ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೊಂಕಿನ ಪ್ರಮಾಣ ಕೆಲವು ದಿನಗಳಿಂದ ಏರಿಕೆಯಾಗುತ್ತಿರುವ ಕಾರಣದಿಂದ ಕೋವಿಡ್ ಸೋಂಕಿನ ಸಂಭಾವ್ಯ ಮೂರನೇ ಅಲೆಯ ಭೀತಿ ಹೆಚ್ಚಳವಾಗಿದೆ.
ಈ ನಡುವೆ ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಸರಣಿ ಟ್ವೀಟ್ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : ಸರ್ಕಾರ ಅನುಮತಿ ನೀಡುವವರೆಗೂ ಯಾವುದೇ ಗಣಿಗಾರಿಕೆಗೆ ಅವಕಾಶ ಇಲ್ಲ :ಎಸಿ ಶಿವಾನಂದಮೂರ್ತಿ
ಇನ್ನು, ಕೋವಿಡ್ ಕಾರಣದಿಂದ ರಾಜ್ಯದಲ್ಲಿ ಜಾರಿಗೆ ತಂದ ಲಾಕ್ ಡೌನ್ ನ ಕಾರಣದಿಂದ ಲಕ್ಷಾಂತರ ಮಂದಿ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಮತ್ತೆ ಲಾಕ್ ಡೌನ್ ಮರುಕಳಿಸದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.
Related Articles
ದಿನ ನಿತ್ಯ ಹತ್ತಿರ ಹತ್ತಿರ ಸುಮಾರು 2000 ಹೊಸ ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗುತ್ತಿವೆ. ಇದು ಮೂರನೇ ಅಲೆ ಆರಂಭವಾಗುವ ಮುನ್ಸೂಚನೆ. ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಬರೆದುಕೊಂಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಬಿಜೆಪಿಯ ಶಾಸಕರು ಸಚಿವ ಸಂಪುಟ ರಚನೆಯ ಬಗ್ಗೆ ಮಾತ್ರ ಯೋಚನೆ ಮಾಡುತ್ತಿದ್ದಾರೆ. ಉಳಿದದ್ದನ್ನು ಮರೆತು ಬಿಟ್ಟಿದ್ದಾರೆ. ದೆಹಲಿಗೆ ಮರಳಿ ಹೋಗುವ ಅಗತ್ಯವೆನಿತ್ತು..? ಸ್ಥಳೀಯ ಶಾಸಕರಾಗಿಲಿ, ಬಿಜೆಪಿ ಹೈಕಮಾಮಡ್ ಆಗಲಿ ಕರ್ನಾಟಕದ ಬಗ್ಗೆ ಯಾವ ಕಾಳಜಿಯನ್ನು ಹೊಂದಿಲ್ಲವೆಂದು ಅವರು ಕಿಡಿ ಕಾರಿದ್ದಾರೆ.
ರಾಜ್ಯದ ಬಿಜೆಪ ಸರ್ಕಾರ ರಾಜ್ಯಕ್ಕೆ ಮೂರನೇ ಅಲೆ ಬಂದಿದೆಯೇ ಇಲ್ಲವೇ ಎಂಬುವುದನ್ನು ಸ್ಪಷ್ಟಪಡಿಸಬೇಕು. ಕೇರಳ ಹಾಗೂ ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆಯನ್ನು ಏರ್ಪಡಿಸಬೇಕು. ಆರ್ ಟಿ ಪಿ ಸಿ ಆರ್ ನೆಗೆಟಿವ್ ವರದಿ ಹಾಗೂ ಲಸಿಕೆಯ ಎರಡು ಡೋಸ್ ಗಳನ್ನು ಪಡೆದವರನ್ನು ಮಾತ್ರ ರಾಜ್ಯಕ್ಕೆ ಬರುವುದಕ್ಕೆ ಬಿಡಬೇಕು ಎಂದಿದ್ದಾರೆ.
ಇದನ್ನೂ ಓದಿ : ಮಸ್ಕಿಯಲ್ಲೊಬ್ಬ ವಾನರ ಪ್ರೇಮಿ : ಮಸ್ಕಿ ಪಟ್ಟಣದಲ್ಲಿ ನಿತ್ಯವೂ ನಡೆಯುತ್ತಿರುವ ದೃಶ್ಯವಿದು