Advertisement

ಲಾಕ್‌ಡೌನ್‌ ಉಲ್ಲಂಘನೆ : ಮುಂಬಯಿಯಲ್ಲಿ 5,600 ಜನರ ವಿರುದ್ಧ ಪ್ರಕರಣ ದಾಖಲು

06:46 PM Apr 16, 2020 | Suhan S |

ಮುಂಬಯಿ, ಎ. 15: ಕೋವಿಡ್‌ -19 ಲಾಕ್‌ ಡೌನ್‌ ಅವಧಿಯಲ್ಲಿ ಮಾ. 20ರಿಂದ ಎ. 14ರವರೆಗೆ ನಿಷೇಧಿತ ಆದೇಶಗಳನ್ನು ಉಲ್ಲಂಘಿಸಿದ ಆರೋಪದಮೇಲೆ ಮುಂಬಯಿ ಪೊಲೀಸರು ಕನಿಷ್ಠ 3,131 ಅಪರಾಧಗಳನ್ನು ದಾಖಲಿಸಿದ್ದು, 5,600 ಜನರ ವಿರುದ್ಧ ಕೇಸು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಮಾ. 20 ರಿಂದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 188 (ಸಾರ್ವಜನಿಕ ಸೇವಕರ ಆದೇಶಕ್ಕೆ ಅಸಹಕಾರ) ಅಡಿಯಲ್ಲಿ 4,220 ಜನರನ್ನು ಬಂಧಿಸಲಾಗಿದೆ, ಆದರೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

Advertisement

ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಿದ ಅನಂತರ 1,130 ಕ್ಕೂ ಹೆಚ್ಚು ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದ್ದು, 259 ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ ಎಂದವರು ತಿಳಿಸಿದ್ದಾರೆ. ಲಾಕ್‌ ಡೌನ್‌ ಸಮಯದಲ್ಲಿ ದಾಖಲಾದ 3,131 ಅಪರಾಧಗಳಲ್ಲಿ 2,271 ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬಾಹಿರ ಸಭೆಗಾಗಿ ನೋಂದಾಯಿಸಲಾಗಿದ್ದು, 10 ಪ್ರಕರಣಗಳು ಕ್ವಾರೆಂಟೈನ್‌ ಕ್ರಮ ಉಲ್ಲಂಘನೆಗೆಸಂಬಂಧಿಸಿವೆ ಮತ್ತು 629 ಅಪರಾಧಗಳು ವಾಹನಗಳ ಅಕ್ರಮ ಸಂಚಾರಕ್ಕೆ ಸಂಬಂಧಿಸಿವೆ ಎಂದರು.

ಉಳಿದ  ಅಪರಾಧಗಳು ಲಾಕ್‌ ಡೌನ್‌ ಹೊರತಾಗಿಯೂಅಂಗಡಿಗಳು ಮತ್ತು ಸಂಸ್ಥೆಗಳನ್ನು ತೆರೆದಿರುವುದಕ್ಕೆ ಸಂಬಂಧಿಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.ಮುಂಬಯಿಯ ಪೂರ್ವ ಉಪನಗರಗಳಲ್ಲಿ 801ಅಪರಾಧಗಳೊಂದಿಗೆ ಅತಿ ಹೆಚ್ಚು ಪ್ರಕರಣಗಳುದಾಖಲಾಗಿವೆ, ಉತ್ತರ ಮುಂಬಯಿಯಲ್ಲಿ 790 ಅಪರಾಧಗಳಿವೆ ಎಂದು ಅಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next