬೆಳೆದ ಯಾವುದೇ ಬೆಳೆಗಳನ್ನು ತಿನ್ನುವುದಿಲ್ಲ. ಕೇವಲ ಬಳ್ಳಾರಿ ಜಾಲಿ ಗಿಡದ ಎಲೆಗಳನ್ನು ತಿನ್ನುತ್ತವೆ. ರೈತರ ಬೆಳೆಗೆ ಯಾವುದೇ ರೀತಿಯಲ್ಲಿ ಹಾನಿ ಉಂಟು ಮಾಡುವುದಿಲ್ಲ ಎಂದು ಮಾಹಿತಿ ನೀಡಿದರು.
Advertisement
ಮಿಡತೆ ಪ್ರತ್ಯಕ್ಷ: ಅಧಿಕಾರಿಗಳಿಂದ ಪರಿಶೀಲನೆ
07:41 AM Jun 05, 2020 | Suhan S |
Advertisement
Udayavani is now on Telegram. Click here to join our channel and stay updated with the latest news.