Advertisement

ಸಿಬಿಎಸ್‌ಇ ಶಾಲೆಗಳಲ್ಲಿನ್ನು ಪುಸ್ತಕ ಲಾಕರ್‌ ಕಡ್ಡಾಯ?

01:29 PM Apr 03, 2017 | Team Udayavani |

ಹೊಸದಿಲ್ಲಿ: ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಓದುವ ಮಕ್ಕಳಿಗೆ ಸಿಹಿ ಸುದ್ದಿ ಇದು! ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳು ಪುಸ್ತಕ ಇಡುವ ಲಾಕರ್‌ ಹೊಂದಿರುವುದನ್ನು ಕಡ್ಡಾಯಗೊಳಿಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮುಂದಾಗಿದೆ. ಹೀಗಾಗಿ ಮಕ್ಕಳು ಪ್ರತಿದಿನ ಎಲ್ಲ ಪುಸ್ತಕಗಳನ್ನು ಶಾಲೆಗೆ ಕೊಂಡೊಯ್ಯುವುದು ಅಥವಾ ಶಾಲೆಯಿಂದ ಮನೆಗೆ ಕೊಂಡೊಯ್ಯುವ ಸಂಕಷ್ಟಕ್ಕೆ ಬ್ರೇಕ್‌ ಬೀಳಲಿದೆ. ಸಿಬಿಎಸ್‌ಇ ಮಾನ್ಯತೆ ಹೊಂದಿರುವ ಶಾಲೆಗಳಿಗೂ ಈ ಕ್ರಮ ಅನ್ವಯವಾಗಲಿದೆ. ದೇಶದ ಅತೀ ದೊಡ್ಡ ಶಿಕ್ಷಣ ಮಂಡಳಿ ಎನಿಸಿಕೊಂಡಿರುವ ಸಿಬಿಎಸ್‌ಇಗೆ ಸೇರಿದ ಹಾಗೂ ಮಾನ್ಯತೆ ಪಡೆದಿರುವ 18,000 ಶಾಲೆಗಳಲ್ಲಿ ಈ ಯೋಜನೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರುವ ಸಿದ್ಧತೆ ನಡೆದಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ‘ದೇಶದ ನಾನಾ ಭಾಗಗಳಿಂದ ಸಾಕಷ್ಟು ಮಕ್ಕಳು ಮತ್ತು ಹೆತ್ತವರು ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳುವ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ. ಸಾಕಷ್ಟು ಮಂದಿ ಸಲಹೆ, ನಿರ್ದೇಶನ ನೀಡಿದ್ದಾರೆ. ಲಾಕರ್‌ ಸೌಲಭ್ಯಗಳ ಬಗ್ಗೆ ಹೆಚ್ಚಿನ ಒಲವು ವ್ಯಕ್ತಗೊಂಡಿದೆ. ಲಾಕರ್‌ಗಳಿಗಾಗಿ ಶಾಲೆಗಳು ಖರ್ಚು ಮಾಡಿದರೂ ಅದು ಬಾಳಿಕೆಗೆ ಬರುವಂಥದ್ದಾಗಿದೆ. ಹೀಗಾಗಿ ಯಾಕೆ ಈ ಸೌಲಭ್ಯ ಒದಗಿಸಬಾರದು ಎನ್ನುವ ಪ್ರಶ್ನೆ ವ್ಯಕ್ತಗೊಂಡಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next